ETV Bharat / bharat

ವರಕವಿ ಬೇಂದ್ರೆ ಮೆಚ್ಚಿದ ರಜಿನಿಗೆ 'ದಾದಾ ಸಾಹೇಬ್ ಫಾಲ್ಕೆ​': ಬಸ್​ ಕಂಡೆಕ್ಟರ್​ To ’’ಸೂಪರ್’’​ಸ್ಟಾರ್​​​ ಜರ್ನಿ - ರಜನಿಕಾಂತ್​ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಬೆಂಗಳೂರಿನಲ್ಲಿ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್, ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ದೇಶವೇ ಮೆಚ್ಚುವಂತೆ 'ಸೂಪರ್ ಸ್ಟಾರ್' ಎನಿಸಿಕೊಂಡಿದ್ದು, ಸಾಮಾನ್ಯದ ಮಾತಲ್ಲ. ದಕ್ಷಿಣ ಭಾರತದ ಅವರ ಅಪಾರ ಅಭಿಮಾನಿಗಳ ಬಳಗ ಅವರನ್ನು ದೇವರಾಗಿ ಪರಿಗಣಿಸುತ್ತಾರೆ. ಅಭಿಮಾನಿಗಳ ಪಾಲಿನ ತಲೈವಾ ರಜನಿ ಅವರಿಗೆ ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ '51ನೇ ದಾದಾ ಸಾಹೇಬ್​ ಫಾಲ್ಕೆ' ಪ್ರಶಸ್ತಿಗೆ ಆಯ್ಕೆ ಮಾಡಿದೆ.

Rajinikanth
Rajinikanth
author img

By

Published : Apr 1, 2021, 12:39 PM IST

Updated : Apr 1, 2021, 12:55 PM IST

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿ ಬದುಕು ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿಯುವಂತಹದ್ದು. ಬೆಂಗಳೂರಿನಲ್ಲಿ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್, ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ದೇಶವೇ ಮೆಚ್ಚುವಂತೆ 'ಸೂಪರ್ ಸ್ಟಾರ್' ಎನಿಸಿಕೊಂಡಿದ್ದು, ಸಾಮಾನ್ಯದ ಮಾತಲ್ಲ. ದಕ್ಷಿಣ ಭಾರತದ ಅವರ ಅಪಾರ ಅಭಿಮಾನಿಗಳ ಬಳಗ ಅವರನ್ನು ದೇವರಾಗಿ ಪರಿಗಣಿಸುತ್ತಾರೆ. ಅಭಿಮಾನಿಗಳ ಪಾಲಿನ ತಲೈವಾ ರಜನಿ ಅವರಿಗೆ ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ 51ನೇ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಆರಂಭಿಕ ಜೀವನ: ಶಿವಾಜಿ ರಾವ್ ಗಾಯಕ್ವಾಡ್ ಜನಿಸಿದ್ದು, 1950ರ ಡಿಸೆಂಬರ್ 12ರಂದು ಬೆಂಗಳೂರಿನ ಮರಾಠಿ ಕುಟುಂಬದಲ್ಲಿ. ಮರಾಠಾ ಅಪ್ರತಿಮ ಯೋಧ ಛತ್ರಪತಿ ಶಿವಾಜಿಯ ಹೆಸರು ಇಡಲಾಯಿತು. ಅವರ ಬಾಲ್ಯ ಮತ್ತು ಯೌವನದ ಆರಂಭಿಕ ವರ್ಷಗಳು ಹಣಕಾಸಿನ ಸಮಸ್ಯೆಗಳ ಕಳೆದು ಹೊಯಿತು. ಶಿಕ್ಷಣ ಮುಗಿದ ನಂತರ ಬೆಂಗಳೂರು, ಮದ್ರಾಸಿನಲ್ಲಿ (ಈಗಿನ ಚೆನ್ನೈ) ಕೂಲಿ, ಕಾರ್ಪೆಂಟರ್ ಕೆಲಸಗಳನ್ನು ಮಾಡಿ ಕೊನೆಗೆ ಬಿಟಿಎಸ್‌ ಬಸ್‌ ಕಂಡಕ್ಟರ್‌ ಕೆಲಸ ಸಿಕ್ಕಿತ್ತು.

ರಂಗಾಸಕ್ತಿ:

ಗವಿಪುರಂ ಶಾಲೆಯಲ್ಲಿ ಕಲಿತ ಶಿವಾಜಿ ಅಣ್ಣನ ಮೂಲಕ ರಾಮಕೃಷ್ಣ ಆಶ್ರಮದಲ್ಲಿ ಅಧ್ಯಾತ್ಮದ ಜತೆಗೆ ನಾಟಕದ ಆಸಕ್ತಿ ಹುಟ್ಟಿತು. ರಂಗದ ಮೇಲೆ ನಾಟಕಗಳ ಚಿಕ್ಕ - ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಏಕಲವ್ಯದ ಗೆಳೆಯನಾಗಿ ಒಂದು ನಾಟಕದಲ್ಲಿ ಅಭಿನಯಿಸಿದ್ದರು. ಆವತ್ತು ಆ ಪಾತ್ರವನ್ನು ಇಡೀ ಶಾಲೆಯ ಪ್ರೇಕ್ಷಕರೆಲ್ಲ ಕೊಂಡಾಡಿದ್ದರು. ಆ ಪಾತ್ರದ ಅಭಿನಯ ಮೆಚ್ಚಿದವರಲ್ಲಿ ಕನ್ನಡದ ವರಕವಿ ದ.ರಾ. ಬೇಂದ್ರೆಯವರೂ ಇದ್ದರೂ ಎಂಬುದು ಅಚ್ಚರಿಯ ಸಂಗತಿ. ನಾಟಕಕಾರ ಟೋಪಿ ಮುನಿಯಪ್ಪ ಅವರ ಪೌರಾಣಿಕ ನಾಟಕಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿದ್ದರು. ಪಿಯುಸಿವರೆಗೆ ಶಿಕ್ಷಣ ಪಡೆದ ಶಿವಾಜಿ, ಆ ವೇಳೆಗಾಗಲೇ ದುರ್ಯೋಧನಂತಹ ಖಳ ನಾಯಕನ ಪಾತ್ರಗಳಲ್ಲಿ ಮಿಂಚಲು ಆರಂಭಿಸಿದ್ದರು.

ಕನ್ನಡ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಶಿವಾಜಿಗೆ ಅದೇ ಹೊತ್ತಿನಲ್ಲಿ ಪತ್ರಿಕೆಯಲ್ಲಿ ಹೊಸದಾಗಿ ಸ್ಥಾಪನೆಯಾದ ಮದ್ರಾಸ್‌ ಫಿಲ್ಮ್​ ಇನ್‌ಸ್ಟಿಟ್ಯೂಟ್‌ನ ಜಾಹೀರಾತು ಕಾಣಿಸಿತು. ನಟನೆ ಕಲಿಯುವ ಆಸೆಗೆ ಕುಟುಂಬ ಬೆಂಬಲ ನೀಡಲಿಲ್ಲ. ಆಗ ಹಣವನ್ನೂ ಕೊಟ್ಟು ಹೆಗಲೆಣೆಯಾಗಿ ನಿಂತದ್ದು ಗೆಳೆಯ, ಸಹೋದ್ಯೋಗಿ ರಾಜ್‌ ಬಹಾದ್ದೂರ್‌. ಫಿಲ್ಮ್​ ಇನ್‌ಸ್ಟಿಟ್ಯೂಟ್‌ನಲ್ಲಿ ನ ನಿರ್ವಹಣೆ ಖ್ಯಾತ ನಿರ್ದೇಶಕ ಕೆ. ಬಾಲಚಂದರ್‌ ಅವರ ಗಮನ ಸೆಳೆಯಿತು. ತಮಿಳು ಕಲಿಯುವ ಸಲಹೆಯನ್ನು ಸ್ವೀಕರಿಸಿದ ಶಿವಾಜಿಗೆ 1975ರಲ್ಲಿ ಬಾಲಚಂದರ್‌ ಅವರ 'ಅಪೂರ್ವ ರಾಗಂಗಳ್‌' ಚಿತ್ರದಲ್ಲೊಂದು ಪಾತ್ರ ಸಿಕ್ಕಿತು. ಹೆಂಡತಿ (ಶ್ರೀವಿದ್ಯಾ)ಯನ್ನು ಗೋಳು ಹೊಯ್ದುಕೊಳ್ಳುವ ಕೆಟ್ಟ ಪಾತ್ರವದು. ಪಾತ್ರ ವಿವಾದ ಸೃಷ್ಟಿಸುವಷ್ಟು ಅದ್ಭುತವಾಗಿತ್ತು. ಅಂದಿನಿಂದ ಬಾಲಚಂದರ್‌ ಪ್ರೀತಿಯ ರಜನಿಕಾಂತ್‌ ಆದ ಶಿವಾಜಿ ಮುಂದೆ ಇಟ್ಟ ಹೆಜ್ಜೆಗಳೆಲ್ಲ ಇತಿಹಾಸ.

ಕನ್ನಡ ನಾಟಕಗಳಲ್ಲಿ ಅಭಿನಯಿಸುತ್ತದ್ದ ಶಿವಾಜಿಗೆ ಅದೇ ಸಮಯದಲ್ಲಿಯೇ ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನಾ ತರಗತಿಗಳ ಜಾಹೀರಾರು ಕಾಣಿಸಿಕೊಂಡಿತು. ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಫಿಲ್ಟ್​ ಇನ್​ಸ್ಟಿಟ್ಯೂಟ್​ ಸೇರಲು ನಿರ್ಧರಿಸಿದರು. ಆದರೆ, ನಟನೆ ಕಲಿಯುವ ಆಸೆಗೆ ಕುಟುಂಬದ ಬೆಂಬಲ ಸಿಗಲಿಲ್ಲ. ಸ್ನೇಹಿತ ಮತ್ತು ಸಹೋದ್ಯೋಗಿ ರಾಜ್ ಬಹದ್ದೂರ್ ಶಿವಾಜಿಯ ನಟನೆ ಕನಸಿಗೆ ಹೆಗಲು ಕೊಟ್ಟು ನಿಂತು ಆರ್ಥಿಕವಾಗಿ ಸಹಾಯ ಮಾಡಿದ. ಇನ್​ಸ್ಟಿಟ್ಯೂಟ್​ನಲ್ಲಿ ವೇದಿಕೆಯ ಮೇಲಿನ ಪ್ರದರ್ಶನವೊಂದರಲ್ಲಿ ತಮಿಳು ಚಲನಚಿತ್ರ ನಿರ್ದೇಶಕ ಕೆ ಬಾಲಚಂದರ್ ಅವರ ಗಮನ ಸೆಳೆದರು. ತಮಿಳನ್ನು ಕಲಿಯಲು ಅವರು ಸಲಹೆ ನೀಡಿದರು. ಇದನ್ನು ರಜಿನಿಕಾಂತ್ ವಿಳಂಬ ಮಾಡದೆ ಅನುಸರಿಸಿದರು. ಅಂದಿನಿಂದ ಬಾಲಚಂದರ್ ಅವರ ಪ್ರೀತಿಯ ರಜನಿಕಾಂತ್ ಮುಂದೆ ಸೃಷ್ಟಿಸಿದ್ದು ಇತಿಹಾಸ.

ತಮಿಳು ಚಿತ್ರರಂಗದತ್ತ ಶಿವಾಜಿ ಯಾತ್ರೆ:

1975ರಲ್ಲಿ ತಮಿಳು ಚಿತ್ರರಂಗ ಪ್ರವೇಶ ಮಾಡಿದ ಶಿವಾಜಿ, ಬಾಲಚಂದರ್ ಅವರ ‘ಅಪೂರ್ವ ರಾಗಂಗಳ್’ ಸಿನಿಮಾದಲ್ಲಿ ಪತ್ನಿಯನ್ನು (ಶ್ರೀವಿದ್ಯಾ) ಪೀಡಿಸುವ ಕೆಟ್ಟ ಗಂಡನ ಪಾತ್ರ ಸಿಕ್ಕಿತು. ಈ ಚಲನಚಿತ್ರವು ಒಳ್ಳೆಯ ಪ್ರಶಂಸೆ ಗಳಿಸಿ, ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಮುಂದಿನ ವರ್ಷ ಅವರು ಪುಟ್ಟಣ್ಣ ಕಣಗಲ್ ನಿರ್ದೇಶನದ ‘ಕಥಾ ಸಂಗಮ’ ಚಿತ್ರದೊಂದಿಗೆ ಕನ್ನಡ ಚಿತ್ರಕ್ಕೆ ಕಾಲಿಟ್ಟರು.

ನಿರ್ದೇಶಕ ಎಸ್. ಪಿ. ಮುತ್ತುರಾಮನ್ ರಜನಿಕಾಂತ್ ಅವರ ಸಿನಿ ಪಯಣವನ್ನು ಸಂಪೂರ್ಣವಾಗಿ ತಿದ್ದಿದರು. ಅವರೊಂದಿಗೆ ಮೊದಲು ಬಾರಿಗೆ ‘ಭುವನಾ ಒರು ಕೆಲ್ವಿಕ್ಕುರಿ’ (1977) ಚಿತ್ರದ ಮೊದಲಾರ್ಧದಲ್ಲಿ ಸ್ವಲ್ಪ ಖನಾಯಕ ಮತ್ತು ನಂತರ ನಾಯಕನಾಗಿ ಪ್ರಯೋಗಿಸಿದರು. ಆ ಬಳಿಕ ಜೆ.ಮಹೇಂದ್ರನ್ ಅವರ ‘ಮುಲ್ಲಮ್ ಮಲರಮ್’ ಸಿನಿಮಾ ರಜನಿಕಾಂತ್ ಅವರನ್ನು ತಮಿಳು ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಿತು.

ಸಿನಿ ಬುದುಕಿನ ಏರಿಳಿತದ ಪ್ರಯಾಣ:

‘ಭುವನ ಒರು ಕೆಲ್ವಿಕ್ಕುರಿ’ ಚಿತ್ರದ ಯಶಸ್ಸಿನ ಮೇಲೆ ಮುತ್ತುರಾಮನ್ ಅವರು ‘ಆರಿಲಿರುಂಟು ಅರುಬಾತು ವರೈ’ ಎಂಬ ಸುಮಧುರ ನಾಟಕ ಮಾಡಿದರು. ಅದರಲ್ಲಿ ರಜನಿಕಾಂತ್ ತಮ್ಮ ಒಡಹುಟ್ಟಿದವರಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಮಹಾನ್​ ನಾಯಕನಾಗಿ ನಟಿಸಿದರು. ಇದು ಅವರ ವೃತ್ತಿ ಜೀವನದ ಮಹತ್ವದ ತಿರುವು. ಇಲ್ಲಿಂದ ಓರ್ವ ನಟನಾಗಿದ್ದವ ಒಬ್ಬ ಕಲಾ ಪ್ರದರ್ಶಕನಾಗಿ ರೂಪುಗೊಂಡರು. ತಮ್ಮ ಪ್ರೇಕ್ಷಕರನ್ನು ಮೋಹಗೊಳಿಸುವುದಲ್ಲದೇ ನಟನೆಯಿಂದಲೇ ಅವರಲ್ಲಿ ಕಣ್ಣೀರು ತರಿಸಿದರು.

1975 ರಿಂದ 1977ರ ನಡುವೆ ರಜನಿಕಾಂತ್ ಅವರು ‘16 ವಯಧಿನಿಲೇ’, ‘ಮೂಂಡ್ರು ಮುಡಿಚು‘ ಮತ್ತು ಅವರ್​ಗಳ್’ ಚಿತ್ರಗಳಲ್ಲಿ ಹಲವು ಖಳನಾಯಕ ಪಾತ್ರಗಳನ್ನು ನಿರ್ವಹಿಸಿದರು. 80ರ ದಶಕದ ಅಂತ್ಯದ ವೇಳೆಗೆ ರಜನಿಕಾಂತ್ ದಕ್ಷಿಣ ಭಾರತದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ಇದ್ದಕ್ಕಿದ್ದಂತೆ ವಿರಾಮ ತೆಗೆದುಕೊಂಡು ನಟನೆ ತ್ಯಜಿಸಲು ನಿರ್ಧರಿಸಿದರು. ಕೆಲ ದಿನಗಳ ಬಳಿಕ ಮತ್ತೆ ನಟನೆಗೆ ವಾಪಸ್ ಆದರು.

ಬಾಲಿವುಡ್ ಚಿತ್ರ ‘ಡಾನ್’ ಚಿತ್ರದ ರಿಮೇಕ್ ‘ಬಿಲ್ಲಾ’ ಚಿತ್ರದ ಮೂಲಕ ಪುನರಾಗಮನ ಮಾಡಿದರು. ಅದರಲ್ಲಿ ದ್ವಿಪಾತ್ರವು ದೊಡ್ಡ ಯಶಸ್ಸು ತಂದುಕೊಟ್ಟಿತು. ‘ಬಿಲ್ಲಾ’ ನಂತರ ‘ಮುರತ್ತುಕಲೈ’, ‘ಪೊಕ್ಕಿರಿ ರಾಜ’, ‘ಥಾನಿಕಟ್ಟು ರಾಜ’, ‘ನಾನ್ ಮಹಾನ್ ಅಲ್ಲಾ’, ‘ಪುದುಕವಿತೈ’ ಮತ್ತು 'ಮೂಂಡ್ರು ಮುಗಂ' ನಂತಹ ಸಾಲು - ಸಾಲು ಹಿಟ್‌ ಸಿನಿಗಳು ಬಂದವು. ಕೆ.ಬಾಲಚಂದರ್ ಅವರ ಹೋಮ್​ ಬ್ಯಾನರ್​ನ ಮೊದಲ ಬಾರಿಗೆ ನಿರ್ಮಾಣ ಮಾಡಿದ ‘ನೇತ್ರಿಕನ್’ ರಜನಿಕಾಂತ್ ಅವರ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲು ಆಯಿತು.

80ರ ದಶಕದಲ್ಲಿ ‘ಪಡಿಕ್ಕಥವನ್’, ‘ಥೀ’, ‘ವೇಲೈಕಾರನ್’, ‘ಧರ್ಮತಿನ್ ತಲೈವಾನ್’, ‘ಮಿ. ಭಾರತ್’ ಮತ್ತು ‘ಮಾವೀರನ್ ’ ನಂತಹ ಹಿಟ್‌ ಸಿನಿಮಾ ಕೊಟ್ಟರು. ತಮ್ಮ ಸಿನಿಮಾ ವೃತ್ತಿಯ 100ನೇ ಚಿತ್ರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯ ‘ಶ್ರೀ ರಾಘವೇಂದ್ರ’ ಚಿತ್ರದಲ್ಲಿ ನಟಿಸಿದರು.

1983ರಲ್ಲಿ ರಜಿನಿಕಾಂತ್ ಅಮಿತಾಬ್ ಬಚ್ಚನ್ ಮತ್ತು ಹೇಮಾ ಮಾಲಿನಿ ಅವರೊಂದಿಗೆ ‘ಅಂಧ ಕನೂನ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈ ಚಿತ್ರವು ಉತ್ತಮ ಪ್ರತಿಕ್ರಿಯೆ ಪಡೆಯಿತು. ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆ ಪಡೆಯಿತು. ಭಾರತೀಯ ಚಿತ್ರರಂಗದ ಇಬ್ಬರು ಬಿಗ್ ಸ್ಟಾರ್​ಗಳ ಮೊದಲ ಚಿತ್ರವಾದಾಗಿನಿಂದ ರಜಿನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ಅವರ ಗೆಳೆತನ ಮತ್ತಷ್ಟು ಗಟ್ಟಿಕೊಂಡಿತು. ಮುಂದೆ ‘ಗಿರಾಫ್ತಾರ್’ ಮತ್ತು ‘ಹಮ್’ನಲ್ಲಿ ಒಟ್ಟಿಗೆ ಕೆಲಸ ಮಾಡಿದರು.

90ರ ದಶಕದಲ್ಲಿ ರಜಿನಿಕಾಂತ್​ಗೆ ಬಹುದೊಡ್ಡ ಯಶಸ್ವಿ ಸಿಕ್ಕ ದಶಕವದು. ‘ತಲಪತಿ’, ‘ಮಣ್ಣನ್’, ‘ಅಣ್ಣಾಮಲೈ’, ‘ಉಝೈಪಾಲಿ’, ‘ವೀರ’, ‘ಬಾಷಾ’, ‘ಮುತ್ತು’, ‘ಅರುಣಾಚಲಂ’ ಮತ್ತು ‘ಪಡಿಯಪ್ಪ’ ಅವರನ್ನು ಉತ್ತುಂಗಕ್ಕೆ ಕೊಂಡೊಯ್ದವು.

1991ರಲ್ಲಿ ಬಾಲಿವುಡ್ ಚಿತ್ರ ‘ಹಮ್’ನಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ಎರಡನೇ ನಾಯಕನಾಗಿ ಕಾಣಿಸಿಕೊಂಡರು. ಇದೇ ವರ್ಷ ಮಣಿರತ್ನಂ ಅವರೊಂದಿಗೆ ‘ತಲಪತಿ’ ಚಿತ್ರದಲ್ಲಿ ನಟಿಸಿದರು. ಇದು ಮಹಾಭಾರತದಿಂದ ಪ್ರೇರಿತವಾದ ಸಿನಿಮಾ ಕಥೆ. ಇದರ ಚಿತ್ರೀಕರಣ ಬಹುತೇಕ ಮೈಸೂರಿನಲ್ಲಿ ನಡೆಯಿತು. ರಜಿನಿಕಾಂತ್‌ ಮತ್ತು ಮಮ್ಮುಟಿ ಅಭಿನಯ ಮನೋಜ್ಞವಾಗಿತ್ತು. 1993ರಲ್ಲಿ ತಾವೇ ಚಿತ್ರಕಥೆ ಬರೆದು ಮತ್ತು ನಿರ್ಮಾಣ ಮಾಡಿ ನಟಿಸಿದ ‘ವಲ್ಲಿ’ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ.

ಆ ನಂತರ ಬಂದ ‘ಬಾಷಾ’ ಬಿಗ್​ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಇದರಿಂದ ಅವರು ಅಭಿಮಾನಿಗಳಿಂದ ಆರಾಧನಾ ಸ್ಥಾನ ಗಳಿಸಿಕೊಂಡರು. ಅಭಿಮಾನಿ ಮತ್ತು ಅನುಯಾಯಿಗಳ ದೊಡ್ಡ ಪಡೆ ಅವರನ್ನು ಹಿಂಬಾಲಿಸಿತು. ಮತ್ತೊಂದು ಯಶಸ್ವಿ ಚಿತ್ರ ‘ಮುತ್ತು’ ಜಪಾನೀಸ್ ಭಾಷೆಗೆ ‘ಮುತ್ತು: ದಿ ಡ್ಯಾನ್ಸಿಂಗ್ ಮಹಾರಾಜ’ ಎಂದು ಡಬ್ ಮಾಡಿದ ಮೊದಲ ತಮಿಳು ಸಿನಿಮಾವಾಯಿತು. ಜಪಾನ್‌ನಲ್ಲಿ ಬಹಳ ಜನಪ್ರಿಯವಾಗಿ ಅಲ್ಲಿಯೂ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡರು.

150ನೇ ಚಿತ್ರ ‘ಪಡಿಯಪ್ಪ’ ರಜಿನಿ ನಟನಾ ವೃತ್ತಿಜೀವನದ ಅದ್ಭುತ ಯಶಸ್ಸು ಗಳಿಸಿತು. ಆ ನಂತರ ಸುಮಾರು ಮೂರು ವರ್ಷಗಳ ವಿಶ್ರಾಂತಿ ತೆಗೆದುಕೊಂಡರು. ಹೋಮ್​ ಬ್ಯಾನರ್​ನಡಿ ನಿರ್ಮಾಣವಾದ ‘ಬಾಬಾ’ದಲ್ಲಿ ನಟಿಸಿದರು. 2002ರ ಆಗಸ್ಟ್ 15ರಂದು ಬಿಡುಗಡೆಯಾದ ಬಾಬಾ ಮೇಲೆ ಅಭಿಮಾನಿಗಳ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದರು. ದುರ್ಬಲ ಚಿತ್ರಕಥೆಯಿಂದಾಗಿ ನಿರೀಕ್ಷೆಗೆ ತಕ್ಕಂತೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಇದಕ್ಕೆ ರಜಿನಿಕಾಂತ್ ಅವರೇ ಚಿತ್ರಕಥೆ ಬರೆದಿದ್ದರು. ‘ವಲ್ಲಿ’ ಚಿತ್ರದ ನಂತರ ಚಿತ್ರಕಥೆಗಾರನಾಗಿ ರಜನಿಗೆ ಎರಡನೇ ಸೋಲು ಇದ್ದಾಗಿತ್ತು. ಸಿನಿಮಾ ಸೋಲಿನಿಂದ ಸಾಕಷ್ಟು ಹಣ ಕೂಡ ಕಳೆದುಕೊಳ್ಳಬೇಕಾಯಿತು.

ಸೋತು ಗೆದ್ದ 'ಬಾಬಾ':

‘ಬಾಬಾ’ ಚಿತ್ರದ ನಿರಾಸೆಯ ನಂತರ ರಜನಿಕಾಂತ್ ಚಿತ್ರಗಳಿಂದ ನಿವೃತ್ತಿ ಹೊಂದುವ ಬಗ್ಗೆ ಯೋಚಿಸಿ ಸ್ವಲ್ಪ ಸಮಯದವರೆಗೆ ರಾಜಕೀಯದಲ್ಲಿ ಆಸಕ್ತಿ ತೋರ್ಪಡಿಸಿದರು. ಅನೇಕ ನಿರ್ದೇಶಕರು ಕಥೆಗಳ ಸ್ಕ್ರಿಪ್ಟ್‌ ಹಿಡಿದು ರಜನಿ ಮನೆಯ ಕದ ತಟ್ಟಿದರು. ಅಂತಿಮವಾಗಿ ಪಿ. ವಾಸು ಅವರಿಗೆ ಓಕೆ ಎಂದು, ಮಲೆಯಾಳಂನ ‘ಮಣಿಚಿತ್ರಥಾಜು’ ಸಿನಿಮಾದ ರಿಮೇಕ್​ ‘ಚಂದ್ರಮುಖಿ’ಯಲ್ಲಿ ಕಾಣಿಸಿಕೊಂಡರು. ಇದು ಅವರ ಪುನರಾಗಮನ ಚಿತ್ರವಾಯಿತು.

2005ರ ಏಪ್ರಿಲ್ 14ರಂದು ಬಿಡುಗಡೆಯಾದ ಈ ಸಿನಿಮಾ, ಹಿಂದಿನ ಎಲ್ಲಾ ಚಿತ್ರಗಳ ಗಲ್ಲಾಪೆಟ್ಟಿಗೆಯ ದಾಖಲೆಗಳನ್ನು ಮುರಿದು ಭರ್ಜರಿ ಹಿಟ್ ಆಯಿತು. ಇದರ ನಂತರ ಮತ್ತೊಂದು ಬ್ಲಾಕ್ಬಸ್ಟರ್, ‘ಶಿವಾಜಿ: ದಿ ಬಾಸ್’, ಎರಡು ವರ್ಷಗಳ ಚಿತ್ರೀಕರಣದ ಬಳಿಕ 2007ರ ಜೂನ್ 15ರಂದು ಬಿಡುಗಡೆಯಾಯಿತು. ಬಿಡುಗಡೆಯಾದ ನಂತರ ಇಂಗ್ಲೆಂಡ್​ ಮತ್ತು ದಕ್ಷಿಣ ಆಫ್ರಿಕಾ ಬಾಕ್ಸ್-ಆಫೀಸ್‌ಗಳ ಟಾಪ್ -10 ಅತ್ಯುತ್ತಮ ಚಿತ್ರಗಳಲ್ಲಿ ಸ್ಥಾನಪಡೆಯಿತು. ವಿದೇಶದಲ್ಲಿ ಇಂತಹ ಅರ್ಹತೆ ಪಡೆದ ಮೊದಲ ತಮಿಳು ಚಲನಚಿತ್ರ ಎಂಬ ಹೆಗ್ಗಳಿಕೆಗೆ ಶಿವಾಜಿ ಪಾತ್ರವಾಯಿತು.

ರಜಿನಿಕಾಂತ್ ನಂತರ ಪಿ.ವಾಸು ಅವರ ‘ಕುಚೆಲಾನ್’ ಚಿತ್ರದಲ್ಲಿ ನಡಿಸಿದರು. ಇದು ಮಲಯಾಳಂ ಚಿತ್ರ ‘ಕಡ ಪರಾಯುಂಬೋಲ್’ನ ರಿಮೇಕ್. ಈ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದರರು. ಆದರೆ, ಇದು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು. 2010ರಲ್ಲಿ ರಜಿನಿಕಾಂತ್ ನಿರ್ದೇಶಕ ಶಂಕರ್ ಅವರೊಂದಿಗೆ ಮತ್ತೊಮ್ಮೆ ಟೆಕ್ನೋ ಥ್ರಿಲ್ಲರ್ ‘ಎಂದರಿನ್’ ಜತೆ ಕೈಜೋಡಿಸಿದರು. ಇದರಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಡ್ಯಾನಿ ಡೆನ್ಜೊಂಗ್ಪಾ ನಟಿಸಿದರು. ಈ ಚಿತ್ರವು ಅಂದಿನ ದಶಕದ ಅತ್ಯಂತ ದುಬಾರಿ ಭಾರತೀಯ ಚಿತ್ರವಾಯಿತು. ಆ ಸಮಯದಲ್ಲಿ ದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಪಡೆಯಿತು. ರಜಿನಿಕಾಂತ್ ತಮ್ಮ ಪುತ್ರಿ ಸೌಂದರ್ಯ ನಿರ್ದೇಶನದ ಎನಿಮೇಷನ್​ 'ಕೊಚಡೈಯಾನ್' ನಟಿಸಿದರು. ಈ ಬಳಿಕ 'ಲಿಂಗಾ', ' ಕಬಾಲಿ', 'ಕಾಳ', ' ರೋಬೋ 2.0', 'ಪೇಟಾ', 'ದರ್ಬಾರ್​' ಸಿನಿಮಾಗಳಲ್ಲಿ ನಟಿಸಿದರು. ರಜಿನಿ ಸಿನಿ ಜರ್ನಿಯ ಅಚ್ಚರಿಯೆಂದರೇ ಮರಾಠಿ ಹಿನ್ನೆಲೆಯಿಂದ ಬಂದವರಾದರೂ ಇದುವರೆಗೂ ಒಂದೇ ಒಂದು ಮರಾಠಿ ಚಿತ್ರಗಳಲ್ಲಿ ನಟಿಸಿಲ್ಲ. ಭಾರತದ ಬಹು ಭಾಷ ಕಲಾವಿದನಾಗಿ ಚೀನಾದ ಜಾಕಿಚಾನ್ ನಂತರ ಅತಿದೊಡ್ಡ ಅಭಿಮಾನಿಗಳ ಬಳಗ ರಜಿನಿಗಿದೆ. ಇಷ್ಟು ಮಾತ್ರವಲ್ಲೆ ಭಾರತೀಯ ಸಿನಿಮಾದ ಬಿಗ್ ಸ್ಟಾರ್​ಗಳೆಲ್ಲಾ ರಜಿನಿಯ ಫ್ಯಾನ್ಸ್​ ಎಂದು ಹೇಳಿಕೊಳ್ಳುವುದು ಅವರಿಗೊಂದು ಹೆಮ್ಮೆಯ ಸಂಗತಿ.

ಸಂದ ಪುರಸ್ಕಾರಗಳು

ಪ್ರಶಸ್ತಿ ಮತ್ತು ಪುರಸ್ಕಾರಗಳ ವಿಷಯಕ್ಕೆ ಬಂದರೆ ರಜಿನಿಕಾಂತ್ ತಮ್ಮ ನ್ಯಾಯಯುತ ಪಾಲುಗಿಂತ ಹೆಚ್ಚಿನದನ್ನು ಪಡೆದುಕೊಂಡಿದ್ದಾರೆ. ಆರು ಬಾರಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ನಾಲ್ಕು ಅತ್ಯುತ್ತಮ ನಟ ಪ್ರಶಸ್ತಿ, ಅತ್ಯುತ್ತಮ ನಟನಿಗಾಗಿ ಎರಡು ವಿಶೇಷ ಪ್ರಶಸ್ತಿಗಳು, ಫಿಲ್ಮ್‌ಫೇರ್ ಅತ್ಯುತ್ತಮ ತಮಿಳು ನಟ ಪ್ರಶಸ್ತಿ ಅವರಿಗೆ ಬಂದಿವೆ. ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣಕ್ಕೆ ರಜಿನಿಕಾಂತ್ ಭಾಜನರಾಗಿದ್ದಾರೆ.

Last Updated : Apr 1, 2021, 12:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.