ETV Bharat / bharat

ತನಿಖಾ ಸಂಸ್ಥೆಗಳಿಂದ ದಾಳಿ ನಡೆಸುವುದು ಬಿಜೆಪಿ ಕಾರ್ಯವಿಧಾನ: ರಾಹುಲ್ ವ್ಯಂಗ್ಯ

ತಮಿಳುನಾಡು ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ನಾಲ್ಕು ದಿನಗಳು ಮಾತ್ರ ಬಾಕಿಯಿದೆ. ಇತ್ತ ಡಿಎಂಕೆ ನಾಯಕರಿಗೆ ಆದಾಯ ತೆರಿಗೆ ಇಲಾಖೆ ಶಾಕ್ ಮೇಲೆ ಶಾಕ್​ ನೀಡುತ್ತಿದ್ದು, ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

author img

By

Published : Apr 2, 2021, 10:52 PM IST

rahul gandhi
ರಾಹುಲ್ ಗಾಂಧಿ

ನವದೆಹಲಿ: ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಬೇರೆ ಪಕ್ಷಗಳ ನಾಯಕರ ನಿವಾಸಗಳ ಮೇಲೆ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುವುದು ಬಿಜೆಪಿಯ ಕಾರ್ಯವಿಧಾನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಈ ಬಗ್ಗೆ ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದು, ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಪುತ್ರಿ ಸೆಂಥಮರೈ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಖಂಡಿಸಿದ್ದು, ಈ ದಾಳಿಯ ಹಿಂದೆ ರಾಜಕೀಯ ಉದ್ದೇಶವಿದೆ ಎಂದಿದ್ದಾರೆ.

ಇದನ್ನೂ ಓದಿ: ಹೆತ್ತು ಸಲುಹಿದ ಹೆತ್ತವ್ವನ ಕಳೆಬರ ಹೊತ್ತು ಹೆಣ್ಮಕ್ಕಳಿಂದ್ಲೇ ಅಗ್ನಿಸ್ಪರ್ಶ!

ರಾಹುಲ್ ಗಾಂಧಿ ಜೊತೆಗೆ ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷಗಳು ಚುನಾವಣಾ ಪ್ರಚಾರವನ್ನು ಪೂರ್ಣಗೊಳಿಸುತ್ತಿದ್ದು, ಮತದಾನದ ದಿನಕ್ಕಾಗಿ ಕಾಯುತ್ತಿವೆ. ಈ ವೇಳೆಯಲ್ಲಿ ರಾಜಕೀಯ ಉದ್ದೇಶದಿಂದಲೇ ಬಿಜೆಪಿ ಆದಾಯ ತೆರಿಗೆ ಇಲಾಖೆಯಿಂದ ದಾಳಿ ಮಾಡಿಸಿದೆ ಎಂದು ಆರೋಪಿಸಿದ್ದಾರೆ.

ಡಿಎಂಕೆ ಪಕ್ಷವು ಐಟಿ ದಾಳಿಯಿಂದ ಹೆದರುವ ಪಕ್ಷವಲ್ಲ ಎಂದು ದುರೈಮುರುಗನ್ ಹೇಳಿದ್ದು, ಈ ಹಿಂದೆಯೂ ಪಕ್ಷವು ಇಂಥಹ ನಿದರ್ಶನಗಳನ್ನು ಎದುರಿಸಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.