ETV Bharat / bharat

ಮೀಸಲಾತಿ ಪ್ರತಿಭಟನೆಯಲ್ಲಿ ಹಿಂಸಾಚಾರ: ಪೊಲೀಸರಿಂದ ಅಶ್ರುವಾಯು ಪ್ರಯೋಗ

ರಾಜಸ್ಥಾನದಲ್ಲಿ ಮಾಲಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಕಲ್ಪಿಸಲು ಕೋರಿ ನಡೆಸಲಾಗುತ್ತಿರುವ ಹೋರಾಟದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಗುಂಪು ಚದುರಿಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.

ಮೀಸಲು ಪ್ರತಿಭಟನೆಯಲ್ಲಿ ಹಿಂಸಾಚಾರ
ಮೀಸಲು ಪ್ರತಿಭಟನೆಯಲ್ಲಿ ಹಿಂಸಾಚಾರ
author img

By

Published : Apr 22, 2023, 8:01 AM IST

ಭರತ್‌ಪುರ (ರಾಜಸ್ಥಾನ): ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ.12ರಷ್ಟು ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ರಾಜಸ್ಥಾನದಲ್ಲಿ ಮಾಲಿ ಸಮುದಾಯದ ಜನರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ನಿನ್ನೆ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ನಡೆಸಲಾಗಿದೆ. ಈ ವೇಳೆ ನಡೆದ ತಿಕ್ಕಾಟದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನು ತಡೆಯಲು ಖಾಕಿ ಪಡೆ ಅಶ್ರುವಾಯು ಶೆಲ್​ ಹಾರಿಸಿದ್ದಾರೆ.

ಭರತ್‌ಪುರದ ಜಿಲ್ಲೆಯ ಜೈಪುರ- ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಹೆದ್ದಾರಿ ತಡೆದರು. ಇದರಿಂದ ವಾಹನ ದಟ್ಟಣೆ ಉಂಟಾಗಿ, ಜನರು ತೀವ್ರ ತೊಂದರೆ ಅನುಭವಿಸಿದರು. ಹೆದ್ದಾರಿ ತಡೆಯನ್ನು ತೆರವು ಮಾಡಲು ಪೊಲೀಸರು ಮುಂದಾದಾಗ ರೊಚ್ಚಿಗೆದ್ದ ಹೋರಾಟಗಾರರು ಖಾಕಿ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಇಬ್ಬರ ಮಧ್ಯೆ ತೀವ್ರ ತಿಕ್ಕಾಟ ನಡೆದಿದೆ.

ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಶ್ರುವಾಯು ಶೆಲ್​ಗಳನ್ನು ಸಿಡಿಸಿ, ಗುಂಪನ್ನು ಚದುರಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿ ಉಂಟಾಗಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಸಮುದಾಯದ ಸದಸ್ಯರು ಜೈಪುರದಲ್ಲಿ ಸಾಮಾಜಿಕ ನ್ಯಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ರಸ್ತೆಗೆ ಬ್ಯಾರಿಕೇಡ್​ನಿಂದಾಗಿ ಕಿತ್ತಾಟ: ಹಿಂದುಳಿದ ವರ್ಗದಡಿ ಬರುವ ಮಾಲಿ ಸಮುದಾಯಕ್ಕೆ ಸರ್ಕಾರಿ ಉದ್ಯೋಗ, ಶಿಕ್ಷಣ ಸಂಸ್ಥೆಗಳಲ್ಲಿ ಪ್ರತ್ಯೇಕ ಶೇಕಡಾ 12 ಮೀಸಲಾತಿ ನೀಡಬೇಕು ಎಂಬ ಹೋರಾಟ ನಡೆಸಲಾಗುತ್ತಿದೆ. ಶುಕ್ರವಾರ ಹೆದ್ದಾರಿ ತಡೆ ನಡೆಸುವುದಾಗಿ ಸಮುದಾಯ ಘೋಷಿಸಿತ್ತು. ಆಂದೋಲನದ ಹಿನ್ನೆಲೆಯಲ್ಲಿ ಬಲ್ಲಭಗಢ, ಹಲೈನಾ, ವೈರ್, ಆರೋಂಡಾ ಮತ್ತು ರಾಮಸ್‌ಪುರ ಮಾರ್ಗವಾಗು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತಡೆಯಲು ಪ್ರತಿಭಟನಾಕಾರರು ಮುಂದಾಗಿದ್ದರು. ಆದರೆ, ಪೊಲೀಸರು ಈ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಇದು ಕಿತ್ತಾಟಕ್ಕೆ ಕಾರಣವಾಯಿತು.

ಬ್ಯಾರಿಕೇಡ್​ ಹಾಕಿದ್ದರಿಂದ ಹೆದ್ದಾರಿ ತಡೆಗೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪೊಲೀಸರು ಜೊತೆಗೆ ವಾಗ್ವಾದಕ್ಕಿಳಿದರು. ಇದರಿಂದ ಗದ್ದಲ ಉಂಟಾಯಿತು. ರೊಚ್ಚಿಗೆದ್ದ ಕೆಲ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಇದನ್ನು ತಡೆಯಲು ಪೊಲೀಸರು ಪ್ರತಿಯಾಗಿ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಸೌಮ್ಯವಾಗಿ ನಿಭಾಯಿಸಲು ಉದ್ದೇಶಿಸಿದ್ದ ಹೋರಾಟ ತೀವ್ರ ಸ್ವರೂಪ ಪಡೆಯಿತು. ಪ್ರತಿಭಟನಾಕಾರರ ಅಶಿಸ್ತಿನಿಂದಾಗಿ ಅಶ್ರುವಾಯು ಬಳಸಲಾಯಿತು. ಪರಿಸ್ಥಿತಿ ಸದ್ಯ ಹತೋಟಿಯಲ್ಲಿದ್ದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಸಿಂಗ್ ತಿಳಿಸಿದ್ದಾರೆ.

ಸಿಎಂ ಗೆಹ್ಲೋಟ್​ ಮಾಲಿ ಸಮುದಾಯ: ಕಾಂಗ್ರೆಸ್ ಶಾಸಕ ನಾಡಬೈ ಶಾಸಕ ಜೋಗಿಂದರ್ ಸಿಂಗ್ ಅವಾನಾ ಮಾತನಾಡಿ, ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರವು ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಸಮುದಾಯಕ್ಕೆ ಮೀಸಲಾತಿ ನೀಡಲಾಗುವುದು ಎಂಬ ಭರವಸೆ ನೀಡಲಾಗಿದೆ. ಅದರಂತೆ ಸರ್ಕಾರ ನಡೆದುಕೊಳ್ಳಬೇಕು. ಮಿಗಿಲಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೂಡ ಮಾಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದನ್ನು ಗಮನಿದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ಓದಿ: ಮಾನಹಾನಿ ಕೇಸ್​: ಶಿಕ್ಷೆಯ ವಿರುದ್ಧ ಮುಂದಿನ ವಾರ ರಾಹುಲ್​ ಗಾಂಧಿ ಹೈಕೋರ್ಟ್​ನಲ್ಲಿ ಚಾಲೆಂಜ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.