ETV Bharat / bharat

ಪ್ರೇಮಿಗಳನ್ನು ಒಂದು ಮಾಡಿದ ಜಾರ್ಖಂಡ್​ ಕೋರ್ಟ್​.. ಒಟ್ಟಿಗೆ ಬದುಕಲು ಕೋರಿದ್ದ ಅರ್ಜಿಗೆ ಅಸ್ತು - ಒಟ್ಟಿಗೆ ಬದುಕಲು ಕೋರಿ ಸಲ್ಲಿಸಿದ್ದ ಅರ್ಜಿ

ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಒಟ್ಟಿಗೆ ಬದುಕಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್​ ಹೈಕೋರ್ಟ್​ ಪುರಸ್ಕರಿಸಿ ಯುವಕನೊಂದಿಗೆ ಯುವತಿ ಜೀವಿಸಲು ಅವಕಾಶ ಮಾಡಿ ಕೊಟ್ಟಿದೆ.

requested-from-high-court
ಒಟ್ಟಿಗೆ ಬದುಕಲು ಕೋರಿದ್ದ ಅರ್ಜಿಗೆ ಅಸ್ತು
author img

By

Published : Sep 12, 2022, 11:04 PM IST

ರಾಂಚಿ: ಕುಟುಂಬಸ್ಥರ ವಿರೋಧದ ನಡುವೆಯೂ ಪ್ರಿಯಕರನೊಂದಿಗೆ ಬಾಳಲು ಇಚ್ಚಿಸಿದ ಯುವತಿಗೆ ಜಾರ್ಖಂಡ್​ ಹೈಕೋರ್ಟ್​ ಅಸ್ತು ಎಂದಿದೆ. ಆಕೆ ಪ್ರೀತಿಸುತ್ತಿರುವ ಯುವಕನೊಂದಿಗೆ ಬದುಕುವ ಹಕ್ಕಿದೆ ಎಂದು ಹೇಳಿದೆ.

ಜಾರ್ಖಂಡ್​ನ ಯುವಕನೊಬ್ಬ ತನ್ನಿಂದ ಪ್ರಿಯತಮೆಯನ್ನು ಆಕೆಯ ಕುಟುಂಬಸ್ಥರು ದೂರ ಮಾಡಿದ್ದಾರೆ. ಆಕೆಯನ್ನು ನನ್ನೊಂದಿಗೆ ಬದುಕಲು ಬಿಡಿ ಎಂದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್​, ವಯಸ್ಕ ಯುವತಿ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಹೀಗಾಗಿ ಆಕೆ ತನ್ನ ಪ್ರಿಯಕರನೊಂದಿಗೆ ಜೀವಿಸಲು ಅನುವು ಮಾಡಿಕೊಡಬೇಕು ಎಂದು ಆದೇಶಿಸಿದೆ.

ಕುಟುಂಬಸ್ಥರ ವಿರೋಧದಿಂದ ಬಹಳ ದಿನಗಳಿಂದ ದೂರ ಇದ್ದ ಪ್ರೇಮಿಗಳು ಕೋರ್ಟ್​ನ ಮಧ್ಯಸ್ಥಿಕೆಯಲ್ಲಿ ಭೇಟಿಯಾಗಿದ್ದಲ್ಲದೇ, ಒಟ್ಟಿಗೆ ಬಾಳಲು ಅವಕಾಶ ಪಡೆದರು. ಇಬ್ಬರಿಗೂ ಭದ್ರತೆ ಒದಗಿಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ನ್ಯಾಯಾಲಯ ಸೂಚಿಸಿದೆ.

ಪ್ರಕರಣವೇನು?: ಪ್ರೇಮಿ ಪ್ರತಾಪ್ ಎಕ್ಕಾ ಎನ್ನುವವರು ತನ್ನ ಪ್ರಿಯತಮೆ ಕಾಣಿಯಾಗಿದ್ದಾಳೆ ಎಂದು ಜಾರ್ಖಂಡ್ ಹೈಕೋರ್ಟ್​​​ನಲ್ಲಿ ಹೆಬಿಯಸ್​ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಆಕೆಯ ಜೊತೆ ಬದುಕಲು ಬಯಸಿ, ಅವಳನ್ನು ಮದುವೆಯಾಗಲು ಇಚ್ಚಿಸಿದ್ದರು.

ಆದರೆ, ಹುಡುಗಿಯ ಮನೆಯವರು ಒಪ್ಪುತ್ತಿಲ್ಲ. ಕುಟುಂಬಸ್ಥರು ಆಕೆಯನ್ನು ಭೇಟಿಯಾಗಲು ಬಿಡದೇ ಬಲವಂತವಾಗಿ ತಮ್ಮ ಮನೆಯಲ್ಲಿಯೇ ಕೂಡ ಹಾಕಿದ್ದಾರೆ. ಮೊಬೈಲ್​ನಲ್ಲಿ ಮಾತನಾಡಲು ಬಿಡುತ್ತಿಲ್ಲ. ಇಬ್ಬರೂ ವಯಸ್ಕರಾದ ಕಾರಣ ತಮ್ಮನ್ನು ಒಂದು ಮಾಡಬೇಕು ಎಂದು ಕೋರಿದ್ದರು.

ಓದಿ: ಬಾಲಕನೊಬ್ಬನ ಲಿಂಗಪರಿವರ್ತನೆ..ವೈದ್ಯರ ವಿರುದ್ಧದ ಪ್ರಕರಣ ರದ್ದು ಮಾಡಲು ಹೈಕೋರ್ಟ್​ ನಿರಾಕರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.