ಹೈದರಾಬಾದ್: ಆಸ್ಕರ್ ಪ್ರಶಸ್ತಿ ಸಮಾರಂಭದ ಹಿನ್ನೆಲೆ ಅಮೆರಿಕಕ್ಕೆ ತೆರಳಿದ್ದ 'RRR' ಚಿತ್ರದ ನಟ ರಾಮ್ಚರಣ್ ನಿನ್ನೆ ರಾತ್ರಿ ತವರಿಗೆ ಮರಳಿದ್ದು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇತ್ತೀಚೇಗೆ ರಾಮಚರಣ್ ಮತ್ತು ಎನ್‌ಟಿಆರ್ ನಟನೆಯ RRR ಚಿತ್ರದ 'ನಾಟು ನಾಟು' ಹಾಡಿಗೆ ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಗೀತೆ ದೇಶ ಮಾತ್ರವಲ್ಲದೇ ವಿಶ್ವಮಟ್ಟದಲ್ಲೇ ಪ್ರಖ್ಯಾತಿ ಗಳಿಸಿತ್ತು. ಅಷ್ಟೇ ಅಲ್ಲದೇ ಜಾಗತಿಕ ಗುಣಮಟ್ಟದ ಇಂಗ್ಲಿಷ್ ಹಾಡುಗಳನ್ನೂ ಹಿಂದಿಕ್ಕಿ ನಾಟು ನಾಟು ಹಾಡು ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಗಮನ ಸೆಳೆದಿತ್ತು.
ಇನ್ನು ಸಂಗೀತ ನಿರ್ದೇಶಕ ಕೀರವಾಣಿ ಸಂಯೋಜನೆಯ 'ನಾಟು ನಾಟು' ಹಾಡಿಗೆ ಚಿತ್ರದಲ್ಲಿ ಮಲ್ಟಿಸ್ಟಾರ್ಗಳಾದ ನಟ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಭರ್ಜರಿ ಸ್ಟೆಪ್ಸ್ ಸಖತ್ ಫೇಮಸ್ ಆಗಿದ್ದು, ಈ ಹಾಡು ಸಾಮಾಜಿಕಿ ಜಾಲತಾಣಗಳಲ್ಲೂ ವೈರಲ್ ಆಗಿತ್ತು. ಈ ಹಾಡಿಗೆ ಅನೇಕ ನಟ, ನಟಿಯರು ಸೇರಿದಂತೆ ವಿದೇಶಿಗಳು ಸ್ಟೇಪ್ಸ್ ಹಾಕಿದ್ದ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ.
ಇನ್ನು ಈ ಹಾಡಿಗಾಗಿ ಉಕ್ರೇನ್‌ನಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಹಾಡು ಫೈನಲ್ ಹಂತಕ್ಕೆ ತಲುಪಲು 43 ರಿ ಟೇಕ್‌ಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಸಿನಿಮಾ ತಂಡ ಹೇಳುತ್ತದೆ. ಸಿಪ್ಲಿಗುಂಜ್ ಮತ್ತು ಭೈರವ ಈ ಗೀತೆಗೆ ಧ್ವನಿಯಾಗಿದ್ದರು. ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಹಿಂದಿಯಲ್ಲಿ 'ನಾಚೋ ನಾಚೋ', ತಮಿಳಿನಲ್ಲಿ 'ನಾಟ್ಟು ಕೂತು', ಕನ್ನಡದಲ್ಲಿ 'ಹಳ್ಳಿ ನಾಟು' ಮತ್ತು ಮಲಯಾಳಂನಲ್ಲಿ 'ಕಾರಿಂತೋಲ್' ಎಂಬ ಹೆಸರಿನಲ್ಲಿ ಹಾಡು ಬಿಡುಗಡೆಯಾಗಿತ್ತು.
ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ (ಮಾರ್ಚ್,13) ರಂದು ನಡೆದ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ 'ಆರ್‌ಆರ್‌ಆರ್' ತೆಲುಗು ಸಿನಿಮಾದ ಜನಪ್ರಿಯ 'ನಾಟು ನಾಟು' ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತ್ತು. ಈ ಮೂಲಕ ಎರಡು ದಶಕಗಳ ಬಳಿಕ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡು 'ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಆಸ್ಕರ್ ಪಡೆದ ಮೊದಲ ಭಾರತೀಯ ಗೀತೆಯಾಗಿ ಹೊರಹೊಮ್ಮಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಗೀತೆ, ವಿಶ್ವಮಟ್ಟದಲ್ಲೇ ಪ್ರಖ್ಯಾತಿ ಗಳಿಸಿಕೊಂಡಿದೆ. ಜಾಗತಿಕ ಗುಣಮಟ್ಟದ ಇಂಗ್ಲಿಷ್ ಹಾಡುಗಳನ್ನೂ ಹಿಂದಿಕ್ಕಿ ನಾಟು ನಾಟು ಪ್ರತಿಷ್ಟಿತ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಭಾರತೀಯ ಚಿತ್ರರಂಗಕ್ಕೆ ಮಾದರಿಯಾಗಿದೆ. ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಪ್ರಶಸ್ತಿ ಸ್ವೀಕರಿಸಿದ್ದರು.
ಪ್ರಶಸ್ತಿಗೆ ರೇಸ್‌ನಲ್ಲಿದ್ದ ಗೀತೆಗಳು: ಈ ವರ್ಷದ ಅಕಾಡೆಮಿ ಪ್ರಶಸ್ತಿಗೆ ಭಾರತದ 'ನಾಟು ನಾಟು' ಹಾಡು ಮತ್ತು ಲಿಫ್ಟ್ ಮಿ ಅಪ್ , ದಿಸ್ ಈಸ್ ಲೈಫ್, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಹಾಡುಗಳು ನಾಮನಿರ್ದೇಶನಗೊಂಡಿದ್ದವು. ಆದ್ರೆ, ಎಲ್ಲವನ್ನೂ ಹಿಂದಿಕ್ಕಿ ಆರ್‌ಆರ್‌ಆರ್ ಸಿನಿಮಾದ ಹಾಡು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಇದನ್ನೂ ಓದಿ: ನನ್ನ ಜೀವನದ ಅತ್ಯುತ್ತಮ ಕ್ಷಣ.. ಆಸ್ಕರ್ ಬಗ್ಗೆ ಜೂ. ಎನ್‌ಟಿಆರ್ ಹರ್ಷ