ಗಯಾ (ಬಿಹಾರ) : ಇಲ್ಲಿನ ಹಿಂದೂ ಸಮುದಾಯದ ಯುವಕ ಕಳೆದ 8 ವರ್ಷಗಳಿಂದ ರೋಜಾ ಆಚರಿಸುತ್ತಾ ಬರುತ್ತಿದ್ದು, ಇಫ್ತಾರ್ ಕೂಟಗಳನ್ನೂ ಆಯೋಜಿಸುತ್ತಿದ್ದಾರೆ. ಗಯಾ ನಗರದ ಬಾಂಗ್ಲಾಸ್ತಾನ ಪ್ರದೇಶದ ನಿವಾಸಿ ಅಮರದೀಪ್ ಕುಮಾರ್ ಸಿನ್ಹಾ ಉಪವಾಸ ಆಚರಿಸುತ್ತಿದ್ದಾರೆ. ಹಿಂದೊಮ್ಮೆ ಅನಾರೋಗ್ಯ ಮತ್ತಿತರ ಕಾರಣಗಳಿಂದ ಇವರ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತಂತೆ. ಈ ವೇಳೆ ಸ್ನೇಹಿತರೊಬ್ಬರು, ರಂಜಾನ್ ಉಪವಾಸ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸಲಹೆ ನೀಡಿದ್ದರಂತೆ. ಅಂದಿನಿಂದ ಯುವಕ ಉಪವಾಸ ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪ್ರಾರ್ಥನೆ ಬಳಿಕ ಶ್ರೀಗಳ ಆಶೀರ್ವಾದ ಪಡೆದ ಮುಸ್ಲಿಮರು.. ಸೌಹಾರ್ದತೆಗೆ ಸಾಕ್ಷಿಯಾದ ಮೂರುಸಾವಿರ ಮಠ
ಇದನ್ನೂ ಓದಿ : ಬಾಗಲಕೋಟೆ: ಇಫ್ತಾರ್ ಕೂಟದಲ್ಲಿ ಹಿಂದೂ-ಮುಸ್ಲಿಮರು ಭಾಗಿ
ಇಲ್ಲಿನ ಕೆಲವು ಮುಸ್ಲಿಂ ಕುಟುಂಬಗಳೂ ಹಿಂದೂ ಹಬ್ಬಗಳಲ್ಲಿ ಭಾಗಿಯಾಗುತ್ತಾರೆ. ಹೀಗಾಗಿ, ನಾವೇಕೆ ರಂಜಾನ್ ಉಪವಾಸ ಮಾಡಬಾರದು ಎಂದು ಅಮರದೀಪ್ ಕುಮಾರ್ ಸಿನ್ಹಾ ಹೇಳಿದರು. "ನನ್ನ ಕುಟುಂಬ ತೊಂದರೆಯಲ್ಲಿತ್ತು. ಬಿಕ್ಕಟ್ಟಿನ ಸಮಯದಲ್ಲಿ ಸ್ನೇಹಿತನ ಸಲಹೆಯ ಮೇರೆಗೆ ಉಪವಾಸ ಪ್ರಾರಂಭಿಸಿದ್ದೆ. ಅಲ್ಲಾ ನನ್ನೆಲ್ಲಾ ಆಸೆಯನ್ನು ಪೂರೈಸಿದ್ದಾರೆ. ಅಂದಿನಿಂದ ನಾನು ನಿರಂತರವಾಗಿ ಉಪವಾಸ ಮಾಡುತ್ತಿದ್ದೇನೆ. ರೋಜಾದ ಎಲ್ಲ ನಿಯಮಗಳನ್ನೂ ಕ್ರಮಬದ್ಧವಾಗಿ ಅನುಸರಿಸುತ್ತಿದ್ದೇನೆ. ಮುಸ್ಲಿಂ ಸ್ನೇಹಿತರು ಮತ್ತು ಹಿಂದೂ ಸ್ನೇಹಿತರೊಂದಿಗೆ ಇಫ್ತಾರ್ ಕೂಟಗಳನ್ನು ಸಹ ನಡೆಸಲಾಗುತ್ತದೆ" ಎಂದರು.
ಇದನ್ನೂ ಓದಿ: ದೇಶಾದ್ಯಂತ ಸಂಭ್ರಮದ ರಂಜಾನ್.. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು
ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆ, ಗಲಭೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇತ್ತೀಚೆಗೆ ಬಿಹಾರದಲ್ಲಿ ರಾಮನವಮಿ ಹಬ್ಬದ ನಂತರ ಹಿಂಸಾಚಾರ ವರದಿಯಾಗಿತ್ತು. ಈ ನಡುವೆ ಹಿಂದೂ ಯುವಕ ಪರಸ್ಪರ ಸಹೋದರತ್ವ ಮತ್ತು ಧರ್ಮಗಳನ್ನು ಗೌರವಿಸುವ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ರಂಜಾನ್ ಪ್ರಾರ್ಥನೆ ವೇಳೆ ಇಮಾಮ್ ಹೆಗಲೇರಿತು ಬೆಕ್ಕು: ವಿಡಿಯೋ ನೋಡಿ