ಅಮೃತಸರ್(ಪಂಜಾಬ್): ಗೃಹಿಣಿಯಾಗಿ ಕೆಲಸ ಮಾಡ್ತಿದ್ದ ಮಹಿಳೆಯೊಬ್ಬಳು 100 ರೂ. ನೀಡಿ ಟಿಕೆಟ್ ಮಾಡಿದ್ದು, ಇದೀಗ ಆಕೆಗೆ ಬಂಪರ್ ಹೊಡೆದಿದೆ. ಬರೋಬ್ಬರಿ 1 ಕೋಟಿ ರೂ. ಲಾಟರಿ ಹೊಡೆದಿದ್ದಾಳೆ.
ಪಂಜಾಬ್ನ ಅಮೃತಸರ್ ವಾಸಿಯಾಗಿರುವ ರೇಣು ಚೌಹಾಣ್ ಈ ಲಾಟರಿ ಪಡೆದುಕೊಂಡಿರುವ ಗೃಹಿಣಿ. ಇದಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಮಾಹಿತಿ ಹೊರಡಿಸಿದ್ದು, ಟಿಕೆಟ್ ಜತೆಗೆ ನಿರ್ಧರಿಸಿದ ದಾಖಲೆ ನೀಡಿ ಹಣ ಪಡೆದುಕೊಳ್ಳುವಂತೆ ರಾಜ್ಯ ಲಾಟರಿ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಸ್ಕೂಟಿ ಓಡಿಸಲು ಹೋಗಿ ಆಯ ತಪ್ಪಿದ ಮಮತಾ.. ಮುಂದೇನಾಯ್ತು ವಿಡಿಯೋ ನೋಡಿ!
ಇದಕ್ಕೆ ಸಂಬಂಧಿಸಿದಂತೆ ಮಾತಮಾಡಿರುವ ಮಹಿಳೆ, ದೇವರ ಆಶೀರ್ವಾದದಿಂದ ತಾವು ಈ ಹಣ ಗೆದ್ದಿದ್ದು, ಮಧ್ಯಮ ವರ್ಗದವರಾದ ನಮಗೆ ದೊಡ್ಡ ಪರಿಹಾರ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ರೇಣು ಚೌಹಾಣ್ ಗಂಡ ಅಮೃತಸರದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದು, ಬರುವ ದಿನಗಳಲ್ಲಿ ಸುಗಮ ಜೀವನ ನಡೆಸಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ. ರೇಣು ಚೌಹಾಣ್ ಪಡೆದುಕೊಂಡಿದ್ದ ಟಿಕೆಟ್ ನಂಬರ್ ಡಿ-12228 ಆಗಿದ್ದು, ಶೀಘ್ರದಲ್ಲೇ ಅವರ ಖಾತೆಗೆ ಹಣ ಜಮಾವಣೆ ಮಾಡಲಾಗುವುದು ಎಂದಿದ್ದಾರೆ.