ನವದೆಹಲಿ: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಮಾಜಿ ರಕ್ಷಣಾ ಮಂತ್ರಿಗಳಾದ ಎ.ಕೆ. ಆ್ಯಂಟನಿ ಮತ್ತು ಶರದ್ ಪವಾರ್ ಅವರಿಗೆ ಚೀನಾ ಗಡಿ ಪರಿಸ್ಥಿತಿ ಕುರಿತು ವಿವರಣೆ ನೀಡಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಸಭೆಯ ನೇತೃತ್ವವಹಿಸಿದ್ದು, ಎ.ಕೆ.ಆ್ಯಂಟನಿ ಮತ್ತು ಶರದ್ ಪವಾರ್ ಅವರು ಹೊಂದಿದ್ದ ಕೆಲವು ಅನುಮಾನಗಳನ್ನು ಬಿಪಿನ್ ರಾವತ್ ಮತ್ತು ಮನೋಜ್ ಮುಕುಂದ್ ನರವಾಣೆ ಬಗೆಹರಿಸಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಭಾರತ ಚೀನಾ ನಡುವಿನ ಗಡಿಯಾದ ಎಲ್‌ಎಸಿಯಲ್ಲಿ ಘರ್ಷಣೆ ನಡೆದ ನಂತರ ಹಲವು ಹಂತದ ಮಾತುಕತೆಗಳು ಎರಡೂ ದೇಶಗಳ ನಡುವೆ ನಡೆದಿತ್ತು. ಕೆಲವು ಪ್ರದೇಶಗಳಿಂದ ಉಭಯ ರಾಷ್ಟ್ರಗಳು ತಮ್ಮ ಸೇನೆಯನ್ನು ಹಿಂತೆಗೆದುಕೊಂಡಿದ್ದು, ಮತ್ತೆ ಹಲವು ಪ್ರದೇಶಗಳಲ್ಲಿ ಸೇನೆ ಹಾಗೆಯೇ ಉಳಿದುಕೊಂಡಿತ್ತು.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ ಮೊದಲ ಭಾರತೀಯ ಪ್ರವಾಸಿಗ
ಈಗ ಮತ್ತೊಮ್ಮೆ ಗಡಿ ಭಾಗಗಳಲ್ಲಿ ಬಿಡಾರಗಳನ್ನು ಸ್ಥಾಪಿಸಿ, ಅವುಗಳಲ್ಲಿ ಸೈನಿಕರನ್ನು ಶೇಖರಣೆ ಮಾಡುತ್ತಿದ್ದು, ಸೈನಿಕರು ಇರುವ ಸಲುವಾಗಿ ಶಾಶ್ವತವಾಗಿ ಕಟ್ಟಡಗಳನ್ನು ಕಟ್ಟುತ್ತಿದೆ. ಇದರ ಜೊತೆಗೆ ಗಡಿ ಭಾಗಗಳಲ್ಲಿ ಚೀನಾ ಸೇನೆ ರಸ್ತೆಗಳನ್ನು ನಿರ್ಮಿಸುತ್ತಿದೆ ಎಂದು ಹೇಳಲಾಗುತ್ತಿದ್ದು, ಭಾರತದೊಂದಿಗೆ ಮತ್ತೆ ವಿವಾದ ಉಂಟಾಗುವ ಸಾಧ್ಯತೆಯಿದೆ.