ETV Bharat / bharat

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ವೇಳೆ ಅಮಿತ್​ ಶಾ v/s ರಾಹುಲ್​ ಗಾಂಧಿ ಒಬಿಸಿ ಮೀಸಲು ವಾಗ್ಯುದ್ಧ - rahul gandhi vs amit shah on obcs quota

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಚರ್ಚೆಯ ವೇಳೆ ರಾಹುಲ್​ ಗಾಂಧಿ ಮತ್ತು ಅಮಿತ್​ ಶಾ ಮಧ್ಯೆ ಹಿಂದುಳಿದ ವರ್ಗಗಳ ಮೀಸಲು ಬಗ್ಗೆ ಪರಸ್ಪರ ವಾಗ್ಯುದ್ಧ ನಡೆಯಿತು.

Etv Bharat
Etv Bharat
author img

By ETV Bharat Karnataka Team

Published : Sep 20, 2023, 11:02 PM IST

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯ ವೇಳೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಸಂಸತ್ತಿನಲ್ಲಿ ವಾಗ್ಯುದ್ಧ ನಡೆಯಿತು. ಮಸೂದೆಯಲ್ಲಿ ಒಬಿಸಿಗಳಿಗೆ ನೀಡಿರುವ ಆದ್ಯತೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸುವಾಗ ಸದನ ಕಾವೇರಿತ್ತು.

ಮೀಸಲಾತಿ ಚರ್ಚೆಯ ವೇಳೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಸರ್ಕಾರದಲ್ಲಿ ಒಬಿಸಿಗಳಿಗೆ ಎಷ್ಟು ಪ್ರತಿಶತ ಅವಕಾಶ ನೀಡಲಾಗಿದೆ. ಹಿಂದುಳಿದ ವರ್ಗವನ್ನು ಸರ್ಕಾರ ಮೂಲೆಗುಂಪು ಮಾಡಿದೆ ಎಂದೆಲ್ಲಾ ಟೀಕಕಾಪ್ರಹಾರ ನಡೆಸಿದರು. ಇದಕ್ಕೆ ಪ್ರತಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿಟ್ಟ ಉತ್ತರ ನೀಡಿದರು.

  • "There are 90 secretaries of the Govt of India...How many of the 90 people come from the OBC community? I was shocked and shattered by the answer...I want to answer this...Only three secretaries belong to the OBC community...," says Congress MP Rahul Gandhi in Lok Sabha. pic.twitter.com/N2udsLYjCD

    — ANI (@ANI) September 20, 2023 " class="align-text-top noRightClick twitterSection" data=" ">

ರಾಹುಲ್​ ಪ್ರಶ್ನೆಯೇನು?: ಮಹಿಳಾ ಮೀಸಲಾತಿ ಕುರಿತ ಚರ್ಚೆಯ ವೇಳೆ ರಾಹುಲ್ ಜಾತಿ ಗಣತಿಯನ್ನು ಪ್ರಸ್ತಾಪಿಸಿದರು. ದೇಶದಲ್ಲಿ ಆದಷ್ಟು ಬೇಗ ಜಾತಿ ಗಣತಿಯನ್ನು ನಡೆಸಬೇಕು ಎಂದು ಆಗ್ರಹಿಸಿದರು. ದೇಶದಲ್ಲಿರುವ ಸರ್ಕಾರ ಸೆಕ್ರೆಟರಿಗಳ ಮೂಲಕ ನಡೆಯುತ್ತಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ 90 ಸೆಕ್ರೆಟರಿಗಳಲ್ಲಿ ಕೇವಲ ಮೂವರು ಮಾತ್ರ ಒಬಿಸಿ ಸಮುದಾಯದವರಾಗಿದ್ದಾರೆ. ಇದ ಆಘಾತಕಾರಿ ಸಂಗತಿ ಎಂದು ಹೇಳಿದರು.

ದೇಶದಲ್ಲಿ ಎಷ್ಟು ಹಿಂದುಳಿದ ವರ್ಗದವರಿದ್ದಾರೆ. ಎಷ್ಟು ದಲಿತರಿದ್ದಾರೆ. ಆದಿವಾಸಿಗಳು ಎಷ್ಟು ಎಂಬ ಪ್ರಶ್ನೆಗೆ ಜಾತಿ ಎಣಿಕೆಯೊಂದೇ ಉತ್ತರ ನೀಡಬಲ್ಲದು. ಹೀಗಾಗಿ ಆದಷ್ಟು ಬೇಗ ಜಾತಿ ಗಣತಿಯನ್ನು ಮಾಡಿಸಬೇಕು. ಅದರ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಬಾರಿ ನಮ್ಮ ಸರ್ಕಾರ ಬರಲಿದೆ. ಆಗ ನಾವು ಮಾಡಿಸುತ್ತೇವೆ. ಅದೆಲ್ಲಕ್ಕೂ ಮೊದಲು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ ಎಂದು ರಾಹುಲ್​ ಗುಡುಗಿದರು.

ರಾಹುಲ್​ಗೆ ಅಮಿತ್ ಶಾ ಕೌಂಟರ್: ರಾಹುಲ್ ಹೇಳಿಕೆಗೆ ಸದನದಲ್ಲೇ ಖಡಕ್​ ಉತ್ತರ ನೀಡಿದ ಗೃಹ ಸಚಿವ ಅಮಿತ್ ಶಾ ಅವರು, ಸೆಕ್ರೆಟರಿಗಳಿಂದ ದೇಶವನ್ನು ನಡೆಸಲು ಸಾಧ್ಯ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಈ ದೇಶದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂಬುದು ನನ್ನ ಭಾವನೆ. ಹಿಂದುಳಿದವರ ಬಗ್ಗೆ ಮಾತನಾಡುವ ಕಾಂಗ್ರೆಸ್​ಗೆ ನಮ್ಮಲ್ಲಿ ಎಷ್ಟು ಒಬಿಸಿ ಜನರಿದ್ದಾರೆ ಎಂಬುದು ಗೊತ್ತಿಲ್ಲ. ನಾವು ಕೊಟ್ಟ ಪ್ರಾತಿನಿಧ್ಯದಷ್ಟೂ ಅವರು ನೀಡಿಲ್ಲ ಎಂದು ತೀಕ್ಷ್ಣ ಮಾತುಗಳಿಂದ ತಿವಿದರು.

ಬಿಜೆಪಿಯ ಸಂಸದರ ಪೈಕಿ 85 ಮತ್ತು ಸಚಿವರ ಪೈಕಿ 29 ಸಚಿವರು ಹಿಂದುಳಿದ ವರ್ಗದವರಿದ್ದಾರೆ. ಒಬಿಸಿಗಳ ಪರ ಮಾತನಾಡುವ ವ್ಯಕ್ತಿಗಳು ಒಮ್ಮೆಯಾದರೂ, ಒಬಿಸಿ ಸಮುದಾಯದ ವ್ಯಕ್ತಿಯನ್ನು ದೇಶದ ಪ್ರಧಾನಿಯನ್ನಾಗಿ ಮಾಡಿಲ್ಲ. ಆದರೆ, ಬಿಜೆಪಿ ಅದನ್ನು ಮಾಡಿ ತೋರಿಸಿದೆ. ಪ್ರಶ್ನಿಸುವ ಹಕ್ಕು ಕಾಂಗ್ರೆಸ್​ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮಹಿಳಾ ಮೀಸಲಾತಿಯಲ್ಲೂ ರಾಜಕೀಯ: ಮಹಿಳಾ ಮೀಸಲಾತಿ ಮಸೂದೆಯಲ್ಲೂ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರು. ಮಹಿಳಾ ಸಬಲೀಕರಣವನ್ನು ಪ್ರತಿಪಕ್ಷಗಳು ರಾಜಕೀಯ ಅಜೆಂಡಾ ಮಾಡಿಕೊಂಡಿವೆ. ಆದರೆ, ಬಿಜೆಪಿ ಅವರ ಅಭ್ಯುದಯಕ್ಕಾಗಿ ಕಾನೂನು ತರಲು ಹೊರಟಿದೆ. 2024ರ ಚುನಾವಣೆಯ ನಂತರ ಜನಗಣತಿ ಮತ್ತು ಕ್ಷೇತ್ರಗಳ ಪುನರ್​ ವಿಂಗಡಣೆ ಪ್ರಕ್ರಿಯೆಯನ್ನು ತಕ್ಷಣವೇ ನಡೆಸಲಿದೆ. ಮಹಿಳಾ ಮೀಸಲಾತಿ ಮಸೂದೆಯ ಪ್ರಕ್ರಿಯೆಯನ್ನೂ ಪ್ರಾರಂಭಿಸಲಿ ಎಂದು ಸದನಕ್ಕೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಲೋಕಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ.. 454 ಮತಗಳು ಪರ, 2 ಮತ ವಿರುದ್ಧ ಚಲಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.