ETV Bharat / bharat

Twitter: ಟ್ವಿಟರ್​ ನಿಷೇಧದ ಬೆದರಿಕೆ ಹಾಕಿದ್ದ ಭಾರತ - ಜಾಕ್​ ಡಾರ್ಸಿ ಆರೋಪ, ಇದು ಅಪ್ಪಟ ಸುಳ್ಳೆಂದ ಕೇಂದ್ರ ಸರ್ಕಾರ - ಟ್ವಿಟರ್​ ಮಾಜಿ ಸಿಇಒಇ ಜಾಕ್​ ಡಾರ್ಸಿ

ಭಾರತದಲ್ಲಿ ಟ್ವಿಟರ್​ ನಿಷೇಧಿಸುವ ಬೆದರಿಕೆ, ಸಿಬ್ಬಂದಿ ಮೇಲೆ ದಾಳಿ ಮಾಡಲಾಗಿತ್ತು ಎಂದು ಅದರ ಮಾಜಿ ಸಿಇಒ ಜಾಕ್ ಆರೋಪ ಮಾಡಿದ್ದಾರೆ. ಇದಕ್ಕೆ ತಕ್ಕ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ಹಾಗಿದ್ದರೆ ಯಾರೊಬ್ಬರೂ ಜೈಲಿಗೆ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದೆ.

ಜಾಕ್​ ಡಾರ್ಸಿ ಆರೋಪ
ಜಾಕ್​ ಡಾರ್ಸಿ ಆರೋಪ
author img

By

Published : Jun 13, 2023, 11:00 AM IST

ನವದೆಹಲಿ: ಭಾರತದಲ್ಲಿ ನಿಷೇಧ ಬೆದರಿಕೆ, ತನ್ನ ಉದ್ಯೋಗಿಗಳ ಮೇಲೆ ದಾಳಿ ನಡೆಸಿದೆ ಎಂದು ಜನಪ್ರಿಯ ಮೈಕ್ರೋಬ್ಲಾಗಿಂಗ್​ ಸಂಸ್ಥೆ ಟ್ವಿಟರ್​ನ ಮಾಜಿ ಸಿಇಒ ಜಾಕ್​ ಡಾರ್ಸಿ ಗುರುತರ ಆಪಾದನೆ ಮಾಡಿದ್ದು, ಇದಕ್ಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. 'ಇದೊಂದು ಅಪ್ಪಟ ಸುಳ್ಳು. ಹಾಗಾಗಿದ್ದರೆ, ಈವರೆಗೆ ಒಬ್ಬ ಸಿಬ್ಬಂದಿಯೂ ಜೈಲಿಗೆ ಹೋಗಿಲ್ಲ ಯಾಕೆ?' ಎಂದು ಪ್ರಶ್ನಿಸಿದೆ.

  • This is an outright lie by @jack - perhaps an attempt to brush out that very dubious period of twitters history

    Facts and truth@twitter undr Dorsey n his team were in repeated n continuous violations of India law. As a matter of fact they were in non-compliance with law… https://t.co/SlzmTcS3Fa

    — Rajeev Chandrasekhar 🇮🇳 (@Rajeev_GoI) June 13, 2023 " class="align-text-top noRightClick twitterSection" data=" ">

ಸಂದರ್ಶನವೊಂದರಲ್ಲಿ ಜಾಕ್​ ಡಾರ್ಸಿ ಭಾರತದ ಕಾನೂನುಗಳು ಮತ್ತು ಪ್ರಜಾಪ್ರಭುತ್ವದ ಮೇಲೆ ಕಪ್ಪುಚುಕ್ಕಿ ಇಡುವಂತೆ ಮಾತನಾಡಿದ್ದು, ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿದ್ದ ಹೋರಾಟದ ವೇಳೆ ಕೆಲ ಟ್ವೀಟ್​​ಗಳನ್ನು ಅಳಿಸುವಂತೆ ಭಾರತ ಸರ್ಕಾರ ನಿರ್ದೇಶನ ನೀಡಿತ್ತು. ಇಲ್ಲವಾದಲ್ಲಿ ದೇಶದಲ್ಲಿ ಟ್ವಿಟರ್​ ನಿಷೇಧ ಮಾಡಲಾಗುವುದು ಬೆದರಿಕೆ ಹಾಕಿತ್ತು. ಕೆಲ ಸಿಬ್ಬಂದಿ ಮನೆ ಮೇಲೂ ದಾಳಿ ಮಾಡಿಸಿತ್ತು ಎಂದು ಹೇಳಿದ್ದಾರೆ.

ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​, ಡಾರ್ಸಿ ಮಾಡಿದ ಆರೋಪಗಳೆಲ್ಲವೂ ನಿರಾಧಾರ ಮತ್ತು ಅಪ್ಪಟ ಸುಳ್ಳು ಹೇಳಿಕೆ. ಭಾರತದ ಮೇಲೆ ಸುಖಾಸುಮ್ಮನೆ ಗೂಬೆ ಕೂರಿಸುವ ಕೆಲಸವಾಗಿದೆ. ಟ್ವಿಟರ್​ ಸಿಬ್ಬಂದಿ ಮನೆ ಮೇಲೆ ದಾಳಿ ನಡೆದಿದ್ದರೆ, ಯಾಕೆ ಒಬ್ಬರೂ ಕೂಡ ಜೈಲು ಪಾಲಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ದೇಶದ ಕಾನೂನು ಉಲ್ಲಂಘನೆ: ಡಾರ್ಸಿ ಸಿಇಒ ಆಗಿದ್ದ ವೇಳೆ ಟ್ವಿಟರ್​ ದೇಶದ ಕಾನೂನುಗಳನ್ನು ಉಲ್ಲಂಘನೆ ಮಾಡಿತ್ತು. ಇದು ಸಂಸ್ಥೆಯ ಕಾರ್ಯಾಚರಣೆ ರೀತಿಯನ್ನು ತೋರಿಸುತ್ತದೆ. ಇನ್ನೊಂದು ದೇಶದ ಕಾನೂನು ಮತ್ತು ಸಾರ್ವಭೌಮತ್ವ ಒಪ್ಪಲು ಡಾರ್ಸಿಗೆ ಸಾಧ್ಯವಾಗಿಲ್ಲ. ಅವರ ಈ ಹೇಳಿಕೆ ಟ್ವಿಟರ್​ ಇತಿಹಾಸದ ಸಂಶಯಾಸ್ಪದ ಅವಧಿಯನ್ನು ಹೊರಹಾಕುವ ಪ್ರಯತ್ನವಾಗಿದೆ ಎಂದು ಟ್ವೀಟ್​ ಮಾಡುವ ಮೂಲಕ ಮೂದಲಿಸಿದ್ದಾರೆ.

ವಾಸ್ತವವಾಗಿ ಟ್ವಿಟರ್ ಸಂಸ್ಥೆ 2020 ರಿಂದ 2022 ರವರೆಗೆ ಪದೇ ಪದೆ ದೇಶದ ಕಾನೂನನ್ನು ಉಲ್ಲಂಘಿಸಿದೆ. ಯಾರ ಮೇಲೂ ದಾಳಿ ಮಾಡಿಲ್ಲ ಅಥವಾ ಜೈಲಿಗೆ ಕಳುಹಿಸಲಾಗಿಲ್ಲ. ನಮ್ಮ ಗಮನ ಭಾರತೀಯ ಕಾನೂನುಗಳ ಪಾಲನೆ ಮಾಡುವುದಾಗಿತ್ತು. ಡಾರ್ಸೆ ಅವರ ಅವಧಿಯಲ್ಲಿ ಟ್ವಿಟರ್​ ಭಾರತೀಯ ಕಾನೂನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ ಚಂದ್ರಶೇಖರ್ ಹೇಳಿದ್ದಾರೆ.

ಭಾರತ ಒಂದು ಸಾರ್ವಭೌಮ ರಾಷ್ಟ್ರವಾಗಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಂಪನಿಗಳು ತನ್ನ ಕಾನೂನುಗಳನ್ನು ಪಾಲನೆ ಮಾಡುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಜನವರಿ 2021 ರಲ್ಲಿ ನಡೆದ ಪ್ರತಿಭಟನೆಗಳ ವೇಳೆ ಸಾಕಷ್ಟು ತಪ್ಪು ಮಾಹಿತಿ ಹರಿದಾಡುತ್ತಿದ್ದವು. ಸರ್ಕಾರ ಅಂತಹ ನಕಲಿ ಸುದ್ದಿಗಳನ್ನು ಅಳಿಸಿ ಹಾಕಲು ಸೂಚಿಸಿತ್ತು. ಕಾರಣ ಇವು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವುದನ್ನು ತಪ್ಪಿಸುವುದಾಗಿತ್ತು ಎಂದು ಸಚಿವರು ವಿವರಿಸಿದರು.

ಜಾಕ್​ ಅವಧಿಯಲ್ಲಿ ಟ್ವಿಟರ್‌ ಪಕ್ಷಪಾತದ ಧೋರಣೆ ಅನುಸರಿಸುತ್ತಿತ್ತು. ಭಾರತದಲ್ಲಿ ತಪ್ಪು ಮಾಹಿತಿಯನ್ನು ತೆಗೆದುಹಾಕುವಲ್ಲಿ ಹಿಂದೇಟು ಹಾಕುತ್ತಿತ್ತು. ಅದೇ ಅಮೆರಿಕದಲ್ಲಿ ಇದೇ ರೀತಿಯ ಘಟನೆಗಳು ನಡೆದಾಗ ಅವರೇ ಖುದ್ದಾಗಿ ಅಳಿಸುತ್ತಿದ್ದರು ಎಂದು ತಿವಿದಿದ್ದಾರೆ.

ಜಾಕ್​​ ಡಾರ್ಸಿ ಆರೋಪವೇನು?: ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಟ್ವಿಟರ್​ ಮಾಜಿ ಸಿಇಒ ಜಾಕ್​ ಡಾರ್ಸಿ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಟ್ವಿಟರ್​ ಮೇಲೆ ಒತ್ತಡ, ಬೆದರಿಕೆ ಹಾಕಲಾಗಿತ್ತು. ಸಿಬ್ಬಂದಿಯ ಮೇಲೆ ಸರ್ಕಾರಿ ಸಂಸ್ಥೆಗಳಿಂದ ದಾಳಿ ನಡೆಸಲಾಗಿತ್ತು. ರೈತರ ಪ್ರತಿಭಟನೆಯ ವೇಳೆ ಹಲವು ಸುದ್ದಿಗಳನ್ನು ಅಳಿಸಿ ಹಾಕುವಂತೆ ಒತ್ತಡ ಹಾಕಲಾಗಿತ್ತು. ಇಲ್ಲವಾದಲ್ಲಿ ಭಾರತದಲ್ಲಿ ಟ್ವಿಟರ್​ ನಿಷೇಧಿಸುವುದಾಗಿ ಎಚ್ಚರಿಕೆ ಬಂದಿತ್ತು ಎಂದು ಹೇಳಿದ್ದರು.

ಭಾರತ ನಮಗೆ ಬಹಳ ದೊಡ್ಡ ಮಾರುಕಟ್ಟೆಯಾಗಿದೆ. ಕೆಲವು ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಸೂಚನೆಗಳನ್ನು ಪಾಲಿಸದಿದ್ದರೆ, ಕಚೇರಿಗಳನ್ನು ಮುಚ್ಚುತ್ತೇವೆ ಎಂದು -ಪ್ರಜಾಪ್ರಭುತ್ವ ದೇಶವಾದ ಭಾರತ ಬೆದರಿಕೆ ಹಾಕಿತ್ತು ಎಂದು ಡಾರ್ಸಿ ಗಂಭೀರ ಆಪಾದನೆ ಮಾಡಿದ್ದರು.

ಇದನ್ನೂ ಓದಿ: ಹೆತ್ತ ತಾಯಿ ಕೊಂದು ಸೂಟ್​ ಕೇಸ್​ನಲ್ಲಿ ಶವ ತಂದು ಪೊಲೀಸರಿಗೆ ಶರಣಾದ ಮಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.