ETV Bharat / bharat

"ಸತ್ಯವನ್ನು ಮಾತನಾಡಿದ್ದಕ್ಕಾಗಿ ನಾನು ಯಾವುದೇ ಬೆಲೆ ತೆರಲು ಸಿದ್ಧ": ರಾಹುಲ್​ ಗಾಂಧಿ - ಮಾನನಷ್ಟ ಮೊಕದ್ದಮೆ ಪ್ರಕರಣ

ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್​ ಗಾಂಧಿ ಅವರಿಗೆ ತಮ್ಮ ಅಧಿಕೃತ ಗೃಹ ತುಘಲಕ್ ಲೇನ್ ಬಂಗಲೆಯನ್ನು ಶನಿವಾರ ಖಾಲಿ ಮಾಡಿದರು.

rahul-has-no-attachment-to-post-or-house-sticks-to-principles-says-congress
"ಸತ್ಯವನ್ನು ಮಾತನಾಡಿದ್ದಕ್ಕಾಗಿ ನಾನು ಯಾವುದೇ ಬೆಲೆ ತೆರಲು ಸಿದ್ಧ": ರಾಹುಲ್​ ಗಾಂಧಿ
author img

By

Published : Apr 22, 2023, 10:00 PM IST

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ತಮ್ಮ ಅಧಿಕೃತ ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡಿದ್ದು, "ಸತ್ಯವನ್ನು ಮಾತನಾಡಿದ್ದಕ್ಕಾಗಿ ಯಾವುದೇ ಬೆಲೆ ತೆರಲು ಸಿದ್ಧ" ಎಂದು ಹೇಳಿದ್ದಾರೆ. ಮಾನನಷ್ಟ ಮೊಕದ್ದಮೆ ಪ್ರಕರಣದ ಶಿಕ್ಷೆಗೆ ಗುರಿಯಾದ ನಂತರ ಸಂಸದ ಸ್ಥಾನದಿಂದ ಅವರನ್ನು ಅನರ್ಹಗೊಳಿಸಲಾಗಿತ್ತು.

ಮನೆ ಹಸ್ತಾಂತರದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ರಾಹುಲ್​ ಗಾಂಧಿ "ಭಾರತದ ಜನರು 19 ವರ್ಷಗಳ ಕಾಲ ನನಗೆ ಈ ಮನೆಯನ್ನು ನೀಡಿದ್ದಾರೆ, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಸತ್ಯವನ್ನು ಮಾತನಾಡುವುದಕ್ಕೆ ಬೆಲೆಯಾಗಿದೆ. "ಸತ್ಯವನ್ನು ಮಾತನಾಡಿದ್ದಕ್ಕಾಗಿ ನಾನು ಯಾವುದೇ ಬೆಲೆ ತೆರಲು ಸಿದ್ಧ" ಎಂದು ಹೇಳಿದರು.

  • सच्चाई बोलने की कीमत है आज कल!

    वो जो भी कीमत होगी, मैं चुकाता जाऊंगा। pic.twitter.com/1ZN6rbGFIu

    — Rahul Gandhi (@RahulGandhi) April 22, 2023 " class="align-text-top noRightClick twitterSection" data=" ">

"ಮೋದಿ ಉಪನಾಮ" ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ದೋಷಾರೋಪಣೆ ಮತ್ತು ಎರಡು ವರ್ಷಗಳ ಶಿಕ್ಷೆಗೆ ಗುರಿಯಾದ ಬಳಿಕ ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ನಂತರ ಏಪ್ರಿಲ್ 22 ರೊಳಗೆ ರಾಹುಲ್​ ಗಾಂಧಿ ಅವರು ಮನೆ ಖಾಲಿ ಮಾಡುವಂತೆ ಮಾರ್ಚ್ 27ರಂದು ನೋಟಿಸ್ ನೀಡಲಾಗಿತ್ತು. ಮೂಲಗಳ ಪ್ರಕಾರ, ಈಗಾಗಲೇ ಕೆಲವು ವಸ್ತುಗಳನ್ನು ಅಧಿಕೃತ ನಿವಾಸದಿಂದ ಜನಪಥ್‌ನಲ್ಲಿರುವ ಅವರ ತಾಯಿ ಸೋನಿಯಾ ಗಾಂಧಿಯವರ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ರಾಹುಲ್‌ ಅವರಿಗೆ ತುಘಲಕ್ ಲೇನ್ ಬಂಗಲೆಯನ್ನು 2004ರಲ್ಲಿ ಮೊದಲ ಬಾರಿ ಲೋಕಸಭೆ ಸದಸ್ಯರಾದ ಅವರಿಗೆ ಅಧಿಕೃತ ಬಂಗಲೆಯನ್ನು ನೀಡಲಾಯಿತು. ರಾಹುಲ್ ಅವರು 2019 ರವರೆಗೆ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಎರಡು ಕಡೆಯಿಂದ ಸ್ಪರ್ಧಿಸಿದ್ದ ರಾಹುಲ್​ ಗಾಂಧಿ ಅವರು ಕೇಂದ್ರ ಸಚಿವೆ ಸ್ಮೃತಿ ಇರಾಣಿ ವಿರುದ್ಧ ಅಮೇಥಿಯಲ್ಲಿ ಸೋತು ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಜಯ ಗಳಿಸಿದ್ದರು.

ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, "ಅವರು ನಿಮ್ಮನ್ನು ಮನೆಯಿಂದ ಹೊರಹಾಕಬಹುದು, ಆದರೆ ನಮ್ಮೆಲ್ಲರ ಮನೆ ಮತ್ತು ಹೃದಯದಲ್ಲಿ ನಿಮಗೆ ಯಾವಾಗಲೂ ಸ್ಥಾನವಿದೆ, ರಾಹುಲ್ ಜೀ, ಇಂತಹ ಸನ್ನವೇಶಗಳು ಜನರ ಪರ ಧ್ವನಿ ಎತ್ತದಂತೆ ನಿಮ್ಮನ್ನು ತಡೆಯುವುದಿಲ್ಲ ಎಂದು ನಮಗೆ ತಿಳಿದಿದೆ ಎಂದು ಹೇಳಿದರು. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಮಾತನಾಡಿ, ರಾಹುಲ್ ಗಾಂಧಿಗೆ ಹುದ್ದೆಯ ಬಗ್ಗೆಯಾಗಲಿ, ಸರ್ಕಾರಿ ಭವನದ ಬಗ್ಗೆಯಾಗಲಿ ಚಿಂತೆಯಿಲ್ಲ. ಎಲ್ಲವನ್ನೂ ಪಣಕ್ಕಿಟ್ಟು ತಮ್ಮ ತತ್ವಗಳಲ್ಲಿ ರಾಜಿ ಮಾಡಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

ಕಳೆದ ಮಾರ್ಚ್ 28 ರಂದು ರಾಹುಲ್ ಗಾಂಧಿ ನಿಯಮಗಳನ್ನು ಪಾಲಿಸುತ್ತೇನೆ ಎಂದು ಲಿಖಿತವಾಗಿ ಉತ್ತರಿಸಿ 2004 ರಿಂದ ತುಘಲಕ್ ಲೇನ್ ಬಂಗಲೆಯ ಬಗ್ಗೆ "ಸಂತೋಷದ ನೆನಪುಗಳನ್ನು" ಹೊಂದಿದ್ದೇನೆ ಎಂದು ಹೇಳಿದ್ದರು. ಪ್ರಧಾನಿ ಮೋದಿ ಮತ್ತು ಅವರ ಉದ್ಯಮಿ ಸ್ನೇಹಿತ ಗೌತಮ್ ಅದಾನಿ ನಡುವಿನ ಸಂಬಂಧದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದರಿಂದ ರಾಹುಲ್ ಅವರನ್ನು ಗುರಿಯಾಗಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಬೌದ್ಧ ಧರ್ಮ ಮರುಹುಟ್ಟು ಪಡೆದಿದೆ: ಮೋದಿ ಶ್ಲಾಘಿಸಿದ ದಕ್ಷಿಣ ಕೊರಿಯಾದ ಬೌದ್ಧ ಸನ್ಯಾಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.