ETV Bharat / bharat

ರಕ್ಷಾ ಬಂಧನದಂದು ಪರಿಸರ ಜಾಗೃತಿ: ಮರಳಿನಲ್ಲಿ ರಾಖಿ ರಚಿಸಿ ಶುಭಾಶಯ ಕೋರಿದ ಪಟ್ನಾಯಕ್​

author img

By

Published : Aug 22, 2021, 10:41 AM IST

Updated : Aug 22, 2021, 11:03 AM IST

ರಕ್ಷಾ ಬಂಧನ ಹಬ್ಬದ ವಿಶೇಷವಾಗಿ ಪುರಿ ಬೀಚ್‌ನಲ್ಲಿ ಮರಳಿನಲ್ಲಿ ರಾಖಿ ಕಲಾಕೃತಿ ರಚಿಸಿ ಕಲಾವಿದ ಸುದರ್ಶನ್ ಪಟ್ನಾಯಕ್ ಗಮನ ಸೆಳೆದಿದ್ದಾರೆ.

Raksha Bandhan
ಮರಳಿನ ರಾಕಿ ಕಲಾಕೃತಿ

ಪುರಿ(ಒಡಿಶಾ): ಸಹೋದರ-ಸಹೋದರಿಯರ ಭಾತೃತ್ವದ ಪವಿತ್ರ ಹಬ್ಬವಾದ ರಕ್ಷಾ ಬಂಧನಕ್ಕೆ ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ತಮ್ಮ ಕಲೆಯ ಮೂಲಕ ವಿಭಿನ್ನವಾಗಿ ಶುಭ ಕೋರಿದ್ದಾರೆ.

ರಕ್ಷಾ ಬಂಧನ ಹಬ್ಬದ ವಿಶೇಷವಾಗಿ ಪುರಿ ಬೀಚ್‌ನಲ್ಲಿ ಮರಳಿನಲ್ಲಿ ರಾಕಿ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಪರಿಸರ ಜಾಗೃತಿ ಸಂದೇಶವನ್ನು ಸಹ ರವಾನಿಸಿದ್ದಾರೆ. ಈ ಕಲಾಕೃತಿಯಲ್ಲಿ ಪುಟ್ಟ ಮಕ್ಕಳಿಬ್ಬರು ಮರ ಹಿಡಿದು ನಿಂತಿದ್ದು, ಮರದ ಮೇಲೆ ಹಸಿರು ಬಣ್ಣ ಬೃಹದಾಕಾರದ ರಾಖಿ ಕಲಾಕೃತಿ ಬಿಡಿಸಿದ್ದಾರೆ. ಜೊತೆಗೆ 'GIFT A PLANT' ಎಂದು ಬರೆದು, ಪರಿಸರ ಉಳಿಸುವಂತೆ ಮನವಿ ಮಾಡಿದ್ದಾರೆ.

ಮರಳು ಕಲಾಕೃತಿ ಮೂಲಕ ರಕ್ಷಾ ಬಂಧನ ಶುಭಾಶಯ ತಿಳಿಸಿದ ಪಟ್ನಾಯಕ್​

ಪಟ್ನಾಯಕ್ ಅವರ ಮರಳು ಕಲೆ ಯಾವಾಗಲೂ ಭಾರತೀಯರನ್ನು ಆಕರ್ಷಿಸುತ್ತದೆ. ಸಾಮಾಜಿಕ ಸಮಸ್ಯೆಗಳು ಮತ್ತು ದೇಶಕ್ಕೆ ಹೆಮ್ಮೆ ತರುವ ವಿಷಯಗಳ ಕುರಿತಾಗಿ ಅವರು ಮರಳು ಕಲೆಯನ್ನು ರಚಿಸುತ್ತಾರೆ. ಮರಳು ಕಲೆ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಟ್ನಾಯಕ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Last Updated : Aug 22, 2021, 11:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.