ನಿವಾರಿ(ಮಧ್ಯಪ್ರದೇಶ): ಮಧ್ಯಪ್ರದೇಶದ ಪೃಥ್ವಿಪುರ ಪ್ರದೇಶದ ಸೇತುಪುರಬರ ಗ್ರಾಮದಲ್ಲಿ 3 ವರ್ಷದ ಮಗು ತೆರೆದ ಕೊಳವೆ ಬಾವಿ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಬುಧವಾರ ಬೆಳಗ್ಗೆ ಈ ಘಟನೆ ನಡೆದಿತ್ತು. ಸದ್ಯ ಮಗುವಿಗಾಗಿ ರಕ್ಷಣಾ ಕಾರ್ಯ ಮುಂದುವರೆದಿದ್ದು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಸೇನೆಯ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
-
Madhya Pradesh: Rescue operations continue to save a 3-year old boy, who fell into an open borewell yesterday morning in Niwari district.
— ANI (@ANI) November 5, 2020 " class="align-text-top noRightClick twitterSection" data="
Latest visuals of joint rescue operation from Setupura Village https://t.co/zmMOWZIvkr pic.twitter.com/Zihh9Es6M5
">Madhya Pradesh: Rescue operations continue to save a 3-year old boy, who fell into an open borewell yesterday morning in Niwari district.
— ANI (@ANI) November 5, 2020
Latest visuals of joint rescue operation from Setupura Village https://t.co/zmMOWZIvkr pic.twitter.com/Zihh9Es6M5Madhya Pradesh: Rescue operations continue to save a 3-year old boy, who fell into an open borewell yesterday morning in Niwari district.
— ANI (@ANI) November 5, 2020
Latest visuals of joint rescue operation from Setupura Village https://t.co/zmMOWZIvkr pic.twitter.com/Zihh9Es6M5
"ಎಸ್‌ಡಿಆರ್‌ಎಫ್, ಸೇನೆ ಮತ್ತು ಇತರರಿಂದ ಎಲ್ಲ ಸಂಪನ್ಮೂಲಗಳನ್ನು ಪಡೆದುಕೊಂಡಿದ್ದೇವೆ. ಮುಂದಿನ ಎರಡು - ಮೂರು ಗಂಟೆಗಳಲ್ಲಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ" ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನಿವಾರಿ ಪ್ರತಿಭಾ ತ್ರಿಪಾಠಿ ಹೇಳಿದ್ದಾರೆ.
"ಬೋರ್‌ವೆಲ್‌ನಲ್ಲಿ ಬಿದ್ದ ಪ್ರಹ್ಲಾದ್‌ನನ್ನು ರಕ್ಷಿಸಲು ಸೇನೆಯು ಸ್ಥಳೀಯ ಆಡಳಿತದೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಮಗುವನ್ನು ರಕ್ಷಣೆ ಮಾಡುವ ವಿಶ್ವಾಸವಿದೆ. ದೇವರು ಮಗುವಿಗೆ ದೀರ್ಘಾಯುಷ್ಯ ನೀಡಲಿ. ಎಲ್ಲರೂ ಮಗುವಿಗಾಗಿ ಪ್ರಾರ್ಥಿಸೋಣ" ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದಾರೆ.