ಜೈಪುರ: 20 ಅಡಿ ಆಳದಷ್ಟು ಬಾಯ್ತೆರೆದ ರಸ್ತೆಯ ಗುಂಡಿಯೊಳಗೆ ಚಲಿಸುತ್ತಿದ್ದ ಆಟೋವೊಂದು ಬಿದ್ದಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಜೈಪುರದ ಅಶೋಕ ನಗರದಲ್ಲಿ ನೀರಿನ ಪೈಪ್ಲೈನ್ ಒಡೆದು ರಸ್ತೆ ಬಾಯ್ಬಿಟ್ಟಿದ್ದು, 20 ಅಡಿಯಷ್ಟು ಆಳದ ಗುಂಡಿ ಬಿದ್ದಿದೆ. ಈ ಗುಂಡಿಯಲ್ಲಿ ಬಿದ್ದ ಆಟೋ ಚಾಲಕ ಹಾಗೂ ಪ್ರಯಾಣಿಕನನ್ನು ತುರ್ತು ಸೇವಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ. ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಟೋ ಡ್ರೈವರ್ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ಹೆಂಡತಿ ಸುಂದರಿ.. ಗಂಡನಿಗೆ ಬರೀ ಗುಮಾನಿ: ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ!
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆಯನ್ನು ಸೀಲ್ ಮಾಡಿದ್ದಾರೆ. ರಸ್ತೆ ಬಿರುಕು ಬಿಡುತ್ತಿದ್ದಂತೆಯೇ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಅಪಾಯಕ್ಕೆ ಎಡೆಮಾಡಿಕೊಟ್ಟಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.