ETV Bharat / bharat

ಹೋಮ್​​ವರ್ಕ್​​ ಮಾಡದ ಮಗನ ಮೇಲೆ ಗುಂಡು ಹಾರಿಸಿದ ನಿವೃತ್ತ ಸೇನಾಧಿಕಾರಿ - ಈಟಿವಿ ಭಾರತ ಕರ್ನಾಟಕ

ಓದುವ ವಿಚಾರದಲ್ಲಿ ತಂದೆ-ಮಗನ ನಡುವೆ ವಾಗ್ವಾದ ಉಂಟಾಗಿದೆ. ಈ ವೇಳೆ ನಿವೃತ್ತ ಸೇನಾಧಿಕಾರಿ ತಂದೆ ಜನ್ಮ ನೀಡಿದ ಮಗನ ಮೇಲೆ ಗುಂಡು ಹಾರಿಸಿದ್ದಾರೆ.

Retired army man Fired on his son
Retired army man Fired on his son
author img

By

Published : Aug 19, 2022, 9:22 PM IST

ಗಾಂಧಿನಗರ(ಗುಜರಾತ್​​): ಶಾಲೆಯಲ್ಲಿ ನೀಡಿರುವ ಹೋಮ್​​​ವರ್ಕ್​ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಮಗನ ಮೇಲೆ ನಿವೃತ್ತ ಸೇನಾಧಿಕಾರಿ ಗುಂಡು ಹಾರಿಸಿರುವ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಓದುವ ಬದಲಾಗಿ ಹೆಚ್ಚಾಗಿ ಮೊಬೈಲ್​ ಬಳಕೆ ಮಾಡ್ತಿದ್ದರಿಂದ ರೋಸಿ ಹೋಗಿರುವ ತಂದೆ ಈ ರೀತಿಯಾಗಿ ನಡೆದುಕೊಂಡಿದ್ದಾನೆಂದು ಹೇಳಲಾಗ್ತಿದೆ. ಕಳೆದ ಸೋಮವಾರ ಈ ಘಟನೆ ನಡೆದಿದೆ.

ನಿವೃತ್ತ ಸೇನಾಧಿಕಾರಿ ಧರ್ಮೇಂದ್ರ ಓಂಪ್ರಕಾಶ್​​ ಕಾಮ್ರೇಜ್​​ವಾವ್​ನಲ್ಲಿ ವಾಸವಾಗಿದ್ದಾರೆ. ಇವರ ಮಗ 9ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದಾನೆ. ಅಧ್ಯಯನ ಮಾಡುವ ಬದಲು ಕೈಯಲ್ಲಿ ಮೊಬೈಲ್​ ಹಿಡಿದುಕೊಂಡು ಕುಳಿತಿದ್ದನು. ಇದರಿಂದ ಮಗನ ಮೇಲೆ ಗದರಿದ್ದಾನೆ. ತಂದೆ ಗದರಿಸಿದ್ದಕ್ಕಾಗಿ ಕೋಪಗೊಂಡಿರುವ ಮಗ ವೈಪರ್​​ನಿಂದ ಹೊಡೆದಿದ್ದಾನೆ. ಇದರಿಂದ ಆಕ್ರೋಶಗೊಂಡಿರುವ ತಂದೆ ಲೈಸನ್ಸ್​ ಆಧಾರಿಕ ರಿವಾಲ್ವರ್​​ನಿಂದ ಮಗನ ಮೇಲೆ ಗುಂಡು ಹಾರಿಸಿದ್ದಾನೆ. ಹೀಗಾಗಿ, ಆತನ ಬಲಗೈ ಗಾಯಗೊಂಡಿದೆ. ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೂಲತಃ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯವರಾದ ನಿವೃತ್ತ ಸೇನಾಧಿಕಾರಿ ಧರ್ಮೇಂದ್ರ ಓಂಪ್ರಕಾಶ್​​ ಸದ್ಯ ತಮ್ಮ ಪತ್ನಿ ಸಂಗೀತಾಬೆನ್​, ಮಗ ಹಾಗೂ ಮಗಳೊಂದಿಗೆ ಗುಜರಾತ್​ನಲ್ಲಿ ವಾಸವಾಗಿದ್ದಾರೆ. ನಿವೃತ್ತ ಸೇನಾಧಿಕಾರಿ ಸದ್ಯ ಸೂರತ್​​​ನಲ್ಲಿ ಪಿಯೂಷ್​ಭಾಯ್​ ಎಂಬುವವರ ಅಂಗರಕ್ಷಕನಾಗಿ ಕೆಲಸ ಮಾಡ್ತಿದ್ದಾನೆ. ಕಳೆದ ಸೋಮವಾರ ಕೆಲಸ ಮುಗಿಸಿ ರಾತ್ರಿ ಮನೆಗೆ ವಾಪಸ್​ ಆಗಿದ್ದಾರೆ. ಈ ವೇಳೆ ಮಗ ಮೊಬೈಲ್ ನೋಡುತ್ತ ಕುಳಿತಿದ್ದನು. ಈ ವಿಚಾರದಲ್ಲಿ ಗದರಿಸಿದ್ದು, ಮೊಬೈಲ್ ಫೋನ್ ಹೆಚ್ಚು ಬಳಸುವ ಬದಲು, ಓದಿನ ಕಡೆ ಗಮನ ಹರಿಸುವಂತೆ ಹೇಳಿದ್ದಾರೆ.

ಇದನ್ನೂ ಓದಿ: ಸಂಬಳ ಕೇಳಲು ಬಂದ ನೌಕರನ ಮೇಲೆ ಕೋಪ: ಮಗನ ಮೇಲೆ ಗುಂಡು ಹಾರಿಸಿದ ಕೋಪಿಷ್ಟ ತಂದೆ..!

ಪ್ರತಿದಿನ ಅಧ್ಯಯನದ ವಿಚಾರವಾಗಿ ಬೈಯುತ್ತಿದ್ದರಿಂದ ಕೋಪಗೊಂಡ ಮಗ ರಾಜ್​ಕುಮಾರ್​ ತಂದೆಯ ಮೇಲೆ ವೈಪರ್​ನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ತಂದೆ ಆತನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಕೇಳಿರುವ ಪಕ್ಕದ ಮನೆಯ ನಿವಾಸಿಗಳು ಅಲ್ಲಿಗೆ ಓಡಿ ಬಂದಿದ್ದಾರೆ. ಜೊತೆಗೆ ಮಧ್ಯಪ್ರವೇಶ ಮಾಡಿರುವ ವ್ಯಕ್ತಿಯೋರ್ವ ಧರ್ಮೇಂದ್ರ ಅವರ ಕೈಯಲ್ಲಿದ್ದ ರಿವಾಲ್ವರ್​ ಕಸಿದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಆ್ಯಂಬುಲೆನ್ಸ್​​​ನಲ್ಲಿ ಮಗನನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕಾಮ್ರೇಜ್​​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಧರ್ಮೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 307 25 (1) ಮತ್ತು 271 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.