ಬೆಂಗಳೂರು: ನಗರದಲ್ಲಿ ನಡೆಯಲಿರುವ ಶಸಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳ ದಿನಾಚರಣೆ ನಿಮಿತ್ತ ಇಂದು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಭಾಗಿಯಾಗಲಿದ್ದು, ಈ ವೇಳೆ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಹ ಹಾಜರಿರಲಿದ್ದಾರೆ.
ದೇಶದ ರಕ್ಷಣೆಗಾಗಿ ಹುತಾತ್ಮರಾದ ಸೈನಿಕರ ನೆನಪಿನಲ್ಲಿ ಅವರ ಕುಟುಂಬಸ್ಥರ ಜೊತೆ ಸಿಂಗ್ ಹಾಗೂ ರಾವತ್ ನಗರದ ವಾಯುನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿ ಜನವರಿ 14, 1953ರಲ್ಲಿ ನಿವೃತ್ತಿ ಹೊಂದಿದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ನೆನಪಿನಾರ್ಥವಾಗಿ ಪ್ರತಿವರ್ಷ ಜನವರಿ 14ರಂದು ಶಸಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
1947ರ ಭಾರತ - ಪಾಕಿಸ್ತಾನ ಯುದ್ಧ ಸೇರಿದಂತೆ 2ನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದ ಕಾರ್ಯಪ್ಪ ಕರ್ನಾಟಕದ ಕೊಡಗಿನವರಾಗಿದ್ದಾರೆ. 1899ರಿಂದ 1993ರ ವರೆಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.
ಇವರಲ್ಲದೇ ಇನ್ನೋರ್ವ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ಷ ಸಹ ಜನವರಿ 14, 1973ರಲ್ಲಿ ನಿವೃತ್ತಿ ಹೊಂದಿದವರಾಗಿದ್ದಾರೆ.
ಇದನ್ನೂ ಓದಿ: ಉಗ್ರರ ಅಡಗುದಾಣಗಳ ಮೇಲೆ ಕಣ್ಣಿಡಲಿದೆ ‘ಮೈಕ್ರೋಕಾಪ್ಟರ್’