ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ 2023ರ ಚೊಚ್ಚಲ ಹರಾಜು ಪ್ರಕ್ರಿಯೆ ಸೋಮವಾರ ಮುಂಬೈ ನಗರದಲ್ಲಿ ನಡೆಯಿತು. ಹರಾಜು ಪ್ರಕ್ರಿಯೆಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಹೆಚ್ಚಿನ ಮೊತ್ತಕ್ಕೆ ಆರ್ಸಿಬಿ ತಂಡದ ಪಾಲಾಗುವ ಮೂಲಕ ಲೀಗ್ನ ದುಬಾರಿ ಆಟಗಾರ್ತಿಯಾಗಿದ್ದಾರೆ. ಸುಮಾರು 3.40 ಕೋಟಿ ರೂ.ಗೆ ಆರ್ಸಿಬಿ ತಂಡಕ್ಕೆ ಬಿಕರಿ ಆಗಿದ್ದಾರೆ ಸ್ಮೃತಿ ಮಂದಾನ. ಅಲ್ಲದೇ ಚೊಚ್ಚಲ ಲೀಗ್ನಲ್ಲೇ ಕೆಲವು ಸ್ಟಾರ್ ಆಟಗಾರ್ತಿಯರನ್ನ ಆರ್ಸಿಬಿ ತಂಡ ಖರೀದಿಸಿದೆ.
-
Join us in welcoming the first Royal Challenger, Smriti Mandhana! 😍
— Royal Challengers Bangalore (@RCBTweets) February 13, 2023 " class="align-text-top noRightClick twitterSection" data="
Welcome to RCB 🔥#PlayBold #WeAreChallengers #WPL2023 #WPLAuction pic.twitter.com/7q9j1fb8xj
">Join us in welcoming the first Royal Challenger, Smriti Mandhana! 😍
— Royal Challengers Bangalore (@RCBTweets) February 13, 2023
Welcome to RCB 🔥#PlayBold #WeAreChallengers #WPL2023 #WPLAuction pic.twitter.com/7q9j1fb8xjJoin us in welcoming the first Royal Challenger, Smriti Mandhana! 😍
— Royal Challengers Bangalore (@RCBTweets) February 13, 2023
Welcome to RCB 🔥#PlayBold #WeAreChallengers #WPL2023 #WPLAuction pic.twitter.com/7q9j1fb8xj
12 ಕೋಟಿ ಮಿತಿಯ ಹರಾಜಿನಲ್ಲಿ 11.09 ಕೋಟಿ ರೂ. ಖರ್ಚ ಮಾಡಿ ಒಟ್ಟು 18 ಆಟಗಾರ್ತಿಯರನ್ನು ಖರೀದಿ ಮಾಡಿರುವ ಆರ್ಸಿಬಿ ತಂಡ ಇನ್ನೂ 10 ಲಕ್ಷ ರೂ.ವನ್ನು ತನ್ನ ಅಕೌಂಟ್ನಲ್ಲಿ ಉಳಿಸಿಕೊಂಡಿದೆ. ಇದರಲ್ಲಿ 12 ಭಾರತೀಯ ಮತ್ತು 6 ವಿದೇಶಿ ಆಟಗಾರ್ತಿಯರನ್ನು ತಂಡ ಒಳಗೊಂಡಿದೆ. ಸ್ಮೃತಿ ಮಂದಾನಗೆ 3.40 ಕೋಟಿ ರೂಪಾಯಿ ಘೋಷಿಸಿರುವ ತಂಡ, ದಿಶಾ ಕಸತ್ ಅವರಿಗೆ 10 ಲಕ್ಷ ರೂ. ನೀಡಿ ಖರೀದಿ ಮಾಡುವ ಮೂಲಕ ಬ್ಯಾಟಿಂಗ್ ವಿಭಾಗಕ್ಕೆ ಸೇರ್ಪಡೆ ಮಾಡಿಕೊಂಡಿದೆ. ವಿಕೆಟ್ ಕೀಪರ್ ಆಗಿ ರಿಚಾ ಘೋಷ್ ಅವರನ್ನು 1.90 ಕೋಟಿಗೆ ಖರೀದಿ ಮಾಡಿದ್ದು, 10 ಲಕ್ಷ ರೂಪಾಯಿ ನೀಡಿ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಇಂದ್ರಾಣಿ ರಾಯ್ಗೆ ಮಣೆ ಹಾಕಿದೆ.
-
And… that's a wrap! We’ve had an incredible day. 🔥
— Royal Challengers Bangalore (@RCBTweets) February 13, 2023 " class="align-text-top noRightClick twitterSection" data="
What are your thoughts on the squad we’ve assembled, 12th Man Army? 😬#PlayBold #WeAreChallengers #WPL2023 #WPLAuction pic.twitter.com/9RIm2QiDZ6
">And… that's a wrap! We’ve had an incredible day. 🔥
— Royal Challengers Bangalore (@RCBTweets) February 13, 2023
What are your thoughts on the squad we’ve assembled, 12th Man Army? 😬#PlayBold #WeAreChallengers #WPL2023 #WPLAuction pic.twitter.com/9RIm2QiDZ6And… that's a wrap! We’ve had an incredible day. 🔥
— Royal Challengers Bangalore (@RCBTweets) February 13, 2023
What are your thoughts on the squad we’ve assembled, 12th Man Army? 😬#PlayBold #WeAreChallengers #WPL2023 #WPLAuction pic.twitter.com/9RIm2QiDZ6
ಬೌಲಿಂಗ್ ವಿಭಾಗದಲ್ಲೂ 5 ಸ್ಟಾರ್ ಆಟಗಾರ್ತಿಯರನ್ನು ಖರೀದಿ ಮಾಡುವ ಮೂಲಕ ಬೌಲಿಂಗ್ಗೆ ಹೆಚ್ಚಿನ ಒತ್ತು ಕೊಟ್ಟಿದೆ ಆರ್ಸಿಬಿ. ರೇಣುಕಾ ಸಿಂಗ್ಗೆ 1.50 ಕೋಟಿ ರೂ ಕೊಟ್ಟು ಖರೀದಿ ಮಾಡಿದ್ದು, ಈ ಮೂಲಕ ರೇಣುಕಾ ತಂಡದ ದುಬಾರಿ ಬೌಲರ್ ಆಗಿದ್ದಾರೆ. ಇನ್ನುಳಿದಂತೆ ಪ್ರೀತಿ ಬೋಸ್ಗೆ 30 ಲಕ್ಷ ರೂ, ಕೋಮಲ್ ಜೈಂಜದ್ 25 ಲಕ್ಷ ರೂ, ಸಹನಾ ಪವರ್ 10 ಲಕ್ಷ ರೂ, ಆಸ್ಟ್ರೇಲಿಯಾದ ಮೇಗನ್ಗೆ 40 ಲಕ್ಷ ರೂಗೆ ತಂಡ ಖರೀದಿ ಮಾಡಿದೆ.
ಇನ್ನು, 4 ಭಾರತೀಯ ಮತ್ತು 5 ವಿದೇಶಿ ಆಲ್ರೌಂಡರ್ ಆಟಗಾರ್ತಿಯರು ತಂಡದಲ್ಲಿದ್ದು, ಇದರಲ್ಲಿ ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿಗೆ 1.70 ಕೋಟಿ ರೂ ನೀಡಿ ತಂಡ ಖರೀದಿಸಿದೆ. ಈ ಮೂಲಕ ತಂಡದ ದುಬಾರಿ ಆಲ್ರೌಂಡರ್ ಎಂಬ ಹೆಗ್ಗಳಿಕೆಗೆ ಎಲ್ಲಿಸ್ ಪೆರ್ರಿ ಪಾತ್ರವಾಗಿದ್ದಾರೆ. ಇನ್ನುಳಿದಂತೆ ಸೋಫಿ ಡಿವೈನ್ 50 ಲಕ್ಷ ರೂ, ಹೀದರ್ ನೈಟ್ 40 ಲಕ್ಷ, ಎರಿನ್ ಬರ್ನ್ಸ್ 30 ಲಕ್ಷ ರೂ, ಡೇನ್ ವ್ಯಾನ್ ನೀಕರ್ಕ್ 30 ಲಕ್ಷ, ಶ್ರೇಯಾಂಕಾ ಪಾಟೀಲ್, ಪೂನಂ ಖೇಮ್ನಾರ್, ಆಶಾ ಶೋಭಾನಾ ತಲಾ 10 ಲಕ್ಷ ರೂ. ಮತ್ತು ಕನಿಕಾ ಅಹುಜಾ 35 ಲಕ್ಷ ರೂ.ಗೆ ತಂಡ ಖರೀದಿ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲದ ಆಟಗಾರ್ತಿಯರು: ಸ್ಮೃತಿ ಮಂಧಾನ, ದಿಶಾ ಕಸತ್, ರಿಚಾ ಘೋಷ್, ಇಂದ್ರಾಣಿ ರಾಯ್, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ಹೀದರ್ ನೈಟ್, ಎರಿನ್ ಬರ್ನ್ಸ್, ಡೇನ್ ವ್ಯಾನ್ ನೀಕರ್ಕ್, ಶ್ರೇಯಾಂಕಾ ಪಾಟೀಲ್, ಪೂನಂ ಖೇಮ್ನಾರ್, ಆಶಾ ಶೋಭಾನಾ, ಪ್ರೀತಿ ಬೋಸ್, ಕನಿಕಾ ಅಹುಜಾ, ಕೋಮಲ್ ಝಂಝಾದ್, ಸಹನಾ ಪವಾರ್, ಮೇಗನ್ ಸ್ಚುಟ್, ರೇಣುಕಾ ಸಿಂಗ್
ಇದನ್ನೂ ಓದಿ: ಇಂದು ಮುಂಬೈನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ