ಮುಂಬೈ: ಏಕನಾಥ್ ಶಿಂದೆ ನೇತೃತ್ವದಲ್ಲಿ ಬಂಡಾಯ ಎದ್ದಿರುವ 16 ಶಾಸಕರನ್ನು ಅಮಾನತುಗೊಳಿಸಬೇಕೆಂದು ಕೋರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತೊಮ್ಮೆ ಇಂದು (ಜುಲೈ 1) ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಶಾಸಕರ ಅನರ್ಹತೆಯ ಬಗ್ಗೆ ಅಂತಿಮ ನಿರ್ಧಾರವಾಗುವವರೆಗೆ ಬಂಡಾಯ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಬೇಕೆಂದು ಕೋರಿ ಶಿವಸೇನೆಯ ಚೀಫ್ ವಿಪ್ ಸುನೀಲ್ ಪ್ರಭು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸಂವಿಧಾನದ 10ನೇ ವಿಧಿಯು ಹಲ್ಲಿಲ್ಲದ ಹಾವಿನಂತಾಗುವುದನ್ನು ತಡೆಯಬೇಕು ಮತ್ತು ಪಕ್ಷಾಂತರಿಗಳು ಪಕ್ಷಾಂತರದ ಲಾಭ ಪಡೆಯುತ್ತಿರುವಾಗ ಡೆಪ್ಯೂಟಿ ಸ್ಪೀಕರ್ ಏನೂ ಮಾಡದ ಸ್ಥಿತಿಗೆ ತಲುಪಿರುವುದನ್ನು ತಪ್ಪಿಸಬೇಕು." ಎಂದು ಶಿವಸೇನೆಯ ಅರ್ಜಿಯಲ್ಲಿ ಕೋರಲಾಗಿದೆ.
ಏಕನಾಥ್ ಶಿಂಧೆ ಮತ್ತು ಮತ್ತು ಅವರ ಜೊತೆಗಿರುವ ಬಂಡಾಯ ಶಾಸಕರು ಮಹಾರಾಷ್ಟ್ರ ವಿಧಾನಸಭೆಗೆ ಪ್ರವೇಶಿಸದಂತೆ ಆದೇಶಿಸಬೇಕೆಂದು ಸುನೀಲ ಪ್ರಭು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಇದನ್ನು ಓದಿ:ನೀವು ಇಡೀ ದೇಶದ ಕ್ಷಮೆ ಕೇಳಲೇಬೇಕು:ನೂಪುರ್ ಶರ್ಮಾ ತರಾಟೆಗೆ ತೆಗೆದುಕೊಂಡ ಸುಪ್ರೀಂ