ಜೈಪುರ: ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನ ನಂ.1 ಸ್ಥಾನದಲ್ಲಿದ್ದು, ಇದು ಪುರುಷರ ರಾಜ್ಯ ಎಂದು ಸದನದಲ್ಲಿ ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲಾ ಹೇಳಿಕೆ ನೀಡಿದ್ದಾರೆ.
ಬುಧವಾರ ಸದನದಲ್ಲಿ ಮಾತನಾಡಿದ ಸಚಿವರು,'ಅತ್ಯಾಚಾರ ಪ್ರಕರಣಗಳಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ, ರೇಪ್ ಕೇಸ್ಗಳಲ್ಲಿ ನಾವೇಕೆ ಮುಂದಿದ್ದೇವೆ?.. ರಾಜಸ್ಥಾನ ಪುರುಷರ ರಾಜ್ಯ, ಏನ್ಮಾಡೋದು' ಎಂದು ನಗುತ್ತಾ ಹೇಳಿದ್ದಾರೆ. ಸಚಿವರ ಈ ಹೇಳಿಕೆ ಕೇಳಿ ಸದನದಲ್ಲಿದ್ದ ಕೆಲ ಶಾಸಕರು ನಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸದನದಲ್ಲಿ ಸಚಿವರ ರೇಪ್ ಕುರಿತು ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಚಿವರ ಹೇಳಿಕೆಯನ್ನು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಖಂಡಿಸಿದ್ದಾರೆ. 'ಶಾಕಿಂಗ್, ಡಿಸ್ಗಸ್ಟಿಂಗ್, ಬಟ್ ನಾಟ್ ಸರ್ಪ್ರೈಸಿಂಗ್' ಎಂದು ಸಚಿವರ ಹೇಳಿಕೆಯ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
(ಇದನ್ನೂ ಓದಿ: ಯುಪಿಯಲ್ಲಿ ಸತತ 2ನೇ ಸಲ ಅಧಿಕಾರದತ್ತ BJP.. ನಾಲ್ಕು ದಾಖಲೆ ಬರೆಯಲಿರುವ ಫೈರ್ ಬ್ರ್ಯಾಂಡ್ ಯೋಗಿ!)