ETV Bharat / bharat

ಮದುವೆಗೆ ಮತಾಂತರವಾಗುವುದನ್ನು ವೈಯಕ್ತಿಕವಾಗಿ ಒಪ್ಪುವುದಿಲ್ಲ : ರಾಜನಾಥ್ ಸಿಂಗ್

ನಿಜವಾದ ಹಿಂದೂ ಜಾತಿ, ಧರ್ಮ ಮತ್ತು ಪಂಥಗಳ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ನಾನು ನಂಬುತ್ತೇನೆ. ನಮ್ಮ ಧಾರ್ಮಿಕ ಗ್ರಂಥಗಳೂ ಇದಕ್ಕೆ ಅನುಮತಿ ನೀಡುವುದಿಲ್ಲ."ವಸುದೈವ ಕುಟುಂಬ" ಸಂದೇಶ ನೀಡಿದ ಏಕೈಕ ದೇಶ ಭಾರತ. ಯಾವುದೇ ದೇಶ ಇದನ್ನು ಮಾಡಲಿಲ್ಲ..

Rajnath Singh
ರಾಜನಾಥ್ ಸಿಂಗ್
author img

By

Published : Dec 30, 2020, 10:58 AM IST

ನವದೆಹಲಿ : ಉತ್ತರಪ್ರದೇಶ ಸರ್ಕಾರ ತಂದಿರುವ "ಮತಾಂತರ ವಿರೋಧಿ" ಶಾಸನವನ್ನು ಬೆಂಬಲಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮದುವೆಗೆ ಮತಾಂತರಗೊಳ್ಳುವುದನ್ನು ನಾನು ವೈಯಕ್ತಿಕವಾಗಿ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

"ಮತಾಂತರ ಏಕೆ ಇರಬೇಕೆಂದು ನಾನು ಕೇಳಲು ಬಯಸುತ್ತೇನೆ. ಸಾಮೂಹಿಕ ಮತಾಂತರದ ಅಭ್ಯಾಸವು ನಿಲ್ಲಬೇಕು. ನನಗೆ ತಿಳಿದಂತೆ, ಮುಸ್ಲಿಂ ಧರ್ಮದಲ್ಲಿ, ಒಬ್ಬ ವ್ಯಕ್ತಿ ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಿಲ್ಲ. ಮದುವೆಗೆ ಮತಾಂತರಗೊಳ್ಳುವುದನ್ನು ನಾನು ವೈಯಕ್ತಿಕವಾಗಿ ಒಪ್ಪುವುದಿಲ್ಲ" ಎಂದು ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಉತ್ತರಪ್ರದೇಶ ಸರ್ಕಾರ ಜಾರಿಗೆ ತಂದಿರುವ "ಲವ್-ಜಿಹಾದ್ ಕಾನೂನು" ದುರುಪಯೋಗದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನೈಸರ್ಗಿಕ ಮದುವೆ" ಮತ್ತು ಮದುವೆಗೆ ಬಲವಂತದ ಧಾರ್ಮಿಕ ಮತಾಂತರದ ನಡುವೆ ವ್ಯತ್ಯಾಸವಿದೆ ಎಂದಿದ್ದಾರೆ.

  • Want to ask why there should be conversion. The practice of mass conversions should stop. As far as I know, in Muslim religion, one can't marry someone from another religion. I personally don't approve of conversion for marriage: Defence Minister on 'anti-conversion law' pic.twitter.com/pZg8yRIjgC

    — ANI (@ANI) December 30, 2020 " class="align-text-top noRightClick twitterSection" data=" ">

"ಅನೇಕ ಸಂದರ್ಭಗಳಲ್ಲಿ ಧಾರ್ಮಿಕ ಮತಾಂತರವನ್ನು ಬಲವಂತವಾಗಿ ಮಾಡಲಾಗುತ್ತಿದೆ ಮತ್ತು ಕೆಲವೊಮ್ಮೆ ಅದನ್ನು ದುರಾಸೆಯ ಅಡಿಯಲ್ಲಿ ಮಾಡಲಾಗುತ್ತದೆ ಎಂದು ನೀವು ನೋಡಿರಬಹುದು. ನೈಸರ್ಗಿಕ ಮದುವೆ ಮತ್ತು ಮದುವೆಗೆ ಬಲವಂತದ ಮತಾಂತರ ದೊಡ್ಡ ವ್ಯತ್ಯಾಸ ಹೊಂದಿದೆ. ಈ ಕಾನೂನುಗಳನ್ನು ಮಾಡಿದ ಸರ್ಕಾರಗಳು ಈ ಎಲ್ಲ ವಿಷಯಗಳನ್ನು ಪರಿಗಣಿಸಿವೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಿಜವಾದ ಹಿಂದೂ ತಾರತಮ್ಯವನ್ನು ಅನುಸರಿಸುವುದಿಲ್ಲ ಎಂದಿದ್ದಾರೆ. "ನಿಜವಾದ ಹಿಂದೂ ಜಾತಿ, ಧರ್ಮ ಮತ್ತು ಪಂಥಗಳ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ನಾನು ನಂಬುತ್ತೇನೆ. ನಮ್ಮ ಧಾರ್ಮಿಕ ಗ್ರಂಥಗಳೂ ಇದಕ್ಕೆ ಅನುಮತಿ ನೀಡುವುದಿಲ್ಲ."ವಸುದೈವ ಕುಟುಂಬ" ಸಂದೇಶವನ್ನು ನೀಡಿದ ಏಕೈಕ ದೇಶ ಭಾರತವಾಗಿದೆ, ಯಾವುದೇ ದೇಶ ಇದನ್ನು ಮಾಡಲಿಲ್ಲ" ಎಂದಿದ್ದಾರೆ.

ಓದಿ ರೈತರು ನಮ್ಮ 'ಅನ್ನದಾತರು', ಅವರ ವಿರುದ್ಧ ಆರೋಪಗಳನ್ನು ಮಾಡಬಾರದು : ರಾಜನಾಥ್ ಸಿಂಗ್

ಮದುವೆಗೆ ಮತಾಂತರ ಸೇರಿದಂತೆ ಮೋಸದ ಮತ್ತು ಬಲವಂತದ ಮತಾಂತರಗಳನ್ನು ನಿಷೇಧಿಸಲು ಉತ್ತರಪ್ರದೇಶ ಸರ್ಕಾರ ಕಾನೂನು ಜಾರಿಗೆ ತಂದಿದೆ. ಮಧ್ಯಪ್ರದೇಶ ಸರ್ಕಾರ ಕೂಡ 2020ರ ಧಾರ್ಮಿಕ ಸ್ವಾತಂತ್ರ್ಯ ಮಸೂದೆಗೆ ಅನುಮೋದನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.