ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು ಎರಡನೇ ದಿನವೂ ಪೆಗಾಸಸ್ ಕಣ್ಗಾವಲು ತಂತ್ರಾಂಶ ವಿವಾದಕ್ಕೆ ಬಲಿಯಾಗಿವೆ. ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು, ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದವು.
ಉತ್ತರ ಕೊಡಲೂ ಅವಕಾಶ ನೀಡದಿರುವಷ್ಟು ಗದ್ದಲವಾದ್ದರಿಂದ ಎರಡೂ ಕಲಾಪಗಳನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಸರ್ಕಾರಕ್ಕೂ ಪೆಗಾಸಸ್ಗೂ ಸಂಬಂಧವಿಲ್ಲ
ಪೆಗಾಸಸ್ ಹಾಗೂ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. ವಿಪಕ್ಷಗಳು ಸರಿಯಾದ ಮಾರ್ಗದಲ್ಲಿ ದನಿ ಎತ್ತಲು ಬಯಸಿದರೆ ಎತ್ತಲಿ. ಈ ವಿಚಾರದ ಬಗ್ಗೆ ಐಟಿ ಸಚಿವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.