ETV Bharat / bharat

ರಾಷ್ಟ್ರಪತಿ ಭವನ, ರಾಷ್ಟ್ರೀಯ ಯುದ್ಧ ಸ್ಮಾರಕದ ಮೇಲೆ ಪಾಕ್ ಉಗ್ರರ ಕಣ್ಣು

author img

By ETV Bharat Karnataka Team

Published : Sep 8, 2023, 9:37 AM IST

ಚೆನ್ನೈ, ಕೋಲ್ಕತ್ತಾ, ದೆಹಲಿಯಲ್ಲಿನ ಪ್ರಮುಖ ಸ್ಥಳಗಳ ರಹಸ್ಯ ಚಿತ್ರಗಳನ್ನು ಆರೋಪಿ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಗೆ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Rashtrapati Bhavan war memorial on Pak militants radar
ರಾಷ್ಟ್ತ್ರಪತಿ ಭವನ, ರಾಷ್ಟ್ರೀಯ ಯುದ್ಧ ಸ್ಮಾರಕದ ಮೇಲೆ ಪಾಕ್ ಉಗ್ರರ ಕಣ್ಣು...

ಕೋಲ್ಕತ್ತಾ (ಪಶ್ಚಿಮ ಬಂಗಾಳ): ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನ ಹಾಗೂ ರಾಷ್ಟ್ರೀಯ ಯುದ್ಧ ಸ್ಮಾರಕ ಸೇರಿದಂತೆ ದೇಶದ ವಿವಿಧ ಪ್ರದೇಶಗಳ ಮೇಲೆ ಪಾಕಿಸ್ತಾನದ ಉಗ್ರರು ಕೆಂಗಣ್ಣು ಬೀರಿದ್ದಾರೆ. ರಹಸ್ಯ ಮೂಲಗಳ ಮಾಹಿತಿ ಆಧರಿಸಿ ಬಿಹಾರದ ಪಾಕಿಸ್ತಾನಿ ಗೂಢಚಾರಿಯನ್ನು ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯಪಡೆ ಬಂಧಿಸಿದೆ. ಕೋಲ್ಕತ್ತಾ ಪೊಲೀಸರು ಆರೋಪಿಯನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದು, ಆತಂಕಕಾರಿ ವಿಷಯಗಳು ಬಯಲಾಗಿವೆ.

ಕೋಲ್ಕತ್ತಾ ಪೊಲೀಸ್ ಎಸ್‌ಟಿಎಫ್‌ನ ವಿಶೇಷ ಘಟಕವು ಬಿಹಾರದಲ್ಲಿ ಭಕ್ತ ಬನ್ಶಿ ಝಾ ಎಂಬಾತನ ಮನೆಯಲ್ಲಿ ಶೋಧ ನಡೆಸಿ ಆತನನ್ನು ಬಂಧಿಸಿದೆ. ಮೂಲಗಳ ಪ್ರಕಾರ, ಈ ಕುರಿತು ದೆಹಲಿ ಪೊಲೀಸರು ಕೂಡಾ ಈಗಾಗಲೇ ಕೋಲ್ಕತ್ತಾ ಪೊಲೀಸ್ ಎಸ್‌ಟಿಎಫ್‌ನೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಅಗತ್ಯಬಿದ್ದರೆ, ದೆಹಲಿ ಪೊಲೀಸರು ಬಂಧಿತ ಭಕ್ತ ಬನ್ಶಿ ಜಾನ್‌ನನ್ನು ತಮ್ಮ ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಲಿದ್ದಾರೆ.

ಆರೋಪಿಯು ಚೆನ್ನೈ, ಕೋಲ್ಕತ್ತಾ, ದೆಹಲಿಯಲ್ಲಿ ರಹಸ್ಯವಾಗಿ ಚಿತ್ರಗಳನ್ನು ತೆಗೆದು ಪಾಕಿಸ್ತಾನಿ ಮಹಿಳೆಗೆ ಕಳುಹಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಹೆಸರು ಹೇಳಲಿಚ್ಛಿಸದ ಕೋಲ್ಕತ್ತಾ ಪೊಲೀಸ್‌ನ ಎಸ್‌ಟಿಎಫ್‌ನ ಉಸ್ತುವಾರಿ ಪೊಲೀಸ್ ಅಧಿಕಾರಿಯೊಬ್ಬರು, ''ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳ ವಿವಿಧ ಚಿತ್ರಗಳನ್ನು ಆರೋಪಿಯಿಂದ ಪಡೆದುಕೊಳ್ಳಲಾಗಿದೆ. ಅವುಗಳಲ್ಲಿ ರಾಷ್ಟ್ರಪತಿ ಭವನ, ದೆಹಲಿಯ ವಾರ್ ಆಫ್ ಮೆಮೋರಿಯಲ್ ಸೇರಿದಂತೆ ಪ್ರಮುಖ ಹಾಗೂ ಸಂರಕ್ಷಿತ ಪ್ರದೇಶಗಳ ಫೋಟೋಗಳು ಮತ್ತು ವಿಡಿಯೋಗಳಿವೆ. ಇದರಿಂದ ದೇಶದ ವಿವಿಧ ಪ್ರಮುಖ ಸ್ಥಳಗಳು ಐಸಿಸ್ ಉಗ್ರ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿವೆ ಎಂದು ತಿಳಿಸಿದ್ದಾರೆ.

ಚಿತ್ರಗಳು, ಮಹತ್ವದ ದಾಖಲೆಗಳು ವಶಕ್ಕೆ: ''ಕೋಲ್ಕತ್ತಾ ಪೊಲೀಸರ ಎಸ್​ಟಿಎಫ್ ಆಗಸ್ಟ್ 29ರಂದು ಬೆಳಿಗ್ಗೆ ಬಿಹಾರದಿಂದ ವ್ಯಕ್ತಿಯನ್ನು ಬಂಧಿಸಿತು. ಭಕ್ತ ಬನ್ಶಿ ಝಾ ಪಾಕಿಸ್ತಾನದ ಹಲವರಿಗೆ ಅನೇಕ ಬಾರಿ ದೂರವಾಣಿ ಕರೆಗಳನ್ನು ಮಾಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿದ ನಂತರ, ಆರೋಪಿಯನ್ನು ವಶಕ್ಕೆ ಪಡೆದು ರಿಪನ್ ಸ್ಟ್ರೀಟ್ ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ಆತನನ್ನು ಬಂಧಿಸಲಾಗಿದೆ. ಬಂಧಿತನಿಂದ ಎಸ್‌ಟಿಎಫ್‌ಗೆ ಹಲವು ಚಿತ್ರಗಳು ಮತ್ತು ಮಹತ್ವದ ದಾಖಲೆಗಳು ದೊರೆತಿವೆ. ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ'' ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋಲ್ಕತ್ತಾ ಪೊಲೀಸರ ಎಸ್​ಟಿಎಫ್ ಪ್ರಕಾರ, ವ್ಯಕ್ತಿ ಕೋಲ್ಕತ್ತಾಕ್ಕೆ ಬಂದು ಬಾಲಿ ಸೇತುವೆಯ ವಿವಿಧ ಚಿತ್ರಗಳನ್ನು ಮತ್ತು ಬಾಲಿ ಸೇತುವೆಯ ಪಕ್ಕದಲ್ಲಿರುವ ದೇವಾಲಯದ ಚಿತ್ರವನ್ನು ಪಾಕಿಸ್ತಾನದ ಮಹಿಳೆಗೆ ಕಳುಹಿಸಿದ್ದಾನೆ. ಮಹಿಳೆ ಪಾಕಿಸ್ತಾನಿ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಕೆಲಸ ಮಾಡುತ್ತಾಳೆ. ಇದರಿಂದಾಗಿ ಲಾಲ್ಬಜಾರ್ ಬಾಲಿ ಸೇತುವೆಯೂ ಉಗ್ರರ ಗುರಿಯಾಗಿತ್ತು ಎಂಬುದು ಖಚಿತ ಎಂದು ಲಾಲ್‌ಬಜಾರ್ ಪೊಲೀಸರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಪೂಂಚ್ ಎನ್‌ಕೌಂಟರ್ ಸ್ಥಳದ ಬಳಿ ಅಪಾರ ಶಸ್ತ್ರಾಸ್ತ್ರ, ಮದ್ದುಗುಂಡು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.