ಥಾರ್ ಮರುಭೂಮಿಯನ್ನು ಒಡಲಲ್ಲಿ ಇಟ್ಟುಕೊಂಡಿರುವ ರಾಜಸ್ಥಾನ ಪರಿಸರ ಕಾಳಜಿಯಲ್ಲೂ ಮುಂದಿದೆ. ಅಂದರೆ ಇಲ್ಲಿನ ಚಿತ್ತೋರ್ಗಢನ ಮಡಲ್ಡಾ ಗ್ರಾಮ ಪರಿಸರ ಸಂರಕ್ಷಣೆಗೆ ಜೀವಂತ ಸಾಕ್ಷಿಯಾಗಿದೆ. ಸುಮಾರು ಒಂದೂವರೆ ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮವೂ ಸುತ್ತಲೂ ಹಸಿರಿನಿಂದ ಆವೃತವಾಗಿದೆ.
ಈ ಗ್ರಾಮದಲ್ಲಿ ಯಾವುದೇ ಮರ ಕಡಿಯುವುದಿರಲಿ, ಅದರ ಒಂದು ಕೊಂಬೆಯನ್ನು ಸಹ ಮುಟ್ಟುವಂತಿಲ್ಲ. ಧೋಕ್ ಎಂಬ ಜಾತಿಯ ಮರಗಳನ್ನು ಇಲ್ಲಿ ನೆಡಲಾಗಿದೆ. ಇವುಗಳ ಕತ್ತರಿಸಿದರೆ ಅಂತವರಿಗೆ ಹಾನಿಯಾಗುತ್ತದೆ ಎಂದು ನಂಬಲಾಗಿದೆ. ಅಲ್ಲದೇ ಗ್ರಾಮದೇವತೆ ಅಂತವರಿಗೆ ಶಿಕ್ಷಿಸುತ್ತಾನೆ ಅನ್ನೋದು ಜನರ ವಿಶೇಷ ನಂಬಿಕೆ. ಹೀಗಾಗಿ ಗ್ರಾಮದ ಮರಗಳ ಕತ್ತರಿಸುವುದಿರಲಿ, ಕೊಂಬೆಗಳನ್ನು ಸಹ ಜನರು ಮುಟ್ಟುವುದಿಲ್ಲ.
ಈ ಹಳ್ಳಿಯ ಯಾರ ಮನೆಯಲ್ಲಾದರೂ ಶುಭ ಕಾರ್ಯ ನಡೆದರೆ ಮೊದಲು ಗ್ರಾಮ ದೇವತೆಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಆಶೀರ್ವಾದ ಪಡೆದ ಬಳಿಕವಷ್ಟೇ ಮುಂದಿನ ಕಾರ್ಯಕ್ಕೆ ಅಡಿ ಇಡುತ್ತಾರೆ.
ಇದೆಲ್ಲದರ ನಡುವೆ ಈ ದೇವಾಲಯವನ್ನು ಯಾವಾಗ, ಯಾರು ನಿರ್ಮಿಸಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಗ್ರಾಮಸ್ಥರ ಪ್ರಕಾರ ಈ ದೇವಾಲಯವು ಸುಮಾರು 1 ಸಾವಿರ ವರ್ಷ ಹಳೆಯದಂತೆ.
ಗ್ರಾಮಸ್ಥರ ಪ್ರಕಾರ, ಇಲ್ಲಿ ನೆಲೆಸಿರುವ ದೇವನಾರಾಯಣ ಶ್ರೀಕೃಷ್ಣನ ಅವತಾರವಂತೆ. ಗುರ್ಜರ್ ಸಮಾಜವು ದೇವನಾರಾಯಣನನ್ನು ಆರಾಧ್ಯ ದೇವರು ಎಂದು ಪರಿಗಣಿಸುತ್ತದೆ. ಈ ದೇವರು ನಮ್ಮನ್ನು ಹಗಲಿರುಳು ಕಾಯುತ್ತಿದ್ದಾನೆ. ಹೀಗಾಗಿ ಗ್ರಾಮದಲ್ಲಿ ದಟ್ಟ ಅರಣ್ಯ ಉಳಿದಿದೆ. ಶುದ್ಧಗಾಳಿ ಸಿಗುತ್ತಿದೆ. ಜೊತೆಗೆ ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ನಂಬಲಾಗಿದೆ.