ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಅರ್ಥಹೀನ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
"ಕೊರೊನಾ ವಿರುದ್ಧ ಹೋರಾಡಲು ನಿಮಗೆ ಸರಿಯಾದ ಉದ್ದೇಶ, ನೀತಿ, ದೃಢ ನಿಶ್ಚಯದ ಅಗತ್ಯವಿದೆ. ಇದನ್ನು ಬಿಟ್ಟು ತಿಂಗಳಿಗೊಮ್ಮೆ ಬಂದು ಅರ್ಥಹೀನ ಮಾತುಗಳನ್ನಾಡುವುದಲ್ಲ" ಎಂದು ರಾಗಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
-
कोरोना से लड़ने के लिए चाहिए-
— Rahul Gandhi (@RahulGandhi) May 30, 2021 " class="align-text-top noRightClick twitterSection" data="
सही नीयत, नीति, निश्चय।
महीने में एक बार निरर्थक बात नहीं!
">कोरोना से लड़ने के लिए चाहिए-
— Rahul Gandhi (@RahulGandhi) May 30, 2021
सही नीयत, नीति, निश्चय।
महीने में एक बार निरर्थक बात नहीं!कोरोना से लड़ने के लिए चाहिए-
— Rahul Gandhi (@RahulGandhi) May 30, 2021
सही नीयत, नीति, निश्चय।
महीने में एक बार निरर्थक बात नहीं!
ಇದನ್ನೂ ಓದಿ: ಕೋವಿಡ್ 2ನೇ ಅಲೆಯಲ್ಲಿ ಆಕ್ಸಿಜನ್ ಪೂರೈಕೆಯೇ ದೊಡ್ಡ ಸವಾಲಾಗಿತ್ತು: ಪ್ರಧಾನಿ ಮೋದಿ
ಇಂದು 77ನೇ ಆವೃತ್ತಿಯ 'ಮನ್ ಕಿ ಬಾತ್'ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ 2ನೇ ಅಲೆಯ ವೇಳೆ ದೂರದ ಪ್ರದೇಶಗಳೀಗೆ ವೈದ್ಯಕೀಯ ಆಮ್ಲಜನಕವನ್ನು ಪೂರೈಸಿದವರಿಗೆ, ಯಾಸ್ ಮತ್ತು ತೌಕ್ತೆ ಚಂಡಮಾರುತದ ಸಂದರ್ಭ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದವರನ್ನು ಶ್ಲಾಘಿಸಿದ್ದರು.