ಹೈದರಾಬಾದ್ (ತೆಲಂಗಾಣ): ಮಾರ್ಚ್ 8 ಅನ್ನು ವಿಶ್ವ ಮಹಿಳಾ ದಿನವನ್ನಾಗಿ ಎಲ್ಲೆಡೆ ಆಚರಿಸಲಾಗುತ್ತದೆ. ಇದರ ಪ್ರಯುಕ್ತ ಜಗತ್ತಿನ ಅತಿ ದೊಡ್ಡ ಫಿಲ್ಮ್ ಸಿಟಿ ಎಂದು ಗಿನ್ನೆಸ್ ದಾಖಲೆ ಬರೆದಿರುವ ರಾಮೋಜಿ ಫಿಲ್ಮ್ ಸಿಟಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಮಾರ್ಚ್ 1ರಿಂದ 31ರವರೆಗೆ ಒಂದು ತಿಂಗಳ ಕಾಲ ಈ ಕೊಡುಗೆ ಲಭ್ಯ.!
ರಜಾ ದಿನಗಳನ್ನು ಆನಂದಿಸುವವರಿಗೆ ರಾಮೋಜಿ ಫಿಲ್ಮ್ ಸಿಟಿ ಮೆಚ್ಚಿನ ತಾಣ. ಈ ಬಾರಿ ಪರಿಪೂರ್ಣವಾಗಿ ಒಂದು ತಿಂಗಳು 'ಮಹಿಳಾ ತಿಂಗಳ ವಿಶೇಷ'ವನ್ನಾಗಿ ಆಚರಿಸಲು ಚಿತ್ರನಗರಿ ವೇದಿಕೆ ಸಜ್ಜಾಗಿದೆ. ಇದರೊಂದಿಗೆ ಅನೇಕ ಮನರಂಜನೆ ಕಾರ್ಯಕ್ರಮಗಳನ್ನೂ ಆಯೋಜಿಸಿದೆ ಎಂದು ಫಿಲ್ಮ್ ಸಿಟಿಯ ವಕ್ತಾರರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ. ಈ ಬಾರಿ ವಿಶೇಷವಾಗಿ ಒಬ್ಬ ಮಹಿಳಾ ಅತಿಥಿಯೊಂದಿಗೆ ಮತ್ತೊಬ್ಬರಿಗೆ ಟಿಕೆಟ್ ಉಚಿತ ಇರಲಿದೆ. ಅಂದರೆ, ಒಂದು ಟಿಕೆಟ್ ಖರೀದಿಸಿದರೆ ಇನ್ನೊಬ್ಬ ಮಹಿಳೆ ಅಥವಾ ಬಾಲಕಿ ಉಚಿತವಾಗಿ ಫಿಲ್ಮ್ ಸಿಟಿ ನೋಡಬಹುದು.
ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿ ಮುಡಿಗೆ ಮತ್ತೊಂದು ಮುಕುಟ... ಅತ್ಯುತ್ತಮ ಆತಿಥ್ಯ ಪ್ರಶಸ್ತಿಯ ಗರಿ
ರಾಮೋಜಿ ಫಿಲ್ಮ್ ಸಿಟಿಯು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಲಿದೆ. ಬರ್ಡ್ ಪಾರ್ಕ್, ಬಟರ್‌ಫ್ಲೈ ಪಾರ್ಕ್ ಮತ್ತು ಬೋನ್ಸಾಯ್ ಗಾರ್ಡನ್‌ಗೆ ಭೇಟಿ ನೀಡಬಹುದು. ಎರಡು ಸಾವಿರ ಎಕರೆ ಪ್ರದೇಶದಲ್ಲಿ ಫಿಲ್ಮ್ ಸಿಟಿ ಹರಡಿಕೊಂಡಿದೆ. ನೈಸರ್ಗಿಕ ಮತ್ತು ಪ್ರಶಾಂತ ವಾತಾವರಣವನ್ನು ದಿನವಿಡೀ ನೀವು ಸವಿಯಬಹುದು. ಅಲ್ಲದೇ, ರಾಮೋಜಿ ಅಡ್ವೆಂಚರ್ @ಸಾಹಸ್‌ನಲ್ಲಿ ಸಾಹಸ ಚಟುವಟಿಕೆಗಳ ರೋಮಾಂಚಕ ಅನುಭವವನ್ನು ಪ್ರವಾಸಿಗರು ಪಡೆಯಬಹುದು ಎಂದು ವಕ್ತಾರರು ಹೇಳಿದ್ದಾರೆ.
ಪ್ರವಾಸಿಗರಿಗೆ ಮಾತ್ರವಲ್ಲ, ಚಲನಚಿತ್ರ ನಿರ್ಮಾಪಕರ ಪಾಲಿಗೂ ರಾಮೋಜಿ ಫಿಲ್ಮ್ ಸಿಟಿಯು ಸ್ವರ್ಗವಾಗಿದೆ. ಅದೇ ರೀತಿಯಾಗಿ ಚಲನಚಿತ್ರ ಪ್ರವಾಸೋದ್ಯಮದ ತಾಣವೂ ಆಗಿದೆ. ಪ್ರತಿ ವರ್ಷ ಸುಮಾರು 200 ಚಲನಚಿತ್ರಗಳ ತಂಡಗಳು ಇಲ್ಲಿಗೆ ಬರುತ್ತವೆ. ಇದುವರೆಗೆ ಬಹುತೇಕ ಎಲ್ಲ ಭಾರತೀಯ ಭಾಷೆಗಳ 2,500ಕ್ಕೂ ಹೆಚ್ಚು ಚಲನಚಿತ್ರಗಳನ್ನು ಚಿತ್ರೀಕರಿಸಲಾಗಿದೆ ಎಂದು ವಿವರಿಸಿದ್ದಾರೆ.
ಮಹಿಳೆಯರು ತಮ್ಮ ಮಹಿಳಾ ಸಹೋದ್ಯೋಗಿಗಳು ಅಥವಾ ಸ್ನೇಹಿತರೊಂದಿಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಆನಂದಿಸಬಹುದು. 'ಮಹಿಳಾ ತಿಂಗಳ ವಿಶೇಷ'ವಾಗಿ ಮಹಿಳೆಯರಿಗಾಗಿಯೇ ಒಂದು ಉಚಿತ ಟಿಕೆಟ್ ಆಫರ್ ನೀಡಲಾಗುತ್ತಿದೆ. ಆನ್‌ಲೈನ್ ಮತ್ತು ಮುಂಗಡ ಬುಕಿಂಗ್ಗೆ ಮಾತ್ರ ಆಫರ್ ಲಭ್ಯ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ, www.ramojifilmcity.com ಗೆ ಲಾಗ್ ಇನ್ ಆಗಬಹುದು ಅಥವಾ ಟ್ರೋಲ್ ಫ್ರಿ ನಂಬರ್ 1800 120 2999ಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಬೈ ಟ್ರಾವೆಲ್ ಟ್ರೇಡ್ ಶೋ: ಜನಾಕರ್ಷಣೆಯ ಕೇಂದ್ರಬಿಂದುವಾದ ರಾಮೋಜಿ ಫಿಲ್ಮ್ ಸಿಟಿ ಸ್ಟಾಲ್