ETV Bharat / bharat

ಗರ್ಭ ಧರಿಸಲು ಇಚ್ಛಿಸಿದ ಪತ್ನಿ: ಅಪರಾಧಿ ಪತಿಗೆ ತುರ್ತು ಪೆರೋಲ್ ನೀಡಿದ ಹೈಕೋರ್ಟ್​​ - ತಾಯಿ ಆಗಬೇಕೆಂಬ ಇಚ್ಛೆ

ಪೋಕ್ಸೋ ಸೇರಿ ವಿವಿಧ ಕಾಯ್ದೆಗಳಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ರಾಜಸ್ಥಾನ ಹೈಕೋರ್ಟ್ 15 ದಿನಗಳ ತುರ್ತು ಪೆರೋಲ್ ನೀಡಿದೆ.

rajasthan-minor-rape-convict-granted-15-days-parole-to-get-wife-pregnant
ಪೋಕ್ಸೋ ಕೇಸ್​: ಅಪರಾಧಿಗೆ 15 ದಿನಗಳ ತುರ್ತು ಪೆರೋಲ್ ಕೊಟ್ಟ ಹೈಕೋರ್ಟ್​​... ಕಾರಣವೇನು ಗೊತ್ತಾ?
author img

By

Published : Oct 15, 2022, 10:50 PM IST

Updated : Oct 15, 2022, 10:57 PM IST

ಜೈಪುರ (ರಾಜಸ್ಥಾನ): ತನ್ನ ಪತ್ನಿಯನ್ನು ತಾಯಿಯಾಗಿಸುವ ನಿಟ್ಟಿನಲ್ಲಿ ಅತ್ಯಾಚಾರ ಪ್ರಕರಣದ ಅಪರಾಧಿಗೆ ಶನಿವಾರ ರಾಜಸ್ಥಾನ ಹೈಕೋರ್ಟ್ 15 ದಿನಗಳ ಪೆರೋಲ್ ನೀಡಿ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಸಮೀರ್ ಜೈನ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.

ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ 25 ವರ್ಷದ ರಾಹುಲ್ ಎಂಬ ಅಪರಾಧಿ ಪೋಕ್ಸೋ ಸೇರಿ ವಿವಿಧ ಕಾಯ್ದೆಗಳಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಸದ್ಯ ರಾಜಸ್ಥಾನದ ಅಲ್ವಾರ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆದರೆ, ಈತನ ಪತ್ನಿ ಬ್ರಿಜೇಶ್ ದೇವಿ ತಾನು ತಾಯಿ ಆಗಬೇಕೆಂಬ ಇಚ್ಛೆ ಹೊಂದಿದ್ದು, ಪತಿಗೆ ಪೆರೋಲ್ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಳು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅಪರಾಧಿ ರಾಹುಲ್ ಈಗಾಗಲೇ ಎರಡು ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ. ಪೆರೋಲ್ ಅರ್ಜಿ ಸಲ್ಲಿಸಿರುವ ಆರೋಪಿಯ ಯುವ ಪತ್ನಿ ತಾನು ಮಕ್ಕಳಿಲ್ಲದವಳಾಗಿದ್ದು, ಪತಿ ಇಲ್ಲದೆ ದೀರ್ಘಕಾಲ ಬದುಕಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಸೆರೆವಾಸದಲ್ಲಿರುವ ಅಪರಾಧಿ ಪತಿಯೊಂದಿಗೆ ತನ್ನ ಮದುವೆಯ ಬಂಧ ಉಳಿಸಿಕೊಳ್ಳಲು, ಅದನ್ನು ಮುಂದುವರೆಸಲು ಬಯಸುತ್ತಾರೆ ಎಂಬ ಅಂಶಗಳನ್ನು ಗಮನಿಸಿದೆ.

ಜೊತೆಗೆ ವಂಶಾವಳಿಯನ್ನು ಸಂರಕ್ಷಿಸುವ ಉದ್ದೇಶದಿಂದ ಪತಿಯಿಂದ ಮಗುವನ್ನು ಹೊಂದಲು ಪತ್ನಿ ಅರ್ಜಿ ಸಲ್ಲಿಸಿದ್ದಾರೆ ಹಾಗೂ ಅಪರಾಧಿ ಹಾಗೂ ಅರ್ಜಿದಾರರ ಚಿಕ್ಕ ವಯಸ್ಸನ್ನೂ ಪರಿಗಣಿಸಿ 15 ದಿನಗಳ ತುರ್ತು ಪೆರೋಲ್‌ನಲ್ಲಿ ಬಿಡುಗಡೆ ಮಾಡಲು ನ್ಯಾಯಾಲಯವು ಸಮ್ಮಿತಿಸಿದೆ.

ಇದೇ ವೇಳೆ 2 ಲಕ್ಷ ರೂ.ಗಳ ಸ್ವಂತ ಶ್ಯೂರಿಟಿ ನೀಡಬೇಕೆಂದು ನ್ಯಾಯ ಪೀಠ ಸೂಚಿಸಿದೆ. ಈ ಹಿಂದೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿಯು ಮಗು ಪಡೆಯಬೇಕೆಂಬ ಇಚ್ಛೆ ಪೂರೈಸಲು 15 ದಿನಗಳ ಪೆರೋಲ್ ನೀಡಿದ ವಿಚಾರವನ್ನೂ ಈ ಪ್ರಕರಣದಲ್ಲಿ ನ್ಯಾಯ ಪೀಠ ಉಲ್ಲೇಖಿಸಿದೆ.

ಇದನ್ನೂ ಓದಿ: ಮಗು ಪಡೆಯಬೇಕೆಂಬ ಪತ್ನಿಯ ಇಚ್ಛೆ ಪೂರೈಸಲು ಕೈದಿಗೆ ಪೆರೋಲ್​ ನೀಡಿದ ಹೈಕೋರ್ಟ್​!

Last Updated : Oct 15, 2022, 10:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.