ETV Bharat / bharat

ಜಿ20 ದೇಶಗಳ ಪ್ರಸ್ತುತ ಆರ್ಥಿಕತೆಗೆ ರೆಡ್ಯೂಸ್ ರಿಯೂಸ್ ರಿಸೈಕಲ್ ಎನರ್ಜಿ ನೀತಿ ಅಗತ್ಯ: ಪ್ರಹ್ಲಾದ್ ಜೋಶಿ

ಬೆಂಗಳೂರಿನಲ್ಲಿ ಜಿ20 ರಾಷ್ಟ್ರಗಳ ಪ್ರಥಮ ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ ಸಭೆ- ಪರಿಸರಕ್ಕೆ ಹಾನಿ ಮಾಡದಂತೆ ಇಂಧನ ಉತ್ಪಾದನೆಗೆ ಮೋದಿ ನೇತೃತ್ವದಲ್ಲಿ ಭಾರತ ಪ್ರಯತ್ನ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

G20 nations meeting
ಬೆಂಗಳೂರಿನಲ್ಲಿ ಜಿ20 ರಾಷ್ಟ್ರಗಳ ಸಭೆ
author img

By

Published : Feb 5, 2023, 3:55 PM IST

Updated : Feb 5, 2023, 4:03 PM IST

ಬೆಂಗಳೂರಿನಲ್ಲಿ ಜಿ20 ರಾಷ್ಟ್ರಗಳ ಸಭೆ ನಡೆಯಿತು.

ಬೆಂಗಳೂರು: ಪ್ರಪಂಚದಲ್ಲಿ ದೊಡ್ಡ ಆರ್ಥಿಕತೆ ಹೊಂದಿರುವ ಜಿ20 ರಾಷ್ಟ್ರಗಳು ಸುಸ್ಥಿರ, ಸೆಕ್ಯುರ್ ಮತ್ತು ಕ್ಲೀನ್ ಎನರ್ಜಿಯತ್ತ ಸಾಗಬೇಕಿದೆ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಜಿ20 ರಾಷ್ಟ್ರಗಳ ಪ್ರಥಮ ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಮಾತನಾಡಿದ ಅವರು, ಜಿ 20 ರಾಷ್ಟ್ರಗಳ ಪ್ರತಿನಿಧಿಯವರನ್ನು ಭಾರತದ ಪರವಾಗಿ ಸ್ವಾಗತಿಸಿದರು. ಎನರ್ಜಿ ಟ್ರಾನ್ಸಿಶನ್ ನಲ್ಲಿ ಹೊಸ ತಂತ್ರಜ್ಞಾನಗಳೊಂದಿಗೆ ರಾಷ್ಟ್ರಗಳು ಪರಸ್ಪರ ಸಹಕರಿಸಬೇಕು ಎಂದು ತಿಳಿಸಿದರು.

ಇಂಧನ ಶಕ್ತಿಯ ಪರಿವರ್ತನೆಗೆ ಎಲ್ಲಾ ಪಾಲುದಾರರಿಂದ ಸಾಮೂಹಿಕ ಪ್ರಯತ್ನದ ಕಾರ್ಯಶೀಲತೆ ಅಗತ್ಯವಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಅಗತ್ಯಗಳನ್ನು ಬೆಂಬಲಿಸಿದಾಗ ಮಾತ್ರ ಶುದ್ಧ ಇಂಧನ ಸಾರ್ವತ್ರಿಕವಾಗಿ ಪ್ರವೇಶ ಸಾಧ್ಯವಿದೆ ಎಂದು ಅಭಿಮತ ವ್ಯಕ್ತಪಡಿಸಿದರು. ಜಿ-20 ಸಭೆ ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಲಿದೆ. ವಿವಿಧ ದೇಶಗಳ ಆರ್ಥಿಕ ಸಮಸ್ಯೆಗಳ ಬಗ್ಗೆ ಈ ಶೃಂಗಸಭೆಯು ಬೆಳಕು ಚೆಲ್ಲುತ್ತದೆ. ಇಂಧನ ಉತ್ಪಾದನೆಯ ಜೊತೆಗೆ ಬಳಕೆಯ ವಿಚಾರದಲ್ಲಿಯೂ ದೇಶಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಶುದ್ಧ ಇಂಧನಕ್ಕಾಗಿ ಸಾರ್ವತ್ರಿಕ ಪ್ರವೇಶ ಮತ್ತು ಕೈಗೆಟುಕುವ, ಅಂತರ್ಗತ ಇಂಧನ ಪರಿವರ್ತನೆ ಮಾರ್ಗಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.

ರೆಡ್ಯೂಸ್ ರಿಯೂಸ್ ರಿಸೈಕಲ್ ಎನರ್ಜಿ ನೀತಿ: ಭಾರತೀಯರು ರಿಡ್ಯೂಸ್ ರಿಯೂಸ್ ರೀಸೈಕಲ್ ಎನರ್ಜಿ ನೀತಿಯನ್ನು ಅನುಸರಿಸುತ್ತಿದೆ. ಭೂಮಿಯು ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಎಲ್ಲವನ್ನು ಒದಗಿಸುತ್ತದೆ. ಆದರೆ ಇದು ಮನುಷ್ಯನ ದುರಾಸೆಯಾಗಬಾರದು. ಇಂಧನ ಸಂರಕ್ಷಣೆ ಮತ್ತು ಸುಸ್ಥಿರತೆಯ ಮಹತ್ವವನ್ನು ಅರಿತು ಜಿ 20 ರಾಷ್ಟ್ರಗಳು ಮುನ್ನಡೆಯಬೇಕಿದೆ ಎಂದರು.

ಜಿ20 ರಾಷ್ಟ್ರಗಳ ಮುಂದೆ ಗ್ಲೋಬಲ್ ಕ್ಲೈಮೆಟ್ ಚೇಂಜ್ ಅನ್ನುವುದು ದೊಡ್ಡ ಸವಾಲಾಗಿದೆ.‌ ಪರಿಸರಕ್ಕೆ ಹಾನಿ ಮಾಡದಂತೆ ಎನರ್ಜಿ ಉತ್ಪಾದನೆಗೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಹೆಚ್ಚು ಗಮನ ಹರಿಸಿದೆ. ಇದಕ್ಕಾಗಿ ಭಾರತ ಸರ್ಕಾರ ಕೈಗೊಂಡಿರುವ ಇಂಧನ ಪರಿವರ್ತನಾ ಕ್ರಮಗಳ ಕುರಿತಾಗಿ ಸಭೆಯಲ್ಲಿ ವಿವರಣೆ ನೀಡಿದರು.

ಈ ಪರಿವರ್ತನೆಯ ಸಮಯದಲ್ಲಿ ಭಾಗವಹಿಸುವ G20 ಪ್ರತಿನಿಧಿಗಳು ಪರಸ್ಪರ ಬೆಂಬಲಿಸುವಂತೆ ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದರು. ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು, ಅಗತ್ಯವಿರುವವರಿಗೆ ಆರ್ಥಿಕ ಮತ್ತು ತಾಂತ್ರಿಕ ಸಹಾಯವನ್ನು ಒದಗಿಸಲು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು. ಸಭೆಯಲ್ಲಿ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಸ್ತುತ ಸಮಯದಲ್ಲಿ ಭಾರತ ಸರ್ಕಾರದ ಯೋಜನೆ ಹಾಗೂ ಕ್ರಮಗಳನ್ನು ಪ್ರತಿನಿಧಿಗಳು ಶ್ಲಾಘಿಸಿದರು. ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಜಿ20 ಸಭೆಯಲ್ಲಿ ಭಾಗವಹಿಸಿರುವ ರಾಷ್ಟ್ರಗಳು: ಭಾರತ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಜಪಾನ್, ಇಟಲಿ, ಸೌತ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ಸೌತ್ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ, ಇವು ಜಿ20 ಗುಂಪಿನಲ್ಲಿರುವ ದೇಶಗಳು. ಈ ಬಾರಿ ಜಿ20 ಸಭೆಗೆ 9 ದೇಶಗಳು ವಿಶೇಷ ಆಹ್ವಾನ ಪಡೆದಿವೆ. ಅವುಗಳಲ್ಲಿ ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್​ಲೆಂಡ್ಸ್, ನೈಜೀರಿಯಾ, ಓಮನ್, ಸಿಂಗಾಪುರ, ಯುಎಇ ಮತ್ತು ಸ್ಪೇನ್ ದೇಶಗಳು ಸೇರಿಕೊಂಡಿವೆ.

ಇದನ್ನೂಓದಿ:ಅನಿವಾಸಿ ಭಾರತೀಯರು ದೇಶದಲ್ಲಿ ಹೆಚ್ಚು ದಿನ ಉಳಿಯಲು ಅವಕಾಶ ನೀಡಿ: ನಾರಾಯಣ ಮೂರ್ತಿ

Last Updated : Feb 5, 2023, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.