ETV Bharat / bharat

ಬಿಸಿಲಿನ ತಾಪಕ್ಕೆ ಕರಗಿತಾ ರೈಲು ಹಳಿ..? ತಪ್ಪಿದ ಮಹಾ ದುರಂತ.. ಮೂವರು ಎಂಜಿನಿಯರ್​​ಗಳಿಂದ ತನಿಖೆ! - ಬಿಸಿಲಿನ ಬೇಗೆಗೆ ರೈಲು ಹಳಿಯೇ ಕರಗಿಹೋಗಿರುವ ಘಟನೆ

ಲಖನೌದ ನಿಗೋಹಾನ್ ರೈಲು ನಿಲ್ದಾಣದಲ್ಲಿ ಬಿಸಿಲಿನ ತಾಪದಿಂದ ರೈಲು ಹಳಿ ಕರಗಿದೆ ಘಟನೆ ನಡೆದಿದೆ. ಮೂವರು ರೈಲ್ವೆ ಎಂಜಿನಿಯರ್‌ಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ರೈಲು ಹಳಿ ಕರಗಲು ಕಾರಣವಾದ ಅಂಶ ಗೊತ್ತಾಗಲಿದೆ.

up_luc_04_railway_7203805
ಬಿಸಿಲಿನ ತಾಪಕ್ಕೆ ಕರಗಿತಾ ರೈಲು ಹಳಿ..? ತಪ್ಪಿದ ಮಹಾ ದುರಂತ.. ಮೂವರು ಎಂಜಿನಿಯರ್​​ಗಳಿಂದ ತನಿಖೆ!
author img

By

Published : Jun 20, 2023, 9:38 AM IST

ಲಖನೌ: ಲಖನೌದ ನಿಗೋಹನ್ ರೈಲು ನಿಲ್ದಾಣದಲ್ಲಿ ಬಿಸಿಲಿನ ಬೇಗೆಗೆ ರೈಲು ಹಳಿಯೇ ಕರಗಿಹೋಗಿರುವ ಘಟನೆ ನಡೆದಿದೆ. ನೀಲಾಂಚಲ್ ಎಕ್ಸ್‌ಪ್ರೆಸ್ ಈ ಹಳಿಯ ಮೇಲೆ ಹಾದು ಹೋಗಿದೆ. ಆದರೆ ಕಡಿಮೆ ವೇಗದಲ್ಲಿ ಹೋಗಿದ್ದರಿಂದ ಯಾವುದೇ ಅಪಾಯ ಆಗಿರಲಿಲ್ಲ. ಈ ಮೂಲಕ ದೊಡ್ಡ ಅಪಘಾತ ದಿಂದ ಪಾರಾಗಿದೆ. ಲೊಕೊ ಪೈಲಟ್‌ನ ಮುಂಜಾಗೂಕತೆ ಹಾಗೂ ತಿಳಿವಳಿಕೆಯಿಂದ ರೈಲು ನಿಯಂತ್ರಿಸಿ ಆಗಬಹುದಾದ ಭಾರಿ ಅಪಾಯವನ್ನು ತಡೆದಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಈ ಕುರಿತು ತನಿಖೆ ನಡೆಸಲು ರೈಲ್ವೆ ಆಡಳಿತ ನಿರ್ಧರಿಸಿದ್ದು, ಈ ಸಂಬಂಧ ಪರಿಶೀಲನೆ ನಡೆಸಲು ಮೂವರು ಎಂಜಿನಿಯರ್‌ಗಳ ತಂಡವನ್ನು ರಚಿಸಲಾಗಿದೆ.

rail-track-melted-in-lucknow-nigohan-railway-station-
ಬಿಸಿಲಿನ ತಾಪಕ್ಕೆ ಕರಗಿತಾ ರೈಲು ಹಳಿ..? ತಪ್ಪಿದ ಮಹಾ ದುರಂತ.. ಮೂವರು ಎಂಜಿನಿಯರ್​​ಗಳಿಂದ ತನಿಖೆ!

ಮೂವರು ಇಂಜಿನಿಯರ್‌ಗಳು ಹಳಿ ಮೂಲಕ ಹಾದು ಹೋಗುವ ರೈಲನ್ನು ಪರಿಶೀಲಿಸುತ್ತಿದ್ದಾರೆ. ಇದಕ್ಕೆ ಯಾರು ಹೊಣೆ ಮತ್ತು ನಿಜವಾದ ಕಾರಣ ಏನು ಎಂಬುದಕ್ಕೆ ಬುಧವಾರದ ವೇಳೆಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಸೋಮವಾರ ಇಂಜಿನಿಯರ್‌ಗಳ ತಂಡ ಹಳಿಗಳನ್ನು ಪರಿಶೀಲಿಸಿದ ಬಳಿಕ ಸ್ಟೇಷನ್‌ ಮಾಸ್ಟರ್‌ ಅವರನ್ನು ಈ ಬಗ್ಗೆ ಪ್ರಶ್ನಿಸಿದೆ. ವಿಚಾರಣಾ ತಂಡವು ಈಗ ನೀಲಾಂಚಲ್ ಎಕ್ಸ್‌ಪ್ರೆಸ್‌ನ ಲೊಕೊ ಪೈಲಟ್ ಮತ್ತು ಗಾರ್ಡ್‌ಗಳನ್ನು ವಿಚಾರಣೆ ನಡೆಸಲಿದೆ ಎಂಬ ಮಾಹಿತಿ ದೊರೆತಿದೆ.

ಜಗನ್ನಾಥ ಪುರಿಯಿಂದ ಆನಂದ್ ವಿಹಾರ್‌ಗೆ ಹೋಗುವ ನೀಲಾಂಚಲ್ ಎಕ್ಸ್‌ಪ್ರೆಸ್ ನಿಗೋಹಾನ್ ರೈಲು ನಿಲ್ದಾಣದ ಲೂಪ್ ಲೈನ್‌ನಿಂದ ಜೂನ್​ 17 ಶನಿವಾರ ಮಧ್ಯಾಹ್ನ 2.30 ರ ಸುಮಾರಿಗೆ ಹಳಿಗಳ ಮೂಲಕ ಸಂಚರಿಸಿತ್ತು. ಈ ವೇಳೆ ಲೊಕೊ ಪೈಲಟ್‌ಗೆ ಹಲವು ಬಾರಿ ನಡುಕ ಉಂಟಾದ ಅನುಭವವಾಗಿದೆ. ಲೊಕೊ ಪೈಲಟ್ ರೈಲು ನಿಲ್ಲಿಸಿದಾಗ ವಕ್ರವಾದ ಹಳಿಗಳನ್ನು ಕಂಡು ಬೆಚ್ಚಿಬಿದ್ದರು. ಈ ಘಟನೆಯ ನಂತರ ಉತ್ತರ ರೈಲ್ವೆಯ ಡಿಆರ್‌ಎಂ ತನಿಖೆಗೆ ಆದೇಶಿಸಿದ್ದರು. ಇಂಜಿನಿಯರಿಂಗ್, ಮೆಕ್ಯಾನಿಕಲ್, ಆಪರೇಟಿಂಗ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲಾಗಿದ್ದು, ತನಿಖೆಯಲ್ಲಿ ತಪ್ಪಿತಸ್ಥ ರೈಲ್ವೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

rail-track-melted-in-lucknow-nigohan-railway-station-due-to-scorching-heat-probe-started

ಭಾರಿ ಅಪಾಯದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ, ತನಿಖೆಗೆ ಆದೇಶಿಸಿದ್ದು, ಪರಿಶೀಲನಾ ತಂಡದ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು ಟ್ರ್ಯಾಕ್ ಪರಿಶೀಲನೆಯಲ್ಲೂ ನಿರ್ಲಕ್ಷ್ಯ ವಹಿಸಿರುವ ಬಗ್ಗೆಯೂ ತನಿಖಾ ಸಮಿತಿ ತಂಡ ತನಿಖೆ ನಡೆಸುತ್ತಿದೆ.

ಉತ್ತರ ರೈಲ್ವೆ ಲಖನೌ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಎಸ್‌ಕೆ ಸಪ್ರಾ ಅವರ ಸೂಚನೆಯ ಮೇರೆಗೆ ನಿಗೋಹಾ ರೈಲು ನಿಲ್ದಾಣವನ್ನು ತನಿಖಾ ಸಮಿತಿ ಪರಿಶೀಲಿಸಲಿದೆ. ನಂತರ ಲೂಪ್ ಲೈನ್‌ನ ತನಿಖೆ ನಡೆಸುವ ಎಂಜಿನಿಯರಿಂಗ್ ವಿಭಾಗದ ತಂಡವು ತನ್ನ ವರದಿಯನ್ನು ಬುಧವಾರ ಡಿಆರ್‌ಎಂಗೆ ಸಲ್ಲಿಸಲಿದೆ.

ಸುರಕ್ಷತೆ ದೃಷ್ಟಿಯಿಂದ ಲೂಪ್ ಲೈನ್ ತನಿಖೆ ಆರಂಭಿಸಲಾಗಿದೆ ಎಂದಿರುವ ಅವರು, ಗೂಡ್ಸ್ ರೈಲು ಮುಖ್ಯ ಮಾರ್ಗದಲ್ಲಿ ನಿಲುಗಡೆ ಮಾಡಿದ ನಂತರ ನೀಲಾಂಚಲ್ ಎಕ್ಸ್‌ಪ್ರೆಸ್ ರೈಲನ್ನು ಲೂಪ್ ಲೈನ್‌ಗೆ ಏಕೆ ವರ್ಗಾಯಿಸಲಾಯಿತು ಎಂದು ಪರಿಶೀಲಿಸಲಾಗುತ್ತಿದೆ. ಈ ಲೂಪ್‌ಲೈನ್‌ನ ಟ್ರ್ಯಾಕ್ ಏಕೆ ತನಿಖೆ ಮಾಡಲಾಗಿಲ್ಲ ಎಂಬ ಬಗ್ಗೆ ಪರಿಶೀಲನಾ ತಂಡ ತನಿಖೆ ಮಾಡಲಿದ್ದು, ಆ ಬಳಿಕ ಸಮಗ್ರ ವರದಿಯನ್ನು ಸಲ್ಲಿಸಲಿದೆ ಎಂದು ಡಿಆರ್​ಎಂದ ಎಸ್​ ಕೆ ಸಪ್ರಾ ತಿಳಿಸಿದ್ದಾರೆ.

ಇದನ್ನು ಓದಿ:500 ಏರ್‌ಬಸ್ ವಿಮಾನ ಖರೀದಿಗೆ ಮುಂದಾದ ಇಂಡಿಗೋ; ವಿಮಾನಯಾನ ಕ್ಷೇತ್ರದಲ್ಲಿ ಅತಿ ದೊಡ್ಡ ಡೀಲ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.