ಖನೌಜ್: ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಅವರ ಮನೆಯ ಮೇಲಿನ ದಾಳಿ ಮಂಗಳವಾರವೂ ಮುಂದುವರಿದಿದ್ದು, ಮನೆಯಲ್ಲಿ ಸಿಕ್ಕ ಹಣದ ಕಂತೆಗಳ ಎಣಿಕೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿಯನ್ನು ಕರೆಸಲಾಗಿದೆ. ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯದ ಅಧಿಕಾರಿಗಳ ಸಮ್ಮುಖದಲ್ಲೇ ಈ ಎಣಿಕೆ ಕಾರ್ಯ ನಡೆಯುತ್ತಿದೆ.
ಜಿಎಸ್‌ಟಿ ವಂಚನೆ ಆರೋಪದಡಿ ಈ ದಾಳಿ ನಡೆದಿದೆ. ಅಲ್ಲದೇ, ದಾಳಿಯಲ್ಲಿ 177 ಕೋಟಿ ರೂಪಾಯಿ ನಗದು, 23 ಕೆ.ಜಿ. ಬಂಗಾರ ಮತ್ತು 600 ಕೆ.ಜಿ. ಸುಗಂಧ ದ್ರವ್ಯವನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರವಷ್ಟೇ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸಿ, ಡಿಜಿಜಿಐ ಜೊತೆ ತನಿಖೆಯಲ್ಲಿ ಕೈಜೋಡಿಸಿದ್ದು, ಉದ್ಯಮಿಯ ಮನೆಯಲ್ಲಿ ಸಿಕ್ಕ ಚಿನ್ನದ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಿದೆ.
ಮಂಗಳವಾರ ಮುಂದುವರಿದ ದಾಳಿಯಲ್ಲಿ 2.40 ಕೋಟಿ ರೂಪಾಯಿ ನದು ಮತ್ತು 500 ಬಾಟಲ್ ಸುಗಂಧ ದ್ರವ್ಯವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಸಿಲಿಂಡರ್ ಸ್ಫೋಟ.. ಒಂದೇ ಕುಟುಂಬದ ಐವರು ಮಕ್ಕಳು ಸಜೀವದಹನ