ETV Bharat / bharat

ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ಹಣಕಾಸು ವಿನಿಯೋಗ ಮಸೂದೆ ಅಂಗೀಕಾರ

author img

By

Published : Mar 27, 2023, 6:47 PM IST

ಕಳೆದ ವಾರ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಹಣಕಾಸು ಮಸೂದೆ ಇಂದು ರಾಜ್ಯಸಭೆಯಲ್ಲೂ ಅನುಮೋದನೆ ಪಡೆದಿದೆ. ಇದರ ಜೊತೆಗೆ ಜಮ್ಮು ಕಾಶ್ಮೀರದ ವಿನಿಯೋಗ ಮಸೂದೆಯೂ ಪಾಸಾಗಿದೆ.

ಹಣಕಾಸು ವಿನಿಯೋಗ ಮಸೂದೆ ಅಂಗೀಕಾರ
ಹಣಕಾಸು ವಿನಿಯೋಗ ಮಸೂದೆ ಅಂಗೀಕಾರ

ನವದೆಹಲಿ: ಅದಾನಿ ಮತ್ತು ರಾಹುಲ್​ ಗಾಂಧಿ ಸದಸ್ಯತ್ವ ಅನರ್ಹ ವಿಷಯವಾಗಿ ನಡೆಯುತ್ತಿರುವ ಗದ್ದಲದ ಮಧ್ಯೆಯೇ ರಾಜ್ಯಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೇ, ಹಣಕಾಸು ಮಸೂದೆ ಮತ್ತು ಜಮ್ಮು ಕಾಶ್ಮೀರ ಉಪಯೋಜನೆ ಮಸೂದೆಯನ್ನು ಅಂಗೀಕರಿಸಲಾಗಿದೆ. ಇದಕ್ಕೂ ಮೊದಲು 3 ದಿನಗಳ ಹಿಂದಷ್ಟೇ ಲೋಕಸಭೆಯಲ್ಲಿ ಮಸೂದೆ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು.

ಹಿಂಡನ್‌ಬರ್ಗ್ ವರದಿಯಂತೆ ಅದಾನಿ ಹಗರಣದ ಕುರಿತು ತನಿಖಾ ಸಮಿತಿ ರಚನೆಗೆ ಕಾಂಗ್ರೆಸ್​ ಸೇರಿದಂತೆ ಪ್ರತಿಪಕ್ಷಗಳು ಭಾರೀ ಗದ್ದಲ ನಡೆಸುತ್ತಿವೆ. ಇದರಿಂದ ಕಲಾಸ ಸತತವಾಗಿ ಮುಂದೂಡುತ್ತಲೇ ಸಾಗಿದೆ. ಹಣಕಾಸು ಮಸೂದೆಯನ್ನು ಸರ್ಕಾರ ಅಂಗೀಕಾರ ಪಡೆಯಬೇಕಿದ್ದ ಕಾರಣ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ರಾಜ್ಯಸಭೆಯಲ್ಲಿ ಮಂಡಿಸಿದರು. ಗದ್ದಲ ಮತ್ತು ಯಾವುದೇ ಚರ್ಚೆ ಇಲ್ಲದೇ, ಮಸೂದೆಯನ್ನು ಸರ್ಕಾರ ಪಾಸು ಮಾಡಿತು.

ಕಳೆದ ವಾರ ಲೋಕಸಭೆಯಲ್ಲಿ ಹಣಕಾಸು ಮಸೂದೆ-2023 ಅನ್ನು 64 ತಿದ್ದುಪಡಿಗಳೊಂದಿಗೆ ಅಂಗೀಕಾರ ಪಡೆಯಲಾಗಿತ್ತು. ಅದಾನಿ-ಹಿಂಡೆನ್‌ಬರ್ಗ್ ಸಮಸ್ಯೆಯ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆಯ ಬೇಡಿಕೆಯನ್ನು ಮುಂದುವರಿಸಿದ ವಿರೋಧ ಪಕ್ಷದ ಸಂಸದರ ಘೋಷಣೆಗಳ ನಡುವೆಯೇ ಹಲವಾರು ಅಧಿಕೃತ ತಿದ್ದುಪಡಿಗಳೊಂದಿಗೆ ಲೋಕಸಭೆಯು ಹಣಕಾಸು ಮಸೂದೆ 2023 ಅನ್ನು ಪಾಸು ಮಾಡಿತು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಮಸೂದೆಗೆ ತರಲಾಗಿದ್ದ 64 ಅಧಿಕೃತ ತಿದ್ದುಪಡಿಗಳನ್ನು ಮಂಡಿಸಿದರು. ಸದನ ಮುಂದೂಡಿಕೆಯಾಗಿ ಪುನರಾರಂಭವಾದಾಗ ಅಂಗೀಕಾರಕ್ಕಾಗಿ ತೆಗೆದುಕೊಂಡ ತಿದ್ದುಪಡಿಗಳನ್ನು ಪ್ರಸ್ತಾಪ ಮಾಡಿದರು. 44 ನಿಮಿಷಗಳ ಅವಧಿಯಲ್ಲಿ ಎಲ್ಲಾ ತಿದ್ದುಪಡಿಗಳನ್ನು ಮಂಡಿಸಿ, ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಇನ್ನೊಂದೆಡೆ, ಜಮ್ಮು ಮತ್ತು ಕಾಶ್ಮೀರ ವಿನಿಯೋಗ ಮಸೂದೆ- 2023 ಮಸೂದೆಯನ್ನೂ ಇದೇ ವೇಳೆ ರಾಜ್ಯಸಭೆಯಲ್ಲಿ ಪಾಸು ಮಾಡಲಾಯಿತು. 2023-24ರ ಹಣಕಾಸು ವರ್ಷದ ಸೇವೆಗಳಿಗಾಗಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಕನ್ಸಾಲಿಡೇಟೆಡ್ ಫಂಡ್‌ನಿಂದ ಮತ್ತು ಹೊರಗಿನ ಕೆಲವು ಮೊತ್ತಗಳ ಪಾವತಿ ಮತ್ತು ವಿನಿಯೋಗವನ್ನು ಅಧಿಕೃತಗೊಳಿಸುವ ಗುರಿಯನ್ನು ಈ ಮಸೂದೆ ಹೊಂದಿದೆ.

ರಾಹುಲ್​ ಅನರ್ಹ ಖಂಡಿಸಿ ಪ್ರತಿಭಟನೆ: ಇನ್ನೊಂದೆಡೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್​ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಖಂಡಿಸಿ ನಿನ್ನೆಯಿಂದ ಎಲ್ಲಾ ರಾಜ್ಯಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಗಾಂಧಿ ಪ್ರತಿಮೆಗಳ ಮುಂದೆ ಕಾಂಗ್ರೆಸ್​ ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತಿದೆ. ಇಂದೂ ಸಹ ಪ್ರತಿಭಟನೆ ಮುಂದುವರೆಸಿದೆ.

ವಿರೋಧ ಪಕ್ಷಗಳ ನಾಯಕರು ಇಂದು ಕಾಂಗ್ರೆಸ್ ಮುಖ್ಯಸ್ಥ ಮಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಸಂಸತ್ತಿನ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು. ಈ ವೇಳೆ INC, DMK, SP, JD(U), BRS, CPI(M), RJD, NCP, CPI, IUML, MDMK, ಕೇರಳ ಕಾಂಗ್ರೆಸ್​, TMC, RSP, AAP, J&K NC ಮತ್ತು ಶಿವಸೇನೆ ನಾಯಕರು ಉಪಸ್ಥಿತರಿದ್ದರು. ಸಭೆ ಬಳಿಕ ರಾಹುಲ್ ಗಾಂಧಿ ಅನರ್ಹತೆಯನ್ನು ವಿರೋಧಿಸಿ ಲೋಕಸಭೆಗೆ ಕಪ್ಪು ಬಟ್ಟೆ ಧರಿಸಿ ಹಾಜರಾಗಲು ನಿರ್ಧರಿಸಿದ್ದರು.

ಓದಿ: ಪ್ಯಾನ್- ಆಧಾರ್ ಲಿಂಕ್ ಮಾಡಲು ನಾಲ್ಕೇ ದಿನಗಳು ಬಾಕಿ.. ಲಿಂಕ್​ ಆಗದಿದ್ರೆ ನಿಮ್ಮ ಕಾರ್ಡ್​ ನಿಷ್ಕ್ರಿಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.