ETV Bharat / bharat

ಪಣಜಿಯಲ್ಲಿ 'ಶಿಂದೆ ಸೇನಾ' ಶಾಸಕರ ಸಭೆ: ಮುಂಬೈನತ್ತ ಏಕನಾಥ್ - ಮುಂಬೈನತ್ತ ಏಕನಾಥ್

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಬಂಡಾಯ ಶಾಸಕರು ನಡೆಸುತ್ತಿರುವ ಮೊದಲ ಸಭೆ ಇದಾಗಿದೆ. ಇನ್ನು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ನಡೆಯತ್ತ ಎಲ್ಲರ ದೃಷ್ಟಿ ಈಗ ನೆಟ್ಟಿದೆ.

Rebel MLAs meeting in Goa
Rebel MLAs meeting in Goa
author img

By

Published : Jun 30, 2022, 11:33 AM IST

Updated : Jun 30, 2022, 12:40 PM IST

ಪಣಜಿ: ಶಿವಸೇನೆ ಬಂಡಾಯ ಶಾಸಕರು ಅಂದರೆ ಏಕನಾಥ್ ಶಿಂದೆ ಗುಂಪಿನ ಶಾಸಕರು ಕಳೆದ ರಾತ್ರಿಯೇ ಗೋವಾಗೆ ಆಗಮಿಸಿದ್ದಾರೆ. ಪಣಜಿಯ ತಾಜ್ ಕನ್ವೆನ್ಷನ್ ಸೆಂಟರ್ ಹೊಟೇಲಿನಲ್ಲಿ ಎಲ್ಲರಿಗೂ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ಬಂಡಾಯ ಶಾಸಕರು ಮಹತ್ವದ ಸಭೆ ನಡೆಸಲಿದ್ದು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಬಂಡಾಯ ಶಾಸಕರು ನಡೆಸುತ್ತಿರುವ ಮೊದಲ ಸಭೆ ಇದಾಗಿದೆ. ಈ ಮಧ್ಯೆ ಕೆಲವೇ ಸಮಯದಲ್ಲಿ ಏಕನಾಥ್ ಶಿಂದೆ ಸ್ವತಃ ಮುಂಬೈಗೆ ತೆರಳಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ. ತಮ್ಮ ಬೆಂಬಲಕ್ಕೆ ನಿಂತಿರುವ ಎಲ್ಲ ಶಾಸಕರ ಬೆಂಬಲದ ಸಹಿ ಇರುವ ಪತ್ರದೊಂದಿಗೆ ಏಕನಾಥ್ ಶಿಂದೆ ಮುಂಬೈಗೆ ಆಗಮಿಸಲಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ನಡೆಯತ್ತ ಎಲ್ಲರ ದೃಷ್ಟಿ ಈಗ ನೆಟ್ಟಿದೆ.

ಇದನ್ನು ಓದಿ:ಮಹಾರಾಷ್ಟ್ರ ಒಬ್ಬ ಆಕರ್ಷಕ ಸಿಎಂ ಕಳೆದುಕೊಂಡಿದೆ: ಭಾವುಕರಾದ ಸಂಜಯ​ ರಾವತ್​

Last Updated : Jun 30, 2022, 12:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.