ಸೂಪರ್‌ಸ್ಟಾರ್ ರಜಿನಿಕಾಂತ್ ತಮ್ಮ ಮಗಳು ಸೌಂದರ್ಯ ಅವರ ಧ್ವನಿ ಆಧಾರಿತ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಹೂಟ್' (Hoote) ಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ಈ ಆ್ಯಪ್ 60-ಸೆಕೆಂಡ್ ಲೈವ್ ಧ್ವನಿ ರೆಕಾರ್ಡಿಂಗ್ ಆಯ್ಕೆಯನ್ನು ನೀಡುತ್ತದೆ ಹಾಗೆ 15 ಭಾರತೀಯ ಮತ್ತು 10 ವಿದೇಶಿ ಭಾಷೆಗಳಲ್ಲಿ ರೆಕಾರ್ಡ್ ಮಾಡಿದ ಧ್ವನಿಯನ್ನು ಅಪ್‌ಲೋಡ್ ಮಾಡಬಹುದಾಗಿದೆ.
ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ ನಂತರ ರಜಿನಿಕಾಂತ್ ಟ್ವೀಟ್ ಮಾಡಿದ್ದು, "ಹೂಟ್-ವಾಯ್ಸ್ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆ, ಭಾರತದಿಂದ ಜಗತ್ತಿಗೆ" ಎಂದಿದ್ದಾರೆ. ಹೂಟ್ನಲ್ಲಿನ ತಮ್ಮ ಮೊದಲ ಧ್ವನಿಯಲ್ಲಿ ಅವರ ದಾದಾಸಾಹೇಬ್ ಪ್ರಶಸ್ತಿ ಬಗ್ಗೆ ಹಾಗೂ ಅಭಿಮಾನಿಗಳ ಬಗ್ಗೆ ಮಾತನಾಡಿರುವ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಫೇಸ್‌ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮುಂತಾದ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಂತೆ ಹೂಟ್ ಹೊರಹೊಮ್ಮಲಿ ಎಂದು ಅವರು ಹಾರೈಸಿದ್ದಾರೆ.
ಹೊಸ ಆ್ಯಪ್ ಕುರಿತು ಮಾತನಾಡಿದ ಸೌಂದರ್ಯಾ, ಕ್ಲಬ್‌ಹೌಸ್ ಮತ್ತು ಟ್ವಿಟರ್ ಸ್ಪೇಸ್‌ಗಳಿಗಿಂತ ಇದು ಭಿನ್ನವಾಗಿದೆ. ಹೂಟ್ ಅಪ್ಲಿಕೇಶನ್ ಮೂಲಕ ಯಾರೊಬ್ಬರ ಧ್ವನಿಯನ್ನೂ ಕೂಡ ರೆಕಾರ್ಡ್ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಎಲ್ಲ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದಿದ್ದಾರೆ.
ನನ್ನ ತಂದೆಗೆ ತಮಿಳಿನಲ್ಲಿ ಹೆಚ್ಚು ಬರೆಯಲು ಬರುವುದಿಲ್ಲ. ಈ ಕಾರಣದಿಂದಾಗೇ ಈ ಅಪ್ಲಿಕೇಶನ್ ರಚಿಸಲು ಕಾರಣವಾಯ್ತು ಎಂದು ತಿಳಿಸಿದ್ದಾರೆ.