ಬೇರಿನಾಗ್: ಎರಡನೇ ಮಹಾಯುದ್ಧ ಸೇರಿದಂತೆ ಮೂರು ಕದನಗಳಲ್ಲಿ ಭಾಗಿಯಾಗಿದ್ದ ನಿವೃತ್ತ ಮೇಜರ್, ಉತ್ತರಾಖಂಡ ಕಿಮ್ ಸಿಂಗ್ ಕರ್ಕಿ ಅವರು 100 ವರ್ಷಗಳನ್ನು ಪೂರೈಸಿದ್ದಾರೆ. ಈ ಶತಕದ ಸಂಭ್ರಮವನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಒಟ್ಟುಗೂಡಿ ಆಚರಿಸಿದ್ದಾರೆ.
ಉತ್ತರಾಖಂಡದ ಪಿಥೋರಗಢ್‌ನ ಬೇರಿನಾಗ್ ಬುಗಾಡ್ ಗ್ರಾಮದಲ್ಲಿ ವಾಸಿಸುತ್ತಿರುವ ಮೇಜರ್ ಕಿಮ್ ಸಿಂಗ್ ಕರ್ಕಿ 1922ರಲ್ಲಿ ಜನಿಸಿದ್ದರು. ಇಂದು ಗ್ರಾಮದಲ್ಲಿ ಸಾಮೂಹಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದವು.
ವಿಶ್ವ ಯುದ್ಧದಲ್ಲಿ ಭಾಗಿ: ಕಿಮ್ ಸಿಂಗ್ ಕರ್ಕಿ 2ನೇ ವಿಶ್ವ ಮಹಾಯುದ್ಧ, 1965ರ ಚೀನಾದೊಂದಿಗಿನ ಯುದ್ಧ, 1971ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧದಲ್ಲಿ ಭಾಗವಹಿಸಿದ್ದರು. ಭಾರತೀಯ ಸೇನೆಯ ಆರ್ಮಿ ಮೆಡಿಕಲ್ ಕಾರ್ಪ್ಸ್(ಎಎಂಸಿ)ಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
1944 ರಲ್ಲಿ ಎಎಂಸಿಗೆ ಸೇರಿದ ಕಿಮ್ ಸಿಂಗ್ 1976ರಲ್ಲಿ ನಿವೃತ್ತರಾದರು. ಮೊಮ್ಮಗ ಕುಲದೀಪ್ ಕರ್ಕಿ ಪ್ರಸ್ತುತ ಬಿಎಸ್‌ಎಫ್‌ನಲ್ಲಿ ಯೋಧರಾಗಿದ್ದಾರೆ.
ಇದನ್ನೂ ಓದಿ: ಏಕನಾಥ್ ಶಿಂದೆ ಮುಂದಿರುವ ಆಯ್ಕೆಗಳೇನು? ಮಹಾರಾಷ್ಟ್ರದಲ್ಲಿ ರಚನೆಯಾಗುತ್ತಾ ಹೊಸ ಸರ್ಕಾರ?