ETV Bharat / bharat

ಆಸ್ಕರ್​ ವಿಜೇತ ಆರ್​ಆರ್​ಆರ್​, ಕಿರುಚಿತ್ರಕ್ಕೆ ಪ್ರಶಂಸೆ: ಉಭಯ ಸದನ ಮುಂದೂಡಿಕೆ - ರಾಜ್ಯಸಭೆಯಲ್ಲಿ ಆಸ್ಕರ್​ಗೆ ವಿಜೇತರಿಗೆ ಬಹುಪರಾಕ್

ಎರಡನೇ ದಿನದ ಸಂಸತ್​ ಕಲಾಪದಲ್ಲೂ ಅದಾನಿ- ಹಿಂಡೆನ್​ಬರ್ಗ್​ ಮತ್ತು ರಾಹುಲ್​ ಗಾಂಧಿ ಹೇಳಿಕೆ ಪ್ರತಿಧ್ವನಿಸಿದವು. ಇದರ ಮಧ್ಯೆ ಆಸ್ಕರ್​ ವಿಜೇತ ಆರ್​ಆರ್​ಆರ್​, ದಿ ಎಲಿಫೆಂಟ್ ವಿಸ್ಪರರ್ಸ್ ತಂಡಕ್ಕೆ ಶುಭಾಶಯ ಸಲ್ಲಿಸಲಾಯಿತು.

ಆಸ್ಕರ್​ ವಿಜೇತ ಆರ್​ಆರ್​ಆರ್​, ಕಿರುಚಿತ್ರಕ್ಕೆ ಪ್ರಶಂಸೆ

author img

By

Published : Mar 14, 2023, 1:48 PM IST

Updated : Mar 14, 2023, 3:11 PM IST

ನವದೆಹಲಿ: ಸಂಸತ್ತಿನ ಬಜೆಟ್​ ಅಧಿವೇಶನದ ಎರಡನೇ ದಿನವೂ ಸದನದಲ್ಲಿ ಕೋಲಾಹಲ ಉಂಟಾಯಿತು. ಸದನ ಆರಂಭವಾದ ಕೆಲವೇ ಹೊತ್ತಿನಲ್ಲಿ ಮುಂದೂಡಲಾಯಿತು. ಅದಾನಿ- ಹಿಂಡೆನ್‌ಬರ್ಗ್ ವಿಷಯದ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳು ಒತ್ತಾಯಿಸಿದರೆ, ಆಡಳಿತ ಪಕ್ಷದ ಸಂಸದರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಇದರಿಂದ ಲೋಕಸಭೆ ಮತ್ತು ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಲಂಡನ್​ನಲ್ಲಿ ಉಪನ್ಯಾಸ ನೀಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ನೀಡಿರುವ ಹೇಳಿಕೆ ಕಳವಳಕಾರಿ ಎಂದು ಆಡಳಿತ ಪಕ್ಷದ ಸದಸ್ಯರು ಟೀಕಿಸಿದರು. ಇದಕ್ಕೆ ವಿರುದ್ಧವಾಗಿ ವಿಪಕ್ಷಗಳು ಅದಾನಿ ವಿಷಯದ ಮೇಲೆ ದಾಳಿ ಮಾಡಿದರು. ಕಲಾಪ ಆರಂಭವಾದಾಗ ಕೂಡಲೇ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಪರಸ್ಪರ ಘೋಷಣೆ ಕೂಗಲಾರಂಭಿಸಿದರು. ಪ್ರಶ್ನೋತ್ತರ ವೇಳೆಯನ್ನು ಮುಂದುವರಿಸಲು ಸಹಕರಿಸುವಂತೆ ಸ್ಪೀಕರ್ ಓಂ ಬಿರ್ಲಾ ಕೇಳಿಕೊಂಡರೂ ಸದಸ್ಯರು ಕಿವಿಗೊಡಲಿಲ್ಲ. ಇದೇ ವೇಳೆ ವಿಪಕ್ಷಗಳ ಸಂಸದರು ಸದನದಲ್ಲಿ ಫಲಕಗಳನ್ನು ಪ್ರದರ್ಶಿಸಿದರು.

ಸದನದಲ್ಲಿ ಫಲಕಗಳನ್ನು ಪ್ರದರ್ಶಿಸದಂತೆ ಸ್ಪೀಕರ್​ ಓಂ ಬಿರ್ಲಾ ಕಾಂಗ್ರೆಸ್ ಸದಸ್ಯರಿಗೆ ಸಲಹೆ ನೀಡಿದರು. ಎಲ್ಲ ಸದಸ್ಯರನ್ನು ಸಮಾಧಾನಿಸಲು ಸ್ಪೀಕರ್​ ಪ್ರಯತ್ನಿಸಿದರಾದರೂ, ಕಾಂಗ್ರೆಸ್ ಸದಸ್ಯರು ಗದ್ದಲ ಮುಂದುವರೆಸಿದರು. ಪರಿಣಾಮವಾಗಿ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲಿ ಆಸ್ಕರ್​ ವಿಜೇತರಿಗೆ ಬಹುಪರಾಕ್​: ಮತ್ತೊಂದೆಡೆ ರಾಜ್ಯಸಭೆಯ ಕಲಾಪ ಕೆಲಕಾಲ ನಡೆಯಿತು. ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದ್ದಕ್ಕಾಗಿ ಸಂಸದರು ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರತಂಡವನ್ನು ಅಭಿನಂದಿಸಿದರು. ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು ದೇಶದ ಪ್ರತಿಭೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂದ ಗೌರವ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್​ ಬಣ್ಣಿಸಿದರು. ಈ ಪ್ರಶಸ್ತಿಗಳ ಮೂಲಕ ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತೊಂದು ಮನ್ನಣೆ ಸಿಕ್ಕಿದೆ ಎಂದರು.

ಆಸ್ಕರ್ ಪ್ರಶಸ್ತಿ ವಿಜೇತರನ್ನು ಪ್ರಶಂಸಿಸಿದ ಬಳಿಕ ಚರ್ಚೆ ಮುಂದುವರಿದಾಗ ಗದ್ದಲ ಪ್ರಾರಂಭವಾಯಿತು. ಅದಾನಿ ಷೇರು ಹಗರಣ, ಹಿಂಡೆನ್‌ಬರ್ಗ್ ವರದಿಯ ಮೇಲೆ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸಿದವು. ಮತ್ತೊಂದೆಡೆ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಹುಲ್ ಗಾಂಧಿ ಲಂಡನ್‌ನಲ್ಲಿ ಮಾಡಿದ ಭಾಷಣದ ವಿಷಯವನ್ನು ಪ್ರಸ್ತಾಪಿಸಿದರು. ಇದರಿಂದ ವಿಧಾನಸಭೆಯಲ್ಲಿ ತೀವ್ರ ಗೊಂದಲ ಉಂಟಾಯಿತು. ಅಂತಿಮವಾಗಿ ಧನಕರ್​ ಅವರು ಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ವಿವಿಧ ಪ್ರತಿಪಕ್ಷಗಳ ಪ್ರತಿಭಟನೆ: ಕಲಾಪ ಆರಂಭಕ್ಕೂ ಮುನ್ನ ಪ್ರತಿಪಕ್ಷಗಳು ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಿದರು. ಅದಾನಿ- ಹಿಂಡೆನ್‌ಬರ್ಗ್ ಕುರಿತು ಚರ್ಚೆಗೆ ಅವಕಾಶ ನೀಡಬೇಕು, ಈ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಸಂಸತ್ತಿನ ಆವರಣದಲ್ಲಿ ಘೋಷಣೆಗಳನ್ನು ಕೂಗಿದರು. ಸಂಸತ್ತು ಸುಗಮವಾಗಿ ನಡೆಯುವುದು ಸರ್ಕಾರಕ್ಕೆ ಇಷ್ಟವಿಲ್ಲ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದರು.

ಆಡಳಿತ ಪಕ್ಷದ ಸದಸ್ಯರು ಸದನದಲ್ಲಿ ಈ ರೀತಿಯ ಗದ್ದಲವನ್ನು ಹಿಂದೆಂದೂ ಕಂಡಿಲ್ಲ. ರಾಹುಲ್ ಗಾಂಧಿ ಯಾಕೆ ಕ್ಷಮೆ ಕೇಳಬೇಕು? ಅವರ ಬಳಿಯೇ ಕೇಂದ್ರ ಸರ್ಕಾರ ಕ್ಷಮೆಯಾಚಿಸಬೇಕು ಎಂದು ವಾಗ್ದಾಳಿ ಮಾಡಿದರು. ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ ಸಂಸದರು ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಫಲಕಗಳನ್ನು ಪ್ರದರ್ಶಿಸಿದರು. ಬಿಆರ್‌ಎಸ್ ಮತ್ತು ಆಮ್ ಆದ್ಮಿ ಪಕ್ಷದ ಸಂಸದರು ಒಟ್ಟಾಗಿ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ರಾಹುಲ್ ಗಾಂಧಿ ಇತ್ತೀಚೆಗೆ ಲಂಡನ್‌ಗೆ ಭೇಟಿ ನೀಡಿದ್ದಾಗ ಕಾರ್ಯಕ್ರಮವೊಂದರಲ್ಲಿ ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ದೇಶದ ತನಿಖಾ ಸಂಸ್ಥೆಗಳನ್ನು ನಿಯಂತ್ರಿಸಲಾಗಿದೆ. ವಿರೋಧ ಪಕ್ಷದ ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ತರಹೇವಾರಿ ಆರೋಪ ಮಾಡಿದ್ದರು. ಈ ಹೇಳಿಕೆಗೆ ಆಡಳಿತ ಪಕ್ಷದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಹುಲ್​ ಗಾಂಧಿ ದೇಶಕ್ಕೆ ಅವಮಾನ ಮಾಡುವ ಮಾತುಗಳನ್ನಾಡಿದ್ದಾರೆ. ಇದಕ್ಕಾಗಿ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ

Last Updated : Mar 14, 2023, 3:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.