ETV Bharat / bharat

ಸಾಲದಲ್ಲಿರುವಾಗ ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡಿ : ಹೊಸ ಸಾಲ ಮಾಡದೇ ಮಿತವ್ಯಯದಿಂದ ಬದುಕಿ - IMi facility

ತೆಗೆದುಕೊಂಡ ಸಾಲಗಳ ಒಟ್ಟು ಮೊತ್ತ ಮತ್ತು ಅವುಗಳ ನಿಯಮಗಳು ಎಷ್ಟು? ಪ್ರತಿ ಸಾಲಕ್ಕೆ ನೀವು ಎಷ್ಟು ಬಡ್ಡಿಯನ್ನು ಪಾವತಿಸುತ್ತಿದ್ದೀರಿ ಎಂಬುದನ್ನು ಪರೀಕ್ಷಿಸಿ. ಸ್ಪಷ್ಟತೆ ಪಡೆಯಲು ಹಳೆಯ ಮತ್ತು ಹೊಸ ಸಾಲಗಳ ಪಟ್ಟಿಯನ್ನು ಒಂದೇ ಸ್ಥಳದಲ್ಲಿ ಬರೆಯಿರಿ. ನಂತರ ನಿಮ್ಮ ಆದಾಯದಿಂದ ಹೆಚ್ಚುವರಿಯಾಗಿ ಈ ಸಾಲಗಳನ್ನು ಹೇಗೆ ಪಾವತಿಸಬೇಕೆಂದು ಯೋಜಿಸಿ.

Reduce credit card usage while in debt : Live frugally without taking out new debt
ಸಾಲದಲ್ಲಿರುವಾಗ ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡಿ : ಹೊಸ ಸಾಲ ತೆಗಿಯದೆ ಮಿತವ್ಯಯದಿಂದ ಬದುಕಿ
author img

By

Published : Nov 19, 2022, 2:45 PM IST

ಹೈದರಾಬಾದ್: ಹಿಂದೆ ಸಾಲ ಪಡೆಯುವುದು ತುಂಬಾ ಕಷ್ಟವಾಗಿತ್ತು. ಆದರೆ, ಈಗ ಸಮಯವು ಬದಲಾಗಿದೆ. ಸಾಲಗಳನ್ನು ತಕ್ಷಣವೇ ಮಂಜೂರು ಮಾಡಲಾಗುತ್ತದೆ ಮತ್ತು ಸೆಕೆಂಡುಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುತ್ತದೆ. ಹಾಗಾಗಿ ಹಳೆಯ ಸಾಲವನ್ನು ತೀರಿಸುವವರೆಗೆ ಹೊಸ ಸಾಲಗಳತ್ತ ಸುಳಿಯಬೇಡಿ.

ಈ ಮೂಲಕ ಸಾಲದ ವಿಷಯದಲ್ಲಿ ಅತ್ಯಂತ ನಿಯಂತ್ರಣದ ಜೊತೆ ಸಾಲದಲ್ಲಿದ್ದಾಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಿ. ಬಹು ಮುಖ್ಯವಾಗಿ, ಆ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡುವುದು ಉತ್ತಮ.

ಇತ್ತೀಚಿನ ದಿನಗಳಲ್ಲಿ ಯಾವುದನ್ನೇ ಆಗಲಿ ಖರೀದಿಸಲು ನಗದು ಹಣದ ಅಗತ್ಯವಿಲ್ಲ. ಯಾಕೆಂದರೆ ಪ್ರತೀ ಖರೀದಿಗೆ ಇಎಮ್​​ಐ ಸೌಲಭ್ಯ ದೊರಕುತ್ತದೆ. ಹಬ್ಬಗಳ ಸಂದರ್ಭದಲ್ಲಂತೂ ಇಎಂಐ ಮೂಲಕ ಸಾಲ ಹೆಚ್ಚಾಗಿ ಇರುತ್ತದೆ. ಆದರೆ, ಹಬ್ಬ ಎನ್ನುವ ಖುಷಿಯಿಂದ ಈ ರೀತಿಯ ಸಾಲಗಳನ್ನು ಬೇಗ ತೆಗೆದುಕೊಳ್ಳಬೇಡಿ. ಇದೇ ಸಾಲಗಳು ಮುಂದೆ ನಿಮ್ಮ ಹಣಕಾಸಿನ ಸಮತೋಲನ ಹಳಿ ತಪ್ಪಿಸಬಹುದು. ಮೊದಲು ಹಬ್ಬ ಹರಿದಿನಗಳಲ್ಲಿ ಎಷ್ಟು ಹಣ ಖರ್ಚಾಗಿದೆ ಎಂಬ ಸ್ಪಷ್ಟ ಅಂದಾಜು ಪಡೆಯಿರಿ.

ತೆಗೆದುಕೊಂಡ ಸಾಲಗಳ ಒಟ್ಟು ಮೊತ್ತ ಮತ್ತು ಅವುಗಳ ನಿಯಮಗಳು ಎಷ್ಟು? ಪ್ರತಿ ಸಾಲಕ್ಕೆ ನೀವು ಎಷ್ಟು ಬಡ್ಡಿಯನ್ನು ಪಾವತಿಸುತ್ತಿದ್ದೀರಿ ಎಂಬುದನ್ನು ಪರೀಕ್ಷಿಸಿ. ಸ್ಪಷ್ಟತೆ ಪಡೆಯಲು ಹಳೆಯ ಮತ್ತು ಹೊಸ ಸಾಲಗಳ ಪಟ್ಟಿಯನ್ನು ಒಂದೇ ಸ್ಥಳದಲ್ಲಿ ಬರೆಯಿರಿ. ನಂತರ ನಿಮ್ಮ ಆದಾಯದಿಂದ ಹೆಚ್ಚುವರಿಯಾಗಿ ಈ ಸಾಲಗಳನ್ನು ಹೇಗೆ ಪಾವತಿಸಬೇಕು ಎಂದು ಯೋಜಿಸಿ.

ನೀವು ಹೆಚ್ಚಿನ ಸಾಲಗಳನ್ನು ಹೊಂದಿದ್ದರೆ ಮೊದಲು ಸಣ್ಣ ಸಾಲಗಳನ್ನ ಆದಷ್ಟು ಬೇಗ ಪಾವತಿಸಿ ಇದರಿಂದ ನಿಮ್ಮ ಮಾನಸಿಕ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಅಲ್ಲದೇ ಯಾವ ಸಾಲ ಹೆಚ್ಚಿನ ಬಡ್ಡಿ ಹೊಂದಿದೆ ಆ ಸಾಲದಿಂದ ಬೇಗ ಮುಕ್ತಿ ಪಡೆಯಬೇಕು. ಇಲ್ಲದಿದ್ದರೆ ಅದೇ ಸಾಲಗಳು ನಿಮ್ಮ ಉಳಿತಾಯದ ಬಹುಪಾಲನ್ನು ಕಸಿದುಕೊಳ್ಳಬಹುದು.

ನಿಮ್ಮ ಆದಾಯವನ್ನು ಹೆಚ್ಚಿಸಲು ಲಭ್ಯವಿರುವ ಮಾರ್ಗಗಳನ್ನು ಹುಡುಕುವುದು ಉತ್ತಮ . ಇದು ನಿಮ್ಮ ಸಾಲವನ್ನು ತ್ವರಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಆದಾಯ - ಸಾಲದ ಅನುಪಾತವನ್ನು ಕಡಿಮೆ ಮಾಡಲು ಅಗತ್ಯವಿರುವ ಪ್ರಯತ್ನಗಳ ಬಗ್ಗೆ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ. ಗೃಹ ಸಾಲದ ಮೇಲೆ EMI ಅನ್ನು ಕಡಿಮೆ ಮಾಡುವ ಸಾಧ್ಯತೆ ಇದೆಯಾ ಎಂಬುದನ್ನು ಕಂಡು ಹಿಡಿಯಲು ನಿಮ್ಮ ಬ್ಯಾಂಕನ್ನು ಸಹ ಸಂಪರ್ಕಿಸಿ.

ಸಾಲದ ಸಮಯದಲ್ಲಿ, ಸಾಲವನ್ನು ಪಾವತಿಸುವವರೆಗೆ ನಿಮ್ಮ ವೆಚ್ಚವನ್ನು ಕಡಿಮೆ ಮಾಡಿ. ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ನಿಮ್ಮ ಮನೆ ಬಾಗಿಲಿಗೆ ಬರುವುದು ಖಚಿತ. ಹಾಗೆ ಸ್ವಲ್ಪ ಸಮಯದವರೆಗೆ, ಮಿತವ್ಯಯದಿಂದ ಬದುಕಿ, ಅನಗತ್ಯ ದುಂದು ವೆಚ್ಚಗಳನ್ನು ನಿಯಂತ್ರಿಸಬೇಕು. ಯಾವುದೇ ಸಂದರ್ಭದಲ್ಲಿ ಯಾವುದೇ ಹೊಸ ಸಾಲಗಳನ್ನು ತೆಗೆದುಕೊಳ್ಳಬಾರದು, ಅಗತ್ಯ ಇದ್ದರೆ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಕೆಲವು ದಿನಗಳವರೆಗೆ ಫ್ರೀಜ್ ಮಾಡುವುದು ಒಳ್ಳೆಯದು.

ಇದನ್ನೂ ಓದಿ :ಗೃಹಸಾಲ ಬೇಕಾ? ಹಾಗಾದ್ರೆ ಕ್ರೆಡಿಟ್ ಸ್ಕೋರ್​ ಉತ್ತಮವಾಗಿಟ್ಟುಕೊಳ್ಳಿ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.