ETV Bharat / bharat

ಹೆಂಡತಿ ಇಸ್ಲಾಂ ಧರ್ಮಕ್ಕೆ ಸೇರಿದ್ದಕ್ಕೆ ಗಂಡನನ್ನ ಪಕ್ಷದಿಂದ ಕಿತ್ತೆಸೆಯಿತಾ ಸಿಪಿಎಂ? - ಕೇರಳ

ಪತ್ನಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿ, ಬಳಿಕ ನನ್ನನ್ನು ಸಿಪಿಎಂ ಪಕ್ಷದಿಂದ ಹೊರಹಾಕಲಾಗಿದೆ ಎಂದು ಪಿ. ಟಿ. ಗಿಲ್ಬರ್ಟ್​ ಆರೋಪಿಸಿದ್ದಾರೆ.

CPM
ಸಿಪಿಎಂ
author img

By

Published : Jun 26, 2021, 7:30 AM IST

ತಿರುವನಂತಪುರಂ (ಕೇರಳ): ನನ್ನ ಪತ್ನಿ ಇಸ್ಲಾಂ ಧರ್ಮಕ್ಕೆ ಮತಾಂತರ ಆದ ಬಳಿಕ ನನ್ನನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್​​ವಾದಿ​) ದಿಂದ ಕಿತ್ತೊಗೆಯಲಾಗಿದೆ ಎಂದು ಸಿಪಿಎಂ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸಿಪಿಎಂ, ಪಕ್ಷ-ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಇವರನ್ನು ತೆಗೆದುಹಾಕಲಾಗಿದೆ ಎಂದು ಹೇಳಿದೆ.

'ಬಲವಂತದ ಮತಾಂತರ'

ನಾನು ಇಲ್ಲದ ವೇಳೆಯಲ್ಲಿ ಪಕ್ಷದ ಇಬ್ಬರು ವ್ಯಕ್ತಿಗಳು ನನ್ನ ಹೆಂಡತಿಯನ್ನು ಕರೆಯಿಸಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಬಲವಂತ ಮಾಡಿದ್ದಾರೆ. ಅವಳು ಜೂನ್​ 9 ರಂದು ಮನೆಬಿಟ್ಟು ಹೋಗಿದ್ದು, ಕಾಣೆಯಾಗಿರುವ ಬಗ್ಗೆ ಸಿಪಿಎಂ ಮುಖಂಡರ ಬಳಿ ಹೇಳಿದರೆ ಯಾರೂ ಸಹಾಯಕ್ಕೆ ಬಂದಿಲ್ಲ. ಅಲ್ಲದೇ ನನ್ನನ್ನು ದೂರು ದಾಖಲಿಸಲು ಪೊಲೀಸ್​ ಠಾಣೆಗೂ ಹೋಗಲು ಬಿಟ್ಟಿಲ್ಲ. ನನ್ನನ್ನು ಪಕ್ಷದಿಂದ ತೆಗೆದು ಹಾಕಿರುವ ಬಗ್ಗೆ ಕೂಡ ಪಕ್ಷದ ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಗೊತ್ತಾಯಿತು ಎಂದು ಮಲ್ಲಪುರಂ ಜಿಲ್ಲೆಯ ಸಿಪಿಎಂ ಸದಸ್ಯ ಪಿ ಟಿ ಗಿಲ್ಬರ್ಟ್​ ಗಂಭೀರ ಆರೋಪ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಪಿಎಂ ಮಲಪ್ಪುರಂ ಜಿಲ್ಲಾ ಸಮಿತಿ, ಆತನ ಅನುಚಿತ ವರ್ತನೆ, ಪಕ್ಷ-ವಿರೋಧಿ ಚಟುವಟಿಕೆಯಿಂದಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಆತನ ಆರೋಪಗಳೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಸತ್ಯವೇ ಬೇರೆಯಂತೆ..

ಪೊಲೀಸರು ಹೇಳುವ ಪ್ರಕಾರ, ಇದೊಂದು ನಕಲಿ ದೂರು ಆಗಿದ್ದು, ಗಿಲ್ಬರ್ಟ್ ಅವರ ಹೆಂಡತಿಯ ಸಹೋದರಿಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಮಹಿಳೆ ಜೊತೆ ಗಿಲ್ಬರ್ಟ್ ವಿವಾಹೇತರ ಸಂಬಂಧ ಹೊಂದಿದ್ದು, 13 ವರ್ಷದ ಮಗ ಕೂಡ ಇದ್ದಾನೆ. ಜೂನ್ 9 ರಂದು ಆಕೆ ತನ್ನ ಮನೆಯಿಂದ ಹೊರಬಂದ ನಂತರ ಗಿಲ್ಬರ್ಟ್ ಪೊಲೀಸರಿಗೆ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾನೆ. ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸ್ವಇಚ್ಛೆಯಿಂದಲೇ ಮತಾಂತರಗೊಂಡಿರುವುದಾಗಿ ಆಕೆ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.