ETV Bharat / bharat

ಡಿಸೆಂಬರ್​ನಲ್ಲಿ ₹4,297 ಕೋಟಿಯ ಮದ್ಯ ಮಾರಾಟ, ನಾಲ್ಕೇ ದಿನದಲ್ಲಿ ₹777 ಕೋಟಿ ವಹಿವಾಟು!

author img

By ETV Bharat Karnataka Team

Published : Jan 2, 2024, 11:20 AM IST

Liquor sales in December 2023: ತೆಲಂಗಾಣಲ್ಲಿ ಭಾರಿ ಪ್ರಮಾಣದ ಮದ್ಯ ಮಾರಾಟವಾಗಿದೆ. ಹೊಸ ವರ್ಷವೂ ಸೇರಿ ಒಂದೇ ತಿಂಗಳಲ್ಲಿ 4,297 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

liquor sales  december 2023 telangana  record level liquor sales  ಮದ್ಯ ಮಾರಾಟ  ಭಾರೀ ಪ್ರಮಾಣದ ಮದ್ಯ ಮಾರಾಟ  ತೆಲಂಗಾಣ ರಾಜ್ಯ
ಡಿಸೆಂಬರ್​ನಲ್ಲಿ 4297 ಕೋಟಿ ರೂಪಾಯಿ ಮದ್ಯ ಮಾರಾಟ

ಹೈದರಾಬಾದ್​(ತೆಲಂಗಾಣ): ರಾಜ್ಯದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಮದ್ಯಪ್ರಿಯರು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿದ್ದಾರೆ. 2023ರ ಡಿಸೆಂಬರ್‌ನಲ್ಲಿ, 43.60 ಲಕ್ಷ ಕೇಸ್ ಮತ್ತು 46.22 ಲಕ್ಷ ಕೇಸ್ ಬಿಯರ್ ಸೇರಿದಂತೆ 4297 ಕೋಟಿ ರೂಪಾಯಿ ಮದ್ಯ ಸೇಲ್ ಆಗಿದೆ. ಈ ತಿಂಗಳ 28ರಿಂದ 31ರವರೆಗೆ ನಾಲ್ಕು ದಿನಗಳಲ್ಲಿ 777 ಕೋಟಿ ರೂ ಮೌಲ್ಯದ ಮದ್ಯ ಬಿಕರಿಯಾಗಿದೆ ಎಂದು ಅಧಿಕೃತ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ.

ಹೊಸ ಮದ್ಯ ನೀತಿ: ರಾಜ್ಯದಲ್ಲಿ ಹೊಸ ಮದ್ಯ ನೀತಿ ಡಿಸೆಂಬರ್ ತಿಂಗಳಿನಿಂದ ಜಾರಿಗೆ ಬಂದಿದೆ. ಹಳೆ ಲೈಸನ್ಸ್ ಪಡೆದವರ ಸ್ಥಾನದಲ್ಲಿ ಹೊಸ ಪರವಾನಗಿದಾರರು ಮದ್ಯದಂಗಡಿ ಪರವಾನಗಿ ಪಡೆದಿದ್ದಾರೆ. ಡಿಸೆಂಬರ್ ತಿಂಗಳಲ್ಲಿ, ಹೊಸ ವರ್ಷದ ಹಿಂದಿನ ಮೂರ್ನಾಲ್ಕು ದಿನ ಅತಿ ಹೆಚ್ಚು ಮದ್ಯ ಮಾರಾಟ ಆಗುವುದು ಸಾಮಾನ್ಯ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಅಂಗಡಿಕಾರರು ಅಪಾರ ಪ್ರಮಾಣದಲ್ಲಿ ಮದ್ಯ ದಾಸ್ತಾನು ಮಾಡಿದ್ದರು ಎಂದು ತಿಳಿದುಬಂದಿದೆ.

ರಂಗಾರೆಡ್ಡಿ, ವಾರಂಗಲ್ ಜಿಲ್ಲೆಗಳಲ್ಲಿ ಅಧಿಕ ಮಾರಾಟ: ಡಿಸೆಂಬರ್ ತಿಂಗಳ ಕೊನೆಯ ನಾಲ್ಕು ದಿನಗಳಲ್ಲಿ ಭಾರಿ ಪ್ರಮಾಣದ ಮದ್ಯ ಮಾರಾಟವಾಗಿದೆ. ನಾಲ್ಕು ದಿನಗಳಲ್ಲಿ 777 ಕೋಟಿ ರೂ ಮೌಲ್ಯದ 7.12 ಲಕ್ಷ ಮದ್ಯ ಮತ್ತು 7.84 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕೃತ ಅಂಕಿಅಂಶಗಳು ಹೇಳುತ್ತವೆ. ಇದರಲ್ಲಿ ಜಿಲ್ಲಾವಾರು ಮಾಹಿತಿ ತೆಗೆದುಕೊಂಡರೆ, ರಂಗಾರೆಡ್ಡಿ ಮತ್ತು ವಾರಂಗಲ್ ಜಿಲ್ಲೆಗಳಲ್ಲಿ ಮಾತ್ರ ಕಳೆದ ವರ್ಷಕ್ಕಿಂತ ಹೆಚ್ಚು ಮಾರಾಟವಾಗಿದೆ. ಈ ಎರಡೂ ಜಿಲ್ಲೆಗಳ ವ್ಯಾಪ್ತಿಯಲ್ಲಿ, 2022ರ ಕೊನೆಯ ನಾಲ್ಕು ದಿನಗಳಲ್ಲಿ, ರಂಗಾರೆಡ್ಡಿ ಜಿಲ್ಲೆಯಲ್ಲಿ 204 ಕೋಟಿ ರೂ ಮೌಲ್ಯದ ಮದ್ಯ ಮಾರಾಟವಾಗಿತ್ತು. 2023ರ ಡಿಸೆಂಬರ್ ಕೊನೆಯ ನಾಲ್ಕು ದಿನಗಳಲ್ಲಿ 242 ಕೋಟಿ ರೂ ಮೌಲ್ಯದ ಮದ್ಯ ಮಾರಾಟವಾಗಿದೆ.

ಹೊಸ ವರ್ಷದಲ್ಲಿ ಭಾರಿ ಪ್ರಮಾಣದ ಮದ್ಯ ಮಾರಾಟ: ವಾರಂಗಲ್​ನಲ್ಲಿ 2022ರಲ್ಲಿ 64 ಕೋಟಿ ರೂಪಾಯಿ, 2023ರಲ್ಲಿ 70 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ. ಉಳಿದೆಲ್ಲಾ ಜಿಲ್ಲೆಗಳಲ್ಲಿ ಡಿಸೆಂಬರ್ 2022ರ ಕೊನೆಯ ನಾಲ್ಕು ದಿನಗಳಿಗಿಂತ 2023ರ ಡಿಸೆಂಬರ್‌ನಲ್ಲಿ ಕಡಿಮೆ ಮಾರಾಟವಾಗಿದೆ. ಡಿಸೆಂಬರ್​ 28ರಂದು 134 ಕೋಟಿ ರೂ, 29ರಂದು 180 ಕೋಟಿ ರೂ, ಡಿ.30ರಂದು ಒಂದೇ ದಿನ 313 ಕೋಟಿ, 31ರಂದು 150 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಬಹಿರಂಗಪಡಿಸಿವೆ.

ಇದನ್ನೂ ಓದಿ: ವರ್ಷದ ಕೊನೆ ದಿನ ಎಂಎಸ್​ಐಎಲ್​ನಿಂದ ದಾಖಲೆಯ 18 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮದ್ಯ ಮಾರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.