ETV Bharat / bharat

ರಾಬರ್ಟ್ ವಾದ್ರಾ ಕಸ್ಟಡಿ ವಿಚಾರಣೆಗೆ ಕೋರಿ ರಾಜಸ್ಥಾನ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ಇಡಿ - ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರಕರಣ

ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರಕರಣ ಸಂಬಂಧ ಕಸ್ಟಡಿ ವಿಚಾರಣೆ ನಡೆಸಲು ಕೋರಿ ಇಡಿ ಸಲ್ಲಿಸಿರುವ ಅರ್ಜಿಯನ್ನು ಇಂದು ರಾಜಸ್ಥಾನ ಹೈಕೋರ್ಟ್ ವಿಚಾರಣೆ ನಡೆಸಲಿದೆ.

Robert vadra
ರಾಬರ್ಟ್ ವಾದ್ರಾ
author img

By

Published : Jan 18, 2021, 2:53 PM IST

ಜೋಧ್​ಪುರ (ರಾಜಸ್ಥಾನ): ಬೇನಾಮಿ ಆಸ್ತಿ ಪ್ರಕರಣ ಸಂಬಂಧ ರಾಬರ್ಟ್ ವಾದ್ರಾ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಅನುಮತಿ ಕೋರಿ ಜಾರಿ ನಿರ್ದೇಶನಾಲಯ (ಇಡಿ) ರಾಜಸ್ಥಾನ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಪತಿಯಾಗಿರುವ ಉದ್ಯಮಿ ರಾಬರ್ಟ್ ವಾದ್ರಾರನ್ನು ಈಗಾಗಲೇ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಆದಾಯ ತೆರಿಗೆ ಇಲಾಖೆ (ಐಟಿ) ತನಿಖೆ ನಡೆಸುತ್ತಿದೆ. ಇದೀಗ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರಕರಣ ಸಂಬಂಧ ಕಸ್ಟಡಿ ವಿಚಾರಣೆ ನಡೆಸಲು ಕೋರಿ ಇಡಿ ಸಲ್ಲಿಸಿರುವ ಅರ್ಜಿಯನ್ನು ಇಂದು ರಾಜಸ್ಥಾನ ಹೈಕೋರ್ಟ್ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: ಹಿಂದಿನ ಸರ್ಕಾರಕ್ಕೆ ಆಧುನಿಕತೆಯ ಅರಿವಿರಲಿಲ್ಲ: ಮೆಟ್ರೋ ಯೋಜನೆಗೆ ಭೂಮಿ ಪೂಜೆ ಬಳಿಕ ಕಾಂಗ್ರೆಸ್​ಗೆ ಮೋದಿ ಟಾಂಗ್​

2015ರಲ್ಲಿ ಬಿಹಾರದ ಬಿಕಾನೆರ್‌ನಲ್ಲಿ ಬಡಜನರಿಗಾಗಿ ಮೀಸಲಿದ್ದ ಭೂಮಿಯನ್ನು ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್‌ ಎಂಬ ಕಂಪನಿ ಖರೀದಿಸಿದ ಸಂಬಂಧ ಇಡಿ ಕೇಸ್​ ದಾಖಲಿಸಿಕೊಂಡಿತ್ತು. ಸ್ಕೈಲೈಟ್ ಕಂಪನಿಯೊಂದಿಗೆ ಪಾರ್ಟ್​ನರ್​ಶಿಪ್ ಹೊಂದಿದ್ದ ರಾಬರ್ಟ್ ವಾದ್ರಾ ಹಾಗೂ ಅವರ ತಾಯಿ ಮೋರಿನ್ ವಾದ್ರಾ ಆರೋಪಿಗಳಾಗಿದ್ದಾರೆ.

ರಾಬರ್ಟ್ ವಾದ್ರಾಗೆ ಈ ಹಿಂದೆ ಜಾಮೀನು ನೀಡಿದ್ದ ಹೈಕೋರ್ಟ್, ಮೋರಿನ್ ವಾದ್ರಾ ಬಂಧನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.