ETV Bharat / bharat

19 ವರ್ಷದಿಂದ ದಾಖಲೆಗಳಲ್ಲಿ ಸತ್ತಿರುವ ವ್ಯಕ್ತಿಗೆ ಬೇಕಂತೆ AK 47 ಗನ್ ಪರವಾನಿಗೆ!

author img

By ETV Bharat Karnataka Team

Published : Nov 9, 2023, 11:53 AM IST

Updated : Nov 9, 2023, 12:27 PM IST

Lal Bihari Mratak : ನನ್ನ ಜೀವಕ್ಕೆ ಅಪಾಯವಿದೆ. ಈ ಹಿನ್ನೆಲೆ ನನಗೆ AK-47 ಗನ್​​ಗೆ ಪರವಾನಿಗೆ ನೀಡುವಂತೆ ಉತ್ತರ ಪ್ರದೇಶದ ಅಜಂಗಢ ಆಡಳಿತಕ್ಕೆ ಲಾಲ್ ಬಿಹಾರಿ ಮನವಿ ಸಲ್ಲಿಸಿದ್ದಾರೆ.

Lal Bihari Mratak  Kaagaz Film Story  AK 47 Rifle License  UP Chief Secretary  Real Hero of Kaagaz Film Story  Azamgarh News  UP News  ನನ್ನ ಜೀವಕ್ಕೆ ಅಪಾಯವಿದೆ  ನನಗೆ AK 47 ಗನ್​​ಗೆ ಪರವಾನಗಿ ನೀಡಿ  ಲಾಲ್​ ಬಿಹಾರಿ ಮೃತಕ್​ ಅಜಂಗಢದ ಖ್ಯಾತ ಲಾಲ್ ಬಿಹಾರಿ  ಎಕೆ 47 ಗನ್‌ನ ಪರವಾನಗಿಗೆ ಒತ್ತಾಯ  ಯಾರಿಗಾಗಿ ಹೋರಾಡುತ್ತಿದ್ದೇವೊ ಅವರಿಂದಲೇ ಪ್ರಾಣಕ್ಕೆ ಅಪಾಯ  ಎಕೆ 47 ರೈಫಲ್‌ನ ಪರವಾನಗಿ ಪಡೆಯಲು ನನಗೆ ಅವಕಾಶ
ಲಾಲ್​ ಬಿಹಾರಿ ಮೃತಕ್​

ಅಜಂಗಢ (ಉತ್ತರ ಪ್ರದೇಶ): ಅಜಂಗಢದ ಖ್ಯಾತ ಲಾಲ್ ಬಿಹಾರಿ ಅವರು ಆಡಳಿತದಿಂದ ಎಕೆ 47 ಗನ್‌ನ ಪರವಾನಿಗೆಗೆ ಒತ್ತಾಯಿಸಿದ್ದಾರೆ. ಯಾರಿಗಾಗಿ ಹೋರಾಡುತ್ತಿದ್ದೇವೊ ಅವರಿಂದಲೇ ಪ್ರಾಣಕ್ಕೆ ಅಪಾಯವಿದೆ. ಹೀಗಾಗಿ ಎಕೆ-47 ಗನ್‌ಗೆ ಪರವಾನಿಗೆ ನೀಡುವಂತೆ ಮುಖ್ಯ ಕಾರ್ಯದರ್ಶಿಯವರನ್ನು ಕೋರುತ್ತೇನೆ. ಈ ಆಯುಧವನ್ನು ಸಾಮಾನ್ಯ ಜನರಿಗೆ ನಿಷೇಧಿಸಲಾಗಿದೆ ಎಂದು ನನಗೆ ತಿಳಿದಿದೆ. ಆದರೆ ಇದನ್ನು ಒಬ್ಬ ಮೃತ ವ್ಯಕ್ತಿಗೆ ನೀಡಬಹುದು ಎಂದಿದ್ದಾರೆ.

ಲಾಲ್ ಬಿಹಾರಿ ಅವರು ಸರ್ಕಾರಿ ದಾಖಲೆಗಳ ಪ್ರಕಾರ 19 ವರ್ಷಗಳ ಕಾಲ ಹಿಂದೆಯೇ ಮೃತಪಟ್ಟಿದ್ದಾರೆ. ಸುದೀರ್ಘ ಕಾನೂನು ಹೋರಾಟದ ನಂತರ ಇತ್ತೀಚಿನ ಸರ್ಕಾರಿ ದಾಖಲೆಗಳ ಪ್ರಕಾರ ಅವರು ಜೀವಂತವಾಗಿದ್ದಾರೆ ಎಂದು ತೋರಿಸಲಾಗಿದೆ. ಸತೀಶ್ ಕೌಶಿಕ್ ನಿರ್ದೇಶನದ ಪಂಕಜ್ ತ್ರಿಪಾಠಿ ಅಭಿನಯದ ಕಾಗಜ್​ ಚಲನಚಿತ್ರ ಇವರ ಜೀವನ ಆಧಾರಿತ ಕಥೆಯನ್ನು ಒಳಗೊಂಡಿದೆ.

ಎಕೆ 47 ರೈಫಲ್‌ನ ಪರವಾನಗಿ ಪಡೆಯಲು ತನಗೆ ಅವಕಾಶ ನೀಡುವಂತೆ ನಾನು ಮುಖ್ಯ ಕಾರ್ಯದರ್ಶಿಯನ್ನು ವಿನಂತಿಸುತ್ತೇನೆ. ಏಕೆಂದರೆ ಜನರಿಗಾಗಿ ಹೋರಾಡುತ್ತಿರುವ ನನ್ನ ಜೀವಕ್ಕೆ ಅಪಾಯವಿದೆ. ನಾನು ಬದುಕಿದ್ದರೂ ಸಹ ಸರ್ಕಾರಿ ದಾಖಲೆಗಳಲ್ಲಿ ಸತ್ತಿದ್ದೇನೆ. ನಿಷೇಧಿತ ಬಂದೂಕಿನ ಪರವಾನಿಗೆ ನೀಡುವಂತೆ ಯುಪಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವ ಮೂಲಕ ಲಾಲ್​ ಬಿಹಾರಿ ಒತ್ತಾಯಿಸಿದ್ದಾರೆ.

ಭಾರತದಲ್ಲಿ ಯಾವುದೇ ವ್ಯಕ್ತಿಯು ಪರವಾನಿಗೆ ಪಡೆದ AK-47 ಅನ್ನು ಹೊಂದಲು ಸಾಧ್ಯವಿಲ್ಲ. ಏಕೆಂದರೆ ಈ ಶಸ್ತ್ರಾಸ್ತ್ರವು ವಿಶೇಷ ಪಡೆಗಳಿಗೆ ಮಾತ್ರ. ಈ ಅತ್ಯಾಧುನಿಕ ಗನ್ ಅನ್ನು ಸಾರ್ವಜನಿಕರಿಗೆ ನಿಷೇಧಿಸಲಾಗಿದೆ ಎಂಬುದು ನನಗೆ ತಿಳಿದಿದೆ. ಆದರೆ ಇದನ್ನು ಮೃತ ವ್ಯಕ್ತಿಗೆ ನೀಡಬಹುದು ಎಂದು ಲಾಲ್ ಬಿಹಾರಿ ಹೇಳಿದ್ದಾರೆ.

ಲಾಲ್ ಬಿಹಾರಿ ಅವರು 1975 ರಿಂದ 1994 ರ ನಡುವೆ ಸರ್ಕಾರಿ ದಾಖಲೆ ಪ್ರಕಾರ ಅಧಿಕೃತವಾಗಿ ಮೃತಪಟ್ಟಿದ್ದರು. ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಕಂದಾಯ ದಾಖಲೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿತ್ತು. ಮೂಲತಃ ಮುಬಾರಕ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಮಿಲೋ ನಿವಾಸಿಯಾಗಿರುವ ಲಾಲ್ ಬಿಹಾರಿ ಅವರು ಮೇ 6, 1955 ರಂದು ನಿಜಾಮಾಬಾದ್ ತಾಲೂಕಿನ ಖಲೀಲಾಬಾದ್ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಸಾವನ್ನಪ್ಪಿದ ಬಳಿಕ ಅವರ ಚಿಕ್ಕಪ್ಪ ಲಾಲ್​ ಬಿಹಾರಿ ಸಾವನ್ನಪ್ಪಿದ್ದಾನೆ ಎಂದು ಸರ್ಕಾರಿ ದಾಖಲೆಗಳಲ್ಲಿ ನೋಂದಾಯಿಸಲು ಅಧಿಕಾರಿಯೊಬ್ಬರಿಗೆ ಲಂಚ ನೀಡಿದ್ದರು. ಬಳಿಕ ಲಾಲ್​ ಬಿಹಾರಿ ಅವರ ಪೂರ್ವಜರ ಜಮೀನಿನ ಮಾಲೀಕತ್ವವನ್ನು ಅವರ ಚಿಕ್ಕಪ್ಪ ತಮ್ಮ ಹೆಸರಿಗೆ ವರ್ಗಾಯಿಸಿದ್ದರು. ಲಾಲ್ ಬಿಹಾರಿ 19 ವರ್ಷಗಳ ಕಾಲ ಆಡಳಿತದೊಂದಿಗೆ ಹೋರಾಡಿ ತಾನು ಜೀವಂತ ಇರುವುದಾಗಿ ಸಾಬೀತುಪಡಿಸಿದರು. ಇದೇ ವೇಳೆ ಅವರು ತಮ್ಮ ಹೆಸರಿಗೆ ‘ಮೃತಕ’ ಎಂಬ ಅಡ್ಡೆಹೆಸರು ಸಹ ಜೋಡಣೆ ಮಾಡಿಕೊಂಡರು.

ಸರ್ಕಾರದ ವಿರುದ್ಧ ಹೋರಾಟದ ಸಮಯದಲ್ಲಿ ಲಾಲ್ ಬಿಹಾರಿ ಅವರು ದಾಖಲೆಗಳನ್ನು ಬಹಿರಂಗಪಡಿಸಲು ಮತ್ತು ಅವ್ಯಸ್ಥೆಯ ಬಗ್ಗೆ ಗಮನ ಸೆಳೆಯಲು ಅನೇಕ ಅಸಾಂಪ್ರದಾಯಿಕ ವಿಧಾನಗಳ ಮೂಲಕ ಪ್ರಯತ್ನಿಸಿದರು. ಅವರು ತಮ್ಮ ಅಂತ್ಯಕ್ರಿಯೆಯನ್ನು ತಾವೇ ನಡೆಸಿದರು. ಅವರ ಪತ್ನಿಗೆ ವಿಧವಾ ಪಿಂಚಣಿಗೆ ಅರ್ಜಿ ಸಲ್ಲಿಸಿದರು. ತಾನು ಬದುಕಿದ್ದೇನೆ ಎಂಬುದನ್ನು ಸಾಬೀತುಪಡಿಸಲು ಚುನಾವಣೆಗೆ ಸ್ಪರ್ಧಿಸಿದ್ದರು. 1994 ರಲ್ಲಿ ಸುದೀರ್ಘ ಕಾನೂನು ಹೋರಾಟದ ನಂತರ ಬಿಹಾರಿ ಅಂತಿಮವಾಗಿ ತನ್ನ 'ಸತ್ತ' ಸ್ಥಾನಮಾನವನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾದರು. ಇದಾದ ನಂತರ ಲಾಲ್ ಬಿಹಾರಿ ಅವರು ಸರ್ಕಾರಿ ನೌಕರರೊಂದಿಗೆ ಶಾಮೀಲಾಗಿ ಆಸ್ತಿ ದೋಚುವ ಸಲುವಾಗಿ ಸರ್ಕಾರಿ ದಾಖಲೆಗಳಲ್ಲಿ ಸತ್ತವರೆಂದು ಘೋಷಿಸಲ್ಪಟ್ಟ ಜನರ ಸ್ಥಿತಿಯನ್ನು ಎತ್ತಿ ಹಿಡಿಯಲು 'ಮೃತಕ್ ಸಂಘ'ವನ್ನು ಸ್ಥಾಪಿಸಿದರು.

ಅವರ ಹೋರಾಟದ ಜೀವನಚರಿತ್ರೆಯಾದ 'ಕಾಗಜ್' 2021 ರಲ್ಲಿ ಸತೀಶ್ ಕೌಶಿಕ್ ಅವರ ನಿರ್ದೇಶನದಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಲಾಲ್​ ಬಿಹಾರಿ ಅವರ ಪಾತ್ರವನ್ನು ನಟ ಪಂಕಜ್ ತ್ರಿಪಾಠಿ ನಿರ್ವಹಿಸಿದರು. ಭ್ರಷ್ಟಾಚಾರ ಮತ್ತು ವ್ಯವಸ್ಥೆಯಲ್ಲಿನ ದೋಷಗಳನ್ನು ಆಧರಿಸಿದ ಚಲನಚಿತ್ರವು ಮೋನಾಲ್ ಗಜ್ಜರ್, ಮೀತಾ ವಶಿಷ್ಠ, ಅಮರ್ ಉಪಾಧ್ಯಾಯ ಮತ್ತು ಸತೀಶ್ ಕೌಶಿಕ್ ಅವರ ತಾರಾಬಳಗವನ್ನು ಒಳಗೊಂಡಿತ್ತು. ಮಾರ್ಚ್‌ನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಅವರ ಮನವಿಯನ್ನು ತಿರಸ್ಕರಿಸಿತ್ತು. ಮನವಿಯಲ್ಲಿ ಅವರು ಅನೇಕ ವರ್ಷಗಳಿಂದ ನಾನು ಅಧಿಕೃತವಾಗಿ 'ಸತ್ತಿದ್ದೇನೆ' ಎಂದು ಸರ್ಕಾರದಿಂದ 25 ಕೋಟಿ ರೂಪಾಯಿಗಳ ಪರಿಹಾರವನ್ನು ಕೋರಿದ್ದರು. ಆದ್ರೆ ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿ, ಸಮಯ ವ್ಯರ್ಥ ಮಾಡಿದ್ದಕ್ಕಾಗಿ 10 ಸಾವಿರ ರೂಪಾಯಿ ದಂಡವನ್ನೂ ಪೀಠ ವಿಧಿಸಿತ್ತು. ಈಗ ಸದ್ಯ ಅವರು ಎಕೆ 47 ಗನ್​ ಪರವಾನಗಿಗೆ ಒತ್ತಾಯಿಸಿ ಮತ್ತೆ ಸುದ್ದಿಯಾಗಿದ್ದಾರೆ.

ಓದಿ: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಡಿವಿ ಸದಾನಂದಗೌಡ

Last Updated : Nov 9, 2023, 12:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.