ETV Bharat / bharat

ರಾಮೋಜಿ ಫಿಲಂ ಸಿಟಿ ಪುನಾರಂಭ; ಪ್ರಥಮ ದಿನವೇ ಸಾವಿರಾರು ಪ್ರವಾಸಿಗರ ಆಗಮನ - ರಾಮೋಜಿ ಫಿಲಂ ಸಿಟಿ ನಂಬರ್​

ವಿಶ್ವದ ಅತಿ ದೊಡ್ಡ ಫಿಲಂ ಸಿಟಿ ಎಂದು ಗಿನ್ನೀಸ್ ವಿಶ್ವ ದಾಖಲೆಯನ್ನು ಹೊಂದಿರುವ ರಾಮೋಜಿ ಫಿಲಂ ಸಿಟಿಯನ್ನು ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಮಾರ್ಚ್​ನಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಈಗ ಫಿಲಂ ಸಿಟಿ ಮತ್ತೆ ಪ್ರೇಕ್ಷಕರಿಗಾಗಿ ತೆರೆದಿದ್ದು, ಫಿಲಂ ಸಿಟಿಯ ಕಣ್ಣು ಕೋರೈಸುವ ವೈಭವವನ್ನು ವೀಕ್ಷಿಸಲು ಪ್ರೇಕ್ಷಕರ ದಂಡೇ ಹರಿದುಬರತೊಡಗಿದೆ.

ramoji-film-city-restarted
ರಾಮೋಜಿ ಫಿಲಂ ಸಿಟಿ
author img

By

Published : Feb 18, 2021, 11:00 PM IST

ಹೈದರಾಬಾದ್ (ತೆಲಂಗಾಣ): ವಿಶ್ವದ ಅತಿ ದೊಡ್ಡ ಫಿಲಂ ಸಿಟಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಇಲ್ಲಿನ ರಾಮೋಜಿ ಫಿಲಂ ಸಿಟಿ ಇಂದಿನಿಂದ (ಫೆ.18) ಮತ್ತೆ ಪ್ರೇಕ್ಷಕರ ವೀಕ್ಷಣೆಗೆ ತೆರೆದುಕೊಂಡಿದೆ. ಫಿಲಂ ಸಿಟಿಯ ದರ್ಶನ ಆರಂಭದ ಮೊದಲ ದಿನವೇ ಸಾವಿರಾರು ಪ್ರೇಕ್ಷಕರು ಆಗಮಿಸಿ, ಫಿಲಂ ಸಿಟಿಯ ಅದ್ದೂರಿ ವೈಭವವನ್ನು ಕಣ್ತುಂಬಿಕೊಂಡರು.

ವಿಶ್ವದ ಅತಿ ದೊಡ್ಡ ಫಿಲಂ ಸಿಟಿ ಎಂದು ಗಿನ್ನೀಸ್ ವಿಶ್ವ ದಾಖಲೆಯನ್ನು ಹೊಂದಿರುವ ರಾಮೋಜಿ ಫಿಲಂ ಸಿಟಿಯನ್ನು ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಮಾರ್ಚ್​ನಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಈಗ ಫಿಲಂ ಸಿಟಿ ಮತ್ತೆ ಪ್ರೇಕ್ಷಕರಿಗಾಗಿ ತೆರೆದಿದ್ದು, ಫಿಲಂ ಸಿಟಿಯ ಕಣ್ಣು ಕೋರೈಸುವ ವೈಭವವನ್ನು ವೀಕ್ಷಿಸಲು ಪ್ರೇಕ್ಷಕರ ದಂಡೇ ಹರಿದುಬರತೊಡಗಿದೆ.

ಫಿಲಂ ಸಿಟಿಯುದ್ದಕ್ಕೂ ಹರಡಿರುವ ಎಲ್ಲ ಎಂಟರಟೇನ್​ಮೆಂಟ್ ಜೋನ್​ಗಳಲ್ಲಿ ಕೋವಿಡ್​ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗಿದ್ದು, ನೈರ್ಮಲ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಚಾಚೂ ತಪ್ಪದೆ ಅನುಸರಿಸಲಾಗುತ್ತಿದೆ. ಇನ್ನು ಪ್ರೇಕ್ಷಕರ ಮಧ್ಯೆ ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್​ ಮಾರ್ಕಿಂಗ್​ಗಳನ್ನು ಸಹ ಅಳವಡಿಸಿಕೊಳ್ಳಲಾಗಿದೆ. ಅತಿ ಹೆಚ್ಚು ಸ್ಪರ್ಶಕ್ಕೆ ಬರುವ ಎಲ್ಲ ಮೇಲ್ಮೈಗಳನ್ನು ಮೇಲಿಂದ ಮೇಲೆ ಡಿಸ್​ಇನ್ಫೆಕ್ಟಂಟ್​ಗಳ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ. ಸುರಕ್ಷತಾ ಕ್ರಮಗಳ ಬಗ್ಗೆ ತರಬೇತಿ ಪಡೆದ ಪರಿಣಿತರು ಪ್ರವಾಸಿಗರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಗೈಡ್ ಮಾಡುತ್ತಿದ್ದಾರೆ.

2 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿರುವ ರಾಮೋಜಿ ಫಿಲಂ ಸಿಟಿ ತನ್ನ ವಿಷಯಾಧಾರಿತ ಮನರಂಜನೆ, ಆಕರ್ಷಕ ಉದ್ಯಾನಗಳು, ಮೋಜಿನ ಶೋಗಳು, ಪುಟಿಯುವ ಕಾರಂಜಿಗಳು ಹಾಗೂ ಇನ್ನೂ ಹಲವಾರು ರೀತಿಯ ಕ್ರಿಯಾಶೀಲ ಮನರಂಜನಾ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.

ವಿಶೇಷವಾಗಿ ತಯಾರಿಸಲಾದ ವಾಹನಗಳಲ್ಲಿ ಕುಳಿತು ಪ್ರಥಮ ದಿನದಂದು ಪ್ರವಾಸಿಗರು ಫಿಲಂ ಸಿಟಿ ಸೌಂದರ್ಯವನ್ನು ಆಸ್ವಾದಿಸಿದರು. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಬ್ಲಾಕ್ ಬಸ್ಟರ್ ಮೂವಿ ಎಂದು ಹೆಸರಾದ 'ಬಾಹುಬಲಿ' ಚಲನಚಿತ್ರ ಶೂಟಿಂಗ್ ಸೆಟ್​ನ ಅಗಾಧತೆಯನ್ನು ಕಂಡು ಪ್ರೇಕ್ಷಕರು ಮಂತ್ರಮುಗ್ಧರಾದರು.

ನಮ್ಮ ದೇಶದ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರ್ಪಡಿಸುವ 'ಸ್ಪಿರಿಟ್ ಆಫ್ ರಾಮೋಜಿ' ವರ್ಣರಂಜಿತ ಲೈವ್ ಶೋ, 60ರ ದಶಕದಲ್ಲಿ ಹಾಲಿವುಡ್​ ಮೂವಿಗಳ ಪ್ರಮುಖ ಆಕರ್ಷಣೆಯಾಗಿದ್ದ ಕೌಬಾಯ್​ ಆಧರಿತ ವೈಲ್ಡ್​ ವೆಸ್ಟ್​ ಸ್ಟಂಟ್​, ವಿಶೇಷ ಆ್ಯನಿಮೇಟೆಡ್ ಶೋಗಳು ಹಾಗೂ ನುರಿತ ಕಲಾವಿದರು ಪ್ರಸ್ತುತ ಪಡಿಸಿದ ವಿಭಿನ್ನ ಪ್ರದರ್ಶನಗಳು ಪ್ರವಾಸಿಗರ ಮನಸೂರೆಗೊಂಡವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.