ETV Bharat / bharat

ಛತ್ತೀಸ್‌ಗಢ​ ಸರ್ಕಾರದ ಮಾತುಕತೆ ಪ್ರಸ್ತಾವನೆಗೆ ನಕ್ಸಲ್ ಸಂಘಟನೆ 'ಸೈ'... - ಮಾತುಕತೆಗೆ ಗೆ ನಕ್ಸಲ್ ಸಂಘಟನೆ ಸಿದ್ಧ

ಸಂವಿಧಾನ ಮೇಲೆ ನಂಬಿಕೆ ಇಟ್ಟರೆ ನಕ್ಸಲರೊಂದಿಗೆ ಶಾಂತಿ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರ ಒಂದು ತಿಂಗಳ ಹಿಂದೆ ಹೇಳಿತ್ತು. ಇದೀಗ ನಕ್ಸಲ್​​ ಸಂಘಟನೆಯು ಮಾತುಕತೆಯ ಒಲವು ತೋರಿದೆ.

Naxal ready to talk with Chhattisgarh government
ಛತ್ತೀಸ್‌ಗಢ್​ ಸರ್ಕಾರದ ಮಾತುಕತೆ ಪ್ರಸ್ತಾವನೆ
author img

By

Published : May 7, 2022, 10:57 PM IST

Updated : May 7, 2022, 11:04 PM IST

ದಾಂತೇವಾಡ (ಛತ್ತೀಸ್‌ಗಢ​): ರಾಜ್ಯದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ನಕ್ಸಲರೊಂದಿಗೆ ಮಾತುಕತೆ ಸಿದ್ಧವಿದೆ ಎಂಬ ಛತ್ತೀಸ್‌ಗಢ​ ಸರ್ಕಾರದ ಪ್ರಸ್ತಾವನೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿಗಳು) ಎಂಬ ನಕ್ಸಲ್​​ ಸಂಘಟನೆ ಪ್ರತಿಕ್ರಿಯಿಸಿದೆ. ಮಾತುಕತೆಗೆ ಇಚ್ಛೆ ವ್ಯಕ್ತಪಡಿಸಿರುವ ಈ ಸಂಘಟನೆಯು ಕೆಲವು ಷರತ್ತುಗಳನ್ನೂ ಸರ್ಕಾರದ ಮುಂದಿಟ್ಟಿದೆ.

ದೇಶದ ಅತ್ಯಂತ ಕೆಟ್ಟ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಛತ್ತೀಸ್‌ಗಢ​ ಒಂದಾಗಿದೆ. ಹೀಗಾಗಿ ಸಂವಿಧಾನ ಮೇಲೆ ನಂಬಿಕೆ ಇಟ್ಟರೆ ನಕ್ಸಲರೊಂದಿಗೆ ಶಾಂತಿ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರ ಒಂದು ತಿಂಗಳ ಹಿಂದೆ ಹೇಳಿತ್ತು. ಇದೀಗ ನಕ್ಸಲ್​​ ಸಂಘಟನೆಯು ಮಾತುಕತೆಯ ಒಲವು ತೋರಿದ್ದು, ಜೈಲಿನಲ್ಲಿರುವ ನಕ್ಸಲ್​​ ನಾಯಕರ ಬಿಡುಗಡೆ ಮತ್ತು ಕಲಹ ಪೀಡಿತ ಪ್ರದೇಶಗಳಿಂದ ಭದ್ರತಾ ಪಡೆಗಳ ಹಿಂಪಡೆಯುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದೆ.

ಈ ಸಂಬಂಧ ಎರಡು ಪುಟಗಳ ಹೇಳಿಕೆಯನ್ನೂ ಈ ಸಂಘಟನೆ ಬಿಡುಗಡೆ ಮಾಡಿದ್ದು, ಸರ್ಕಾರ ದ್ವಂದ್ವ ನೀತಿಯನ್ನು ಹೊಂದಿದೆ ಎಂದೂ ಆರೋಪಿಸಿದೆ. ಒಂದೆಡೆ ಮಾತುಕತೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ನಕ್ಸಲ್​​ ಪೀಡಿತ ಪ್ರದೇಶ ಬಸ್ತರ್‌ನಲ್ಲಿ ವೈಮಾನಿಕ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ, ಇತ್ತ ಸಚಿವರೊಬ್ಬರು ಯಾವುದೇ ಷರತ್ತುಗಳಿಲ್ಲದೇ ಮಾತುಕತೆ ನಡೆಸುವುದಾದರೆ ಸರ್ಕಾರ ಸದಾ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ಜೆಡಿಯು- ಬಿಜೆಪಿ ಸರ್ಕಾರದ ನಿದ್ದೆ ಕದಿಯಲಿದ್ದಾರೆ ಪಿಕೆ- ಲಾಲೂ

Last Updated : May 7, 2022, 11:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.