ETV Bharat / bharat

ಉತ್ತರಕಾಶಿ ಹಿಮಪಾತ ದುರಂತ: ಸಾವಿನ ಸಂಖ್ಯೆ 26ಕ್ಕೆ ಏರಿಕೆ.. ಮುಂದುವರೆದ ರಕ್ಷಣಾ ಕಾರ್ಯ - ನೆಹರೂ ಪರ್ವತಾರೋಹಣ ಸಂಸ್ಥೆ

ಉತ್ತರಾಖಂಡದ ಉತ್ತರಕಾಶಿಯಲ್ಲಿ ಹಿಮಪಾತ ದುರಂತದಲ್ಲಿ ಒಟ್ಟಾರೆ ಮೃತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

rescue-operation-continues-in-search-of-missing-climbers-after-avalanche-in-uttarkashi
ಉತ್ತರಕಾಶಿ ಹಿಮಪಾತ ದುರಂತ: ಸಾವಿನ ಸಂಖ್ಯೆ 26ಕ್ಕೆ ಏರಿಕೆ... ಮುಂದುವರೆದ ರಕ್ಷಣಾ ಕಾರ್ಯ
author img

By

Published : Oct 7, 2022, 4:09 PM IST

ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಗಡಿ ಜಿಲ್ಲೆ ಉತ್ತರಕಾಶಿಯಲ್ಲಿ ಹಿಮಪಾತ ದುರಂತಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿಯವರೆಗೆ ಒಟ್ಟಾರೆ 26 ಜನ ಪರ್ವತಾರೋಹಿಗಳ ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಉಳಿದವರಿಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ.

ಉತ್ತರಕಾಶಿ ಜಿಲ್ಲೆಯ ದ್ರೌಪದಿಯ ದಂಡ-2 ಪ್ರದೇಶಕ್ಕೆ ಅಕ್ಟೋಬರ್​ 4ರಂದು ನೆಹರೂ ಪರ್ವತಾರೋಹಣ ಸಂಸ್ಥೆಯ 40 ಜನ ಪರ್ವತಾರೋಹಿಗಳ ತಂಡ ತೆರಳಿತ್ತು. ಈ ವೇಳೆ, ಹಿಮಕುಸಿತ ಉಂಟಾಗಿ ಪರ್ವತಾರೋಹಿಗಳು ಸಿಲುಕಿದ್ದರು. ಮೊದಲ ದಿನವೇ 10 ಜನರ ಮೃತಪಟ್ಟಿದ್ದರು. ಆದರೆ, ಪ್ರತಿಕೂಲ ಹವಾಮಾನ ಹಾಗೂ ಹಿಮಪಾತದ ಬಿರುಕುಗಳಲ್ಲಿ ಪರ್ವತಾರೋಹಿಗಳು ಸಿಲುಕಿರುವ ಕಾರಣ ರಕ್ಷಣಾ ಕಾರ್ಯಕ್ಕೆ ತೊಂದರೆ ಉಂಟಾಗಿದೆ.

rescue-operation-continues-in-search-of-missing-climbers-after-avalanche-in-uttarkashi
ಉತ್ತರಕಾಶಿ ಹಿಮಪಾತ ದುರಂತ: ಸಾವಿನ ಸಂಖ್ಯೆ 26ಕ್ಕೆ ಏರಿಕೆ

ಗುರುವಾರದವರೆಗೆ ಒಟ್ಟು 16 ಶವಗಳನ್ನು ಹೊರತೆಗೆಯಲಾಗಿತ್ತು. ಇದರಲ್ಲಿ ಇಬ್ಬರು ತರಬೇತುದಾರರು ಮತ್ತು 14 ಪ್ರಶಿಕ್ಷಣಾರ್ಥಿಗಳು ಸೇರಿದ್ದರು. ಇಂದು ಶುಕ್ರವಾರ ಇನ್ನೂ 7 ಪರ್ವತಾರೋಹಿಗಳ ಮೃತದೇಹಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟಾರೆ ಒಟ್ಟಾರೆ ಸಾವಿನ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

30 ಜನರ ತಂಡದಿಂದ ರಕ್ಷಣಾ ಕಾರ್ಯ: ಹಿಮಕುಸಿತ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಒಟ್ಟು 26 ಮೃತದೇಹಗಳನ್ನು ಹೊರತೆಗೆಯಲಾಗಿದೆ.ಇಂದು ಸುಧಾರಿತ ಲಘು ಹೆಲಿಕಾಪ್ಟರ್ ಮೂಲಕ ಮೃತದೇಹಗಳನ್ನು ಮೌಳಿ ಹೆಲಿಪ್ಯಾಡ್​ಗೆ ತರಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.

ಅಲ್ಲದೇ, ರಕ್ಷಣಾ ಕಾರ್ಯಕ್ಕೆ 30 ಜನರ ತಂಡವನ್ನು ನಿಯೋಜಿಸಲಾಗಿದೆ. ಐಟಿಬಿಪಿ, ನೆಹರು ಪರ್ವತಾರೋಹಣ ಸಂಸ್ಥೆ, ವಾಯುಸೇನೆ, ಸೇನೆ, ಎಸ್‌ಡಿಆರ್‌ಎಫ್ ಹೀಗೆ ವಿವಿಧ ತಂಡಗಳ ಒಟ್ಟು 30 ಜನ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಿಮಪಾತ ದುರಂತ: 7 ಪರ್ವತಾರೋಹಿಗಳ ದುರ್ಮರಣ, ಇನ್ನೂ 25 ಜನರು ನಾಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.