ನವದೆಹಲಿ: ಸದಾ ಒಂದಿಲ್ಲೊಂದು ವಿಚಾರಗಳನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇದೀಗ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ. 'ದೇಶದಲ್ಲಿ ಸಾರ್ವಜನಿಕರ ಧ್ವನಿ ಹತ್ತಿಕ್ಕಲಾಗುತ್ತಿದೆ. ಈ ದುರಹಂಕಾರ ಮತ್ತು ಸರ್ವಾಧಿಕಾರದ ವಿರುದ್ಧ ಸತ್ಯ ಮೇಲುಗೈ ಸಾಧಿಸಲಿದೆ' ಎಂದು ಟ್ವೀಟ್ ಮಾಡಿದ್ದಾರೆ.
-
GST पर चर्चा करो - सदन स्थगित
— Rahul Gandhi (@RahulGandhi) July 21, 2022 " class="align-text-top noRightClick twitterSection" data="
महंगाई पर चर्चा करो - सदन स्थगित
अग्निपथ पर चर्चा करो - सदन स्थगित
एजेंसियों के दुरूपयोग पर चर्चा करो - सदन स्थगित
आज सरेआम, देश की जनता की आवाज़ दबाई जा रही है। इस अहंकार और तानाशाही पर 'सत्य' भारी पड़ेगा।
">GST पर चर्चा करो - सदन स्थगित
— Rahul Gandhi (@RahulGandhi) July 21, 2022
महंगाई पर चर्चा करो - सदन स्थगित
अग्निपथ पर चर्चा करो - सदन स्थगित
एजेंसियों के दुरूपयोग पर चर्चा करो - सदन स्थगित
आज सरेआम, देश की जनता की आवाज़ दबाई जा रही है। इस अहंकार और तानाशाही पर 'सत्य' भारी पड़ेगा।GST पर चर्चा करो - सदन स्थगित
— Rahul Gandhi (@RahulGandhi) July 21, 2022
महंगाई पर चर्चा करो - सदन स्थगित
अग्निपथ पर चर्चा करो - सदन स्थगित
एजेंसियों के दुरूपयोग पर चर्चा करो - सदन स्थगित
आज सरेआम, देश की जनता की आवाज़ दबाई जा रही है। इस अहंकार और तानाशाही पर 'सत्य' भारी पड़ेगा।
ಜಿಎಸ್ಟಿ ವಿಷಯದಲ್ಲಿ ಚರ್ಚೆ ಮಾಡಿ ಎಂದರೆ ಸಂಸತ್ ಅಧಿವೇಶನ ಮುಂದೂಡಲಾಗುತ್ತದೆ. ಬೆಲೆ ಏರಿಕೆ ಬಗ್ಗೆ ಚರ್ಚಿಸಲು ಕೇಳಿದಾಗ ಕಲಾಪ ಮುಂದೂಡಲಾಗುತ್ತದೆ. ಅಗ್ನಿಪಥ್ ಯೋಜನೆ ಬಗ್ಗೆ ಚರ್ಚಿಸಲು ತಿಳಿಸಿದಾಗ ಸದನ ಮುಂದೂಡಲಾಗುತ್ತದೆ. ದೇಶದಲ್ಲಿರುವ ಏಜೆನ್ಸಿಗಳ ದುರುಪಯೋಗದ ಬಗ್ಗೆ ಚರ್ಚೆ ಮಾಡಲು ಮನವಿ ಮಾಡಿದಾಗ ಸದನ ಮುಂದೂಡಲಾಗುತ್ತದೆ. ದೇಶದ ಜನರ ಧ್ವನಿ ದಮನ ಮಾಡುವ ಕೆಲಸ ನಡೆಯುತ್ತಿದೆ. ಈ ದುರಹಂಕಾರ ಮತ್ತು ಸರ್ವಾಧಿಕಾರಿ ಸರ್ಕಾರದ ವಿರುದ್ಧ ಸತ್ಯಕ್ಕೆ ಜಯ ಸಿಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿರಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮೂರು ಗಂಟೆ ಇ.ಡಿ ವಿಚಾರಣೆ ಎದುರಿಸಿ ಹೊರ ಬಂದ ಸೋನಿಯಾ ಗಾಂಧಿ
ಕಳೆದ ಎರಡು ದಿನಗಳ ಹಿಂದೆ ಅಗತ್ಯ ಬೆಲೆ ಏರಿಕೆ, ಹಣದುಬ್ಬರ ಹಾಗೂ ಜಿಎಸ್ಟಿ ಏರಿಕೆ ವಿಚಾರವಾಗಿ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನ ವಿಚಾರಣೆಗೊಳಪಡಿಸಲಾಗಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್ ಹೆಚ್ಚು ಗಮನ ಸೆಳೆದಿದೆ.