ಹೈದರಾಬಾದ್: ಬಡ ವೃದ್ಧನೊರ್ವ ಶಸ್ತ್ರ ಚಿಕಿತ್ಸೆಗಾಗಿ ಕೂಡಿಟ್ಟಿದ್ದ 2 ಲಕ್ಷ ರೂಪಾಯಿ ನೋಟುಗಳನ್ನು ಇಲಿಗಳು ಹರಿದು ಹಾಕಿರುವ ಘಟನೆ ಮೆಹಬೂಬಬಾದ್ ಜಿಲ್ಲೆಯಲ್ಲಿ ನಡೆದಿದೆ.
ಇದರಿಂದ ದಿಕ್ಕು ತೋಚದಂತಾದ ರೆಡ್ಯಾ ಎಂಬ ವೃದ್ಧ ಸ್ಥಳೀಯರ ಸಲಹೆ ಮೇರೆಗೆ ಸಮೀಪದ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಆದರೆ ನೋಟುಗಳನ್ನು ಸಂಪೂರ್ಣವಾಗಿ ಹರಿದು ಹೋಗಿದ್ದರಿಂದ ಬ್ಯಾಂಕ್ ಸಿಬ್ಬಂದಿ ಹೈದರಾಬಾದ್‌ನಲ್ಲಿರುವ ಆರ್‌ಬಿಐ ಬ್ಯಾಂಕ್ ಸಂಪರ್ಕಿಸುವಂತೆ ಹೇಳಿದ್ದಾರೆ.
ಮೆಮಬೂಬಬಾದ್‌ನ ಇಂದಿರಾನಗರದ ರೆಡ್ಯಾ, ತನ್ ಸ್ಕೂಟರ್ ಮೂಲಕ ಸಮೀಪದ ಹಳ್ಳಿಗಳಿಗೆ ಹೋಗಿ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದು, ಒಮ್ಮೆ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಈ ವೇಳೆ ಹೊಟ್ಟೆಯಲ್ಲಿ ಗಡ್ಡೆ ಇರುವುದನ್ನು ಮೆಹಬೂಬಾಬಾದ್‌ನ ಖಾಸಗಿ ವೈದ್ಯರು ಪತ್ತೆ ಹಚ್ಚಿ, ಶಸ್ತ್ರ ಚಿಕಿತ್ಸೆಗೆ 4 ಲಕ್ಷ ರೂಪಾಯಿ ಆಗಲಿದೆ ಎಂದು ಹೇಳಿದ್ದಾರೆ. ಅಷ್ಟು ಹಣ ಇಲ್ಲದ ಕಾರಣ ವೃದ್ಧ ಮನೆಗೆ ವಾಪಸ್ ಆಗುತ್ತಾನೆ. ಆದರೆ ಮತ್ತೆ ಹೊಟ್ಟೆ ನೋವು ಜಾಸ್ತಿಯಾಗುತ್ತದೆ. ನೋವು ತಾಳಲಾರದೇ ಹೇಗಾದರೂ ಮಾಡಿ ಹಣ ಹೊಂದಿಸಬೇಕೆಂದು ಪಣ ತೊಟ್ಟು ತರಕಾರಿ ಮಾರಾಟದಿಂದ ಸ್ವಲ್ಪ ಹಣ ಹಾಗೂ ಸಾಲ ಮಾಡಿ ಒಟ್ಟು 2 ಲಕ್ಷ ರೂಪಾಯಿ ಒಟ್ಟುಗೂಡಿಸಿ ಮನೆಯಲ್ಲಿದ್ದ ಲಾಕರ್‌ನಲ್ಲಿ ಇಡುತ್ತಾರೆ.
ಲಾಕರ್ ತೆರೆದಾಗ ವೃದ್ಧನಿಗೆ ಶಾಕ್
ವೈದ್ಯರನ್ನು ಭೇಟಿ ಮಾಡಿ ಹೊಡ್ಡೆಯಲ್ಲಿನ ಗೆಡ್ಡೆ ತೆಗಿಸಲು ನಿರ್ಧರಿಸಿದ್ದ ವೃದ್ಧ ಮನೆಯಲ್ಲಿನ ಲಾಕರ್ ಓಪನ್ ಮಾಡಿದಾಗ ಅಚ್ಚರಿ ಕಾದಿತ್ತು. ಯಾಕೆಂದರೆ ಲಾಕರ್ ತೆಗೆದು ನೋಡಿದಾಗ ಅದರಲ್ಲಿ 2 ಲಕ್ಷ ರೂಪಾಯಿ ಹಣ ಇರಲಿಲ್ಲ. ಬದಲಾಗಿ ಸಣ್ಣ ಸಣ್ಣದಾರಿ ಹರಿದು ಹೋಗಿದ್ದ ನೋಟುಗಳು ಚೂರು ಚೂರಾಗಿದ್ದವು. ಇದರಿಂದ ಕ್ಷಣ ವೃದ್ಧ ಆಘಾತಕ್ಕೊಳಗಾಗಿದ್ದು, ಮುಂದೇನು ಮಾಡಬೇಕು ಎಂದು ತೋಚಲಾರದೇ, ಸ್ಥಳೀಯರ ಸಲಹೆ ಮೇರೆಗೆ ಸಮೀಪದ ಬ್ಯಾಂಕಿಗೆ ಹೋಗಿ ಇಲಿಗಳಿಂದ ಹಾನಿಗೊಳಗಾದ ನೋಟುಗಳ ಬಗ್ಗೆ ತಿಳಿಸಿದರು.
ಆ ನೋಟುಗಳನ್ನು ಸಂಪೂರ್ಣವಾಗಿ ಹರಿದು ಹೋಗಿದ್ದರಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ರೆಡ್ಯಾ ಅವರಿಗೆ ಹೇಳಿದ್ದಾರೆ. ಹೈದರಾಬಾದ್‌ನ ರಿಸರ್ವ್ ಬ್ಯಾಂಕ್‌ಗೆ ಭೇಟಿ ನೀಡುವಂತೆ ಸೂಚಿಸಿದ್ದಾರೆ.
ಆರ್‌ಬಿಐನವರು ಈ ನೋಟುಗಳನ್ನು ತೆಗೆದುಕೊಳ್ಳುತ್ತಾರೋ ಇಲ್ಲವೋ ಎಂಬ ಚಿಂತೆಯಲ್ಲಿರುವ ವೃದ್ಧ, ಚೂರಾಗಿರುವ ನೋಟುಗಳನ್ನು ಪಡೆಯಬೇಕು. ಇಲ್ಲವೇ ಶಸ್ತ್ರ ಚಿಕಿತ್ಸೆಗೆ ಬೇಕಾಗಿರುವ ಹಣವನ್ನು ನೀಡಬೇಕೆಂದು ತೆಲಂಗಾಣ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ. ಆದಷ್ಟು ಬೇಗ ವೃದ್ಧ ರೆಡ್ಯಾ ಅವರಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕಿದೆ.