ETV Bharat / bharat

ಆಪ್ತರು ಸೇರಿ 50 ಮಂದಿಯನ್ನು ಟ್ವಿಟರ್​ನಿಂದ ಅನ್​ಫಾಲೋ ಮಾಡಿದ ರಾಹುಲ್​ ಗಾಂಧಿ! - ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇತ್ತೀಚಿನ ಸುದ್ದಿ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಆಪ್ತರು ಸೇರಿದಂತೆ ಸುಮಾರು 50 ಜನರನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಅನ್​ಫಾಲೋ ಮಾಡಿದ್ದಾರೆ. ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

rahul gandhi
rahul gandhi
author img

By

Published : Jun 2, 2021, 8:31 AM IST

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಆಪ್ತರು, ಕೆಲವು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಪತ್ರಕರ್ತರು ಸೇರಿದಂತೆ ಸುಮಾರು 50 ಜನರನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಅನ್​ಫಾಲೋ ಮಾಡಿದ್ದಾರೆ.

ಟ್ವಿಟರ್​ನಲ್ಲಿ ಬಹಳ ಸಕ್ರಿಯವಾಗಿರುವ ಮತ್ತು ತಮ್ಮ ದೃಷ್ಟಿಕೋನವನ್ನು ತಿಳಿಸಲು ಬಳಸುವ ರಾಹುಲ್​ ಗಾಂಧಿ ಸುಮಾರು 18.8 ಮಿಲಿಯನ್ ಫಾಲಾವರ್ಸ್​ ಹೊಂದಿದ್ದು, 224 ಜನರನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಏಕಾಏಕಿಯಾಗಿ ಸುಮಾರು 50 ಜನರನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಅನ್​ಫಾಲೋ ಮಾಡಲು ಕಾರಣ ಮಾತ್ರ ತಿಳಿದಿಲ್ಲ. ರಾಹುಲ್​ ಟ್ವಿಟರ್​ ಮೂಲಕ ಹೆಚ್ಚಾಗಿ ರಾಜಕೀಯ ಮುಖಂಡರನ್ನು ಫಾಲೋ ಮಾಡುತ್ತಾರೆ.

ಇನ್ನು ಟ್ವಿಟರ್​ನಲ್ಲಿ ದೇಶದ ಜಿಡಿಪಿ ಮತ್ತು ನಿರುದ್ಯೋಗ ಸಮಸ್ಯೆ ಬಗ್ಗೆ ದನಿ ಎತ್ತಿರುವ ರಾಹುಲ್​, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ ಸಮಸ್ಯೆಗೆ ಪ್ರಧಾನಮಂತ್ರಿಗಳ ನಿರ್ಲಕ್ಷ್ಯ ಕಾರಣ ಎಂದು ಪೋಸ್ಟ್​ ಮಾಡಿದ್ದಾರೆ. ಇದರೊಂದಿಗೆ 2014ರಿಂದ ಯುವಕರಲ್ಲಿ ನಿರುದ್ಯೋಗ ಹೆಚ್ಚಳವನ್ನು ತೋರಿಸುವ ಗ್ರಾಫ್ ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.