ETV Bharat / bharat

ಸಣ್ಣ ಹೂಡಿಕೆದಾರರನ್ನು ಆಕರ್ಷಿಸಲು RBI Retail Direct ಯೋಜನೆ ಜಾರಿ

ಸರ್ಕಾರಿ ಸ್ವತ್ತುಗಳಲ್ಲಿ ಹೂಡಿಕೆ ಮಾಡಲು ಅನುಕೂಲವಾಗುವಂತೆ RBI ’ಆರ್​​ಬಿಐ ರಿಟೇಲ್​ ಡೈರೆಕ್ಟ್’ ಎಂಬ ಯೋಜನೆಯನ್ನು ಜಾರಿಗೊಳಿಸಿದೆ.

RBI
RBI
author img

By

Published : Jul 13, 2021, 8:05 AM IST

ಮುಂಬೈ: ಸಣ್ಣ ಹೂಡಿಕೆದಾರರಿಗೆ RBI ಅನುಕೂಲ ಮಾಡಿಕೊಡಲು ಮುಂದಾಗಿದೆ. ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಲು ಅನುಕೂಲವಾಗುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ‘ಆರ್​​ಬಿಐ ರಿಟೇಲ್​ ಡೈರೆಕ್ಟ್’ ಎಂಬ ಯೋಜನೆಯನ್ನು ಸೋಮವಾರ ಜಾರಿಗೊಳಿಸಿದೆ.

ಸಣ್ಣ ಹೂಡಿಕೆದಾರರು ಸರ್ಕಾರಿ ಬಾಂಡ್‌ಗಳನ್ನು ನೇರವಾಗಿ ಖರೀದಿಸಲು ಮತ್ತು ಮಾರಾಟ ಮಾಡಲು ಆರ್​ಬಿಐ ಈ ಮೂಲಕ ಅವಕಾಶ ಕಲ್ಪಿಸಲಿದೆ. ಸರ್ಕಾರಿ ಸಾಲಪತ್ರಗಳ ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡುವುದನ್ನು ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.

2021 ರ ಫೆಬ್ರವರಿಯಲ್ಲಿ ಆರ್​ಬಿಐ ಈ ಯೋಜನೆಯನ್ನು ಘೋಷಿಸಿತ್ತು. ಇಲ್ಲಿಯ ತನಕ ಸಣ್ಣ ಹೂಡಿಕೆದಾರರು ನೇರವಾಗಿ ಸರ್ಕಾರಿ ಬಾಂಡ್ ಖರೀದಿಸಲು ಅವಕಾಶವಿರಲಿಲ್ಲ. ಈಗ ನೇರವಾಗಿ ಬಿಡ್ಡಿಂಗ್ ಮಾಡಲು ಸಾಧ್ಯವಾಗಲಿದೆ. ಆರ್‌ಬಿಐನ ಇ-ಕುಬೇರ್ ವೇದಿಕೆ ಮೂಲಕ ‘ಗಿಲ್ಟ್‌ ಸೆಕ್ಯುರಿಟೀಸ್‌ ಖಾತೆ’ ತೆರೆಯಬೇಕು. ನಂತರ ಆರ್‌ಬಿಐನ NDS-OM (ನೆಗೋಷಿಯೇಟೆಡ್ ಡೀಲಿಂಗ್ ಸಿಸ್ಟಮ್ ಆರ್ಡರ್ ಮ್ಯಾಚಿಂಗ್) ಮೂಲಕ ಬಿಡ್ ಸಲ್ಲಿಸಬಹುದು.

ಇದನ್ನೂ ಓದಿ:ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಬ್ಯಾಂಕಿಂಗ್ ಪರೀಕ್ಷೆ : IBPS ನಿರ್ಧಾರ ಖಂಡಿಸಿದ ಮನು ಬಳಿಗಾರ್

ಸಣ್ಣ ಅಥವಾ ಚಿಲ್ಲರೆ ಹೂಡಿಕೆದಾರರು ಭಾರತದಲ್ಲಿ ಉಳಿತಾಯ ಖಾತೆ ಹೊಂದಿದ್ದರೆ, ಈ ಯೋಜನೆಯಡಿ ನೊಂದಾಯಿಸಿಕೊಳ್ಳಬಹುದು ಮತ್ತು ಆರ್​ಡಿಜಿ ಖಾತೆಯನ್ನು ನಿರ್ವಹಿಸಬಹುದು. 1999ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುವ ಅನಿವಾಸಿ ಸಣ್ಣ ಹೂಡಿಕೆದಾರರು ಕೂಡ ಈ ಯೋಜನೆಗೆ ಅರ್ಹರಾಗಿದ್ದಾರೆ. ಇದರಲ್ಲಿ ಜಂಟಿ ಖಾತೆ ತೆರೆಯಲೂ ಅವಕಾಶವಿದೆ ಎಂದು ಆರ್​ಬಿಐ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.