ETV Bharat / bharat

ಬಿಜೆಪಿ ತೆಲಂಗಾಣ ಘಟಕ ಅಧ್ಯಕ್ಷ ಬಂಡಿ ಸಂಜಯ್ ಕೊಲೆ ಯತ್ನ ಸುಳ್ಳು ಸುದ್ದಿ: ಹೈದರಾಬಾದ್ ಪೊಲೀಸರ ಸ್ಪಷ್ಟನೆ

ಬಿಜೆಪಿ ತೆಲಂಗಾಣ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿದೆ ಎಂಬ ವರದಿಗಳನ್ನು ಕೇಂದ್ರ ಹೈದರಾಬಾದ್ ಜಂಟಿ ಪೊಲೀಸ್ ಆಯುಕ್ತ ಪಿ.ವಿಶ್ವಪ್ರಸಾದ್ ನಿರಾಕರಿಸಿದ್ದಾರೆ. ಎರಡು ಗುಂಪುಗಳ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ಅವರ ಕಾರಿನ ಗಾಜನ್ನು ಒಡೆಯಲಾಗಿತ್ತು. ಆದರೆ ಈ ವೇಳೆ ಬಂಡಿ ಸಂಜಯ್ ಸ್ಥಳಾಂತರ ಮಾಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

Reports of attempt to murder BJP leader Bandi Sanjay baseless: Hyderabad Police
ಬಿಜೆಪಿ ತೆಲಂಗಾಣ ಘಟಕ ಅಧ್ಯಕ್ಷ ಬಂಡಿ ಸಂಜಯ್
author img

By

Published : Dec 1, 2020, 7:59 AM IST

ಹೈದರಾಬಾದ್ (ತೆಲಂಗಾಣ): ಬಿಜೆಪಿ ತೆಲಂಗಾಣ ಘಟಕದ ಬಂಡಿ ಸಂಜಯ್ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿದೆ ಎಂಬ ವರದಿಯನ್ನು ಹೈದರಾಬಾದ್ ಜಂಟಿ ಪೊಲೀಸ್ ಆಯುಕ್ತ ಪಿ.ವಿಶ್ವಪ್ರಸಾದ್ ತಳ್ಳಿಹಾಕಿದ್ದಾರೆ. ಇದೊಂದು ಸುಳ್ಳು ಸುದ್ದಿ, ಕೆಲವು ಮಾಧ್ಯಮಗಳು ಆಧಾರರಹಿತವಾಗಿ ವದಂತಿ ಹರಡುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಕೆಲವು ಟಿವಿ ಚಾನಲ್‌ಗಳು ಬಂಡಿ ಸಂಜಯ್ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಹರಡಿಸಿದ್ದಾರೆ. ಈ ಮಾಹಿತಿ ತಪ್ಪಾಗಿದೆ. ದಯವಿಟ್ಟು ಇಂತಹ ವದಂತಿಗಳನ್ನು ನಂಬಬೇಡಿ’ ಎಂದು ವಿಶ್ವಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಎರಡು ರಾಜಕೀಯ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕಾರಿನ ಗಾಜಿಗೆ ಹಾನಿಯಾನಿಗೆ. ಕೇಂದ್ರ ವಲಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ರಾಮ್​​​ಗೋಪಾಲ್ ಪೇಟೆ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ಥಳದಲ್ಲಿದ್ದ ಬಂಡಿ ಸಂಜಯ್​​​ ಅವರನ್ನು ಅಲ್ಲಿಂದ ತೆರಳುವಂತೆ ವಿನಂತಿಸಿದ್ದಾರೆ. ಆದರೆ ಅವರ ಕಾರಿಗೆ ಕೆಲವರು ಅಡ್ಡಗಟ್ಟಿ ಕಿಟಕಿ ಗಾಜನ್ನು ಕೈಯಿಂದ ಪುಡಿ ಮಾಡಿದ್ದರು. ಈ ವೇಳೆ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಗಿತ್ತು ಎಂದು ಜಂಟಿ ಪೊಲೀಸ್​ ಆಯುಕ್ತರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.