ನವದೆಹಲಿ : 'ಕೋವಿಡ್ ಟೂಲ್‌ಕಿಟ್' ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್ ಟ್ವಿಟರ್‌ನ ಕಚೇರಿಗಳ ಮೇಲೆ ದಾಳಿ ನಡೆಸಿದ ಮರುದಿನವೇ ನಾವು ಸತ್ಯಕ್ಕೆ ಹೆದರುವುದಿಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೂಲ್‌ಕಿಟ್ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಟೂಲ್‌ಕಿಟ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಮತ್ತು ಗುರುಗ್ರಾಮ್‌ನ ಟ್ವಿಟರ್ ಇಂಡಿಯಾ ಕಚೇರಿಗಳ ಮೇಲೆ ಸೋಮವಾರ ಸಂಜೆ ದೆಹಲಿ ಪೊಲೀಸರ ವಿಶೇಷ ಸೆಲ್ ತಂಡ ದಾಳಿ ನಡೆಸಿದೆ.
-
Truth remains unafraid.
— Rahul Gandhi (@RahulGandhi) May 25, 2021 " class="align-text-top noRightClick twitterSection" data="
सत्य डरता नहीं।#Toolkit
">Truth remains unafraid.
— Rahul Gandhi (@RahulGandhi) May 25, 2021
सत्य डरता नहीं।#ToolkitTruth remains unafraid.
— Rahul Gandhi (@RahulGandhi) May 25, 2021
सत्य डरता नहीं।#Toolkit
ಪ್ರಕರಣ ಹಿನ್ನೆಲೆ
ಕೋವಿಡ್-19 ನಿರ್ವಹಣೆ ಸಂಬಂಧ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಟೂಲ್‌ಕಿಟ್ ತಯಾರಿಸಿ, ಜನರ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಸಂಬಿತ್ ಪಾತ್ರಾ ಟ್ವೀಟ್ ಮಾಡಿದ್ದರು.
ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಉಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬಿಜೆಪಿ 'ನಕಲಿ ಟೂಲ್‌ಕಿಟ್' ತಯಾರಿಸಿದೆ ಎಂದು ಆರೋಪಿಸಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಹಿರಿಯ ನಾಯಕರಾದ ಬಿ.ಎಲ್. ಸಂತೋಷ, ಸ್ಮೃತಿ ಇರಾನಿ, ಸಂಬಿತ ಪಾತ್ರಾ ಸೇರಿದಂತೆ ಕೆಲವರ ವಿರುದ್ಧ ದೆಹಲಿಯಲ್ಲಿ ಎಫ್ಐಆರ್ ದಾಖಲಿಸಿದೆ.
ಅಲ್ಲದೇ ಸಂಬಿತ್ ಪಾತ್ರಾ ಮಾಡಿರುವ ಟ್ವೀಟ್‌ನ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' (ತಿರುಚಲ್ಪಟ್ಟಿರುವ ಮೀಡಿಯಾ) ಎಂದು ಟ್ವಿಟರ್ ಲೇಬಲ್ ಮಾಡಿತ್ತು.
ಈ ವಿಷಯವು ಕಾನೂನು ಜಾರಿ ಸಂಸ್ಥೆಯ ಮುಂದೆ ಬಾಕಿ ಇರುವುದರಿಂದ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್‌ನ ತೆಗೆದು ಹಾಕುವಂತೆ ಸರ್ಕಾರ ಟ್ವಿಟರ್ಗೆ ಪತ್ರ ಬರೆದಿದೆ. ಈ ವಿಷಯವು ತನಿಖೆಯಲ್ಲಿರುವ ವೇಳೆ ಸಾಮಾಜಿಕ ಮಾಧ್ಯಮ ವೇದಿಕೆಯೊಂದು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಓದಿ: 'ವಾಕ್ ಸ್ವಾತಂತ್ರ್ಯದ ಕೊಲೆ ಯತ್ನ' - ಟ್ವಿಟರ್ ಕಚೇರಿ ಮೇಲಿನ 'ದಾಳಿ'ಗೆ ಕಾಂಗ್ರೆಸ್ ಖಂಡನೆ