ಅಲಿಗಢ : ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿರುವ ಬೆನ್ನೆಲೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಈ ಸಂಬಂಧ ಪ್ರತಿಭಟನೆ ನಡೆಸಲಾಗುತ್ತಿದೆ.
ಎಎಂಯುನಲ್ಲಿ ಹುಡುಗಿಯರು ಹಿಜಾಬ್ ಧರಿಸಿ ಕ್ಯಾಂಪಸ್‌ಗೆ ಬರುತ್ತಿದ್ದಾರೆ. ನಮ್ಮ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ನಮಗೆ ಬೇಕಾದುದನ್ನು ಧರಿಸಬಹುದೆಂದು ಸಂವಿಧಾನವೇ ಹೇಳಿದೆ.
ಹಾಗಾದರೆ, ಹಿಜಾಬ್ ಧರಿಸಲು ಏಕೆ ಸ್ವಾತಂತ್ರ್ಯವಿಲ್ಲ. ಎಎಂಯುನಲ್ಲಿ ಯಾವುದೇ ಡ್ರೆಸ್ ಕೋಡ್ ಇಲ್ಲ. ಇಲ್ಲಿ ಹುಡುಗಿಯರು ಜೀನ್ಸ್ ಜೊತೆಗೆ ಹಿಜಾಬ್ ಧರಿಸುತ್ತಾರೆ ಎಂದು ಎಎಂಯುನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಹೇಳಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಬೇಕು ಎಂದು ಎಎಂಯು ವಿದ್ಯಾರ್ಥಿಗಳ ಆಗ್ರಹವಾಗಿದೆ. ಸಿಖ್ಖರು ಧಾರ್ಮಿಕ, ಶಿಕ್ಷಣ ಸಂಸ್ಥೆ ಮತ್ತು ಕಚೇರಿಗಳಲ್ಲಿ ತಮ್ಮ ಪೇಟವನ್ನು ಧರಿಸುತ್ತಾರೆ. ಆದ್ರೆ, ನಮಗೆ ಮಾತ್ರ ಯಾಕೆ ಹಿಜಾಬ್ ತೆಗೆದು ಹಾಕುವಂತೆ ಹೇಳಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಎಎಂಯುನ ವಿದ್ಯಾರ್ಥಿಗಳು ಹಿಜಾಬ್ ಅನ್ನು ಧಾರ್ಮಿಕ ದೃಷ್ಟಿಕೋನದೊಂದಿಗೆ ಸಂಯೋಜಿಸಿದ್ದು, ಇದು ಅವರನ್ನು ರಕ್ಷಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಚಂಪಾರಣ್ ಸತ್ಯಾಗ್ರಹ ಪ್ರಾರಂಭವಾದ ಸ್ಥಳದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ
ವಿದ್ಯಾರ್ಥಿನಿ ತನ್ವಿ ಫಾತಿಮಾ ಮಾತನಾಡಿ, ಯುಪಿ ಚುನಾವಣೆಯೊಂದಿಗೆ ಹಿಜಾಬ್ ಅನ್ನು ಜೋಡಿಸಬಾರದು. ನಾವು ನಮ್ಮ ಧರ್ಮವನ್ನು ಆಚರಿಸಬಹುದು ಎಂಬುದು ನಮ್ಮ ಮೂಲಭೂತ ಹಕ್ಕಿನಲ್ಲಿಯೇ ಸೇರಿಸಲಾಗಿದೆ. ಇದರಲ್ಲಿ ಯಾವುದೇ ಸಮಸ್ಯೆ ಇರಬಾರದು. ಹಿಜಾಬ್ ಬಗ್ಗೆ ಜನರು ವಿಭಿನ್ನ ಅಭಿಪ್ರಾಯವನ್ನು ಹೊಂದಬಹುದು ಎಂದಿದ್ದಾರೆ.
ಹಿಜಾಬ್ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹಾಗಾಗಿ, ಈ ಬಗ್ಗೆ ಪ್ರತಿಕ್ರಿಯಿಸಲಾರೆ. ಎಎಂಯುನಲ್ಲಿ ಯಾವುದೇ ಡ್ರೆಸ್ ಕೋಡ್ ಇಲ್ಲ. ಹಾಗಾಗಿ, ವಿದ್ಯಾರ್ಥಿಗಳು ತಮ್ಮದೇ ಆದ ಉಡುಗೆಯನ್ನು ಧರಿಸಿ ವಿಶ್ವವಿದ್ಯಾಲಯಕ್ಕೆ ಬರುತ್ತಾರೆ ಎಂದು ಪ್ರೊಫೆಸರ್ ಮೊಹಮ್ಮದ್ ವಾಸಿಂ ಹೇಳಿದ್ದಾರೆ.