ETV Bharat / bharat

ರಾಜಸ್ಥಾನ ಸಚಿವ ಸಂಪುಟ ವಿಸ್ತರಣೆ : 15 ಮಂತ್ರಿಗಳಿಗೆ ಪ್ರಮಾಣ ವಚನ

11 ಮಂದಿ ಕ್ಯಾಬಿನೆಟ್​ ಸಚಿವರು ಮತ್ತು ನಾಲ್ವರು ಸಚಿವರು ರಾಜಸ್ಥಾನದಲ್ಲಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲ ಕಲ್​​ರಾಜ್ ಮಿಶ್ರಾ (Governor Kalraj Mishra) ಪ್ರಮಾಣವಚನ ಬೋಧಿಸಿದ್ದಾರೆ..

author img

By

Published : Nov 21, 2021, 7:29 PM IST

Rajasthan Cabinet expanded: 15 ministers sworn in
ರಾಜಸ್ಥಾನ ಸಚಿವ ಸಂಪುಟ ವಿಸ್ತರಣೆ: 15 ಮಂತ್ರಿಗಳಿಗೆ ಪ್ರಮಾಣವಚನ

ಜೈಪುರ,(ರಾಜಸ್ಥಾನ) : ಬಹುನಿರೀಕ್ಷಿತ ರಾಜಸ್ಥಾನ ಸರ್ಕಾರದ (Rajasthan Government) ಸಚಿವ ಸಂಪುಟ ವಿಸ್ತರಣೆಯಾಗಿದೆ. 11 ಮಂದಿ ಕ್ಯಾಬಿನೆಟ್​ ಸಚಿವರು ಮತ್ತು ನಾಲ್ವರು ಸಚಿವರು ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಕಲ್​​ರಾಜ್ ಮಿಶ್ರಾ (Governor Kalraj Mishra) ಪ್ರಮಾಣ ವಚನ ಬೋಧಿಸಿದ್ದಾರೆ.

ಮಮತಾ ಭೂಪೇಶ್, ಭಜನ್ ಲಾಲ್ ಜಾತವ್ ಮತ್ತು ಟಿಕಾರಾಂ ಜುಲ್ಲಿ ಅವರು ಮೊದಲು ಸಚಿವರಾಗಿದ್ದು, ಈಗ ಸಂಪುಟ ದರ್ಜೆ ಸಚಿವರನ್ನಾಗಿ ಮಾಡಲಾಗಿದೆ. ಇದರ ಜೊತೆಗೆ ಹಿಂದಿನ ವರ್ಷ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರೂ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

  • राजस्थान की कांग्रेस सरकार में मंत्री पद की शपथ ग्रहण करने वाले सभी जनप्रतिनिधियों को बहुत बधाई एवं शुभकामनाएं। pic.twitter.com/kovTtJ4VRz

    — Rajasthan PCC (@INCRajasthan) November 21, 2021 " class="align-text-top noRightClick twitterSection" data=" ">

ಹೇಮರಾಮ್ ಚೌಧರಿ, ಮಹೇಂದ್ರಜೀತ್ ಸಿಂಗ್ ಮಾಳವಿಯಾ, ರಾಮ್‌ಲಾಲ್ ಜಾಟ್, ಮಹೇಶ್ ಜೋಶಿ, ಗೋವಿಂದರಾಮ್ ಮೇಘವಾಲ್ ಮತ್ತು ಶಕುಂತಲಾ ರಾವತ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇವರೊಂದಿಗೆ ಜಾಹಿದಾ, ಬ್ರಿಜೇಂದ್ರ ಸಿಂಗ್ ಓಲಾ, ರಾಜೇಂದ್ರ ಗುಡಾ ಮತ್ತು ಮುರಾರಿ ಲಾಲ್ ಮೀನಾ ಅವರು ಸಚಿವರಾಗಿ ಪ್ರಮಾಣ ವಚನ (Oath taking)ಸ್ವೀಕರಿಸಿದರು. ಈಗ ಸದ್ಯಕ್ಕೆ ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹೊರತುಪಡಿಸಿ 19 ಕ್ಯಾಬಿನೆಟ್ ಮಂತ್ರಿಗಳು ಮತ್ತು 10 ಸಚಿವರಿದ್ದಾರೆ.

ಇದನ್ನೂ ಓದಿ: ಮಗನ‌ ಜತೆ ಜಗಳವಾಡಿ ಮನೆ ಬಿಟ್ಟು ಹೋದ ತಾಯಿ : ಅಮ್ಮನನ್ನು ಹುಡುಕಲು ಮಗನ ಪರದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.